ಗುಜರಾತ್​:ಇಂದು (ಜೂ.30) ರಾಜ್ಯದ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು, ಅಹಮದಾಬಾದ್ ಮತ್ತು ಸೂರತ್‌ನಂತಹ ನಗರಗಳಲ್ಲಿ ಮಳೆಯಿಂದ ನೀರು ನಿಂತು ರಸ್ತೆಗಳು ಜಲಾವೃತಗೊಂಡಿವೆ. ಬಿರುಸಿನ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಸೂರತ್ ಜಿಲ್ಲೆಯ ಪಲ್ಸಾನಾ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಕೇವಲ ಹತ್ತು ಗಂಟೆಗಳಲ್ಲಿ 153 ಮಿ.ಮೀ. ಮಳೆ ಸುರಿದಿದ್ದು, ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ಇದನ್ನೂ ಓದಿ:ನಯನತಾರಾ ಜತೆ ಈ ಸಿನಿಮಾ ಮಾಡಿದ್ದೇ ಒಂದು ದೊಡ್ಡ ತಪ್ಪು ಎಂದ ಖ್ಯಾತ ನಿರ್ದೇಶಕ!
ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಗುಜರಾತ್​ನ ಸೂರತ್, ಭುಜ್, ವಾಪಿ, ಭರೂಚ್ ಮತ್ತು ಅಹಮದಾಬಾದ್‌ ಪ್ರದೇಶಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಮಳೆಯಿಂದ ಟ್ರಾಫಿಕ್ ಮೇಲೆ ತೀವ್ರ ಪರಿಣಾಮ ಬೀರಿದ್ದು, ತಗ್ಗು ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಕೆಲವು ರಸ್ತೆಗಳು ಸೇರಿದಂತೆ ಅಂಡರ್‌ಪಾಸ್‌ಗಳನ್ನು ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
#WATCH| Gujarat | Heavy rain in Ahmedabad city leads to water logging at several places. Visuals from Alkapuri society.pic.twitter.com/15qHhYHwsK
— ANI (@ANI)June 30, 2024
ಸೂರತ್ ಜಿಲ್ಲೆಯ ಬಾರ್ಡೋಲಿ 135 ಮಿಮೀ, ಸೂರತ್ ನಗರ 123 ಮಿಮೀ, ಕಾಮ್ರೇಜ್ 120 ಮಿಮೀ, ಮತ್ತು ಮಹುವಾ 119 ಮಿಮೀ ಮಳೆ ದಾಖಲಾಗಿದೆ. ಇನ್ನು ವಲ್ಸಾದ್ ಜಿಲ್ಲೆಯ ವಾಪಿ 117 ಮಿಮೀ, ಓಲ್ಪಾಡ್ 116 ಮಿಮೀ, ವಲ್ಸಾದ್ ತಾಲೂಕು 102 ಮಿಮೀ, ವಲ್ಸಾದ್‌ನ ಕಪ್ರದಾ 90 ಮಿಮೀ, ನವಸಾರಿಯ ಖೇರ್ಗಾಮ್ 88 ಮಿಮೀ, ಭರೂಚ್ ತಾಲೂಕು 86 ಮಿಮೀ, ವಲ್ಸಾದ್‌ನ ಧರಂಪುರ 73 ಮಿ.ಮೀ. ಮತ್ತು ಮೊರಬಿ ತಾಲೂಕಿನಲ್ಲಿ 72 ಮಿ.ಮೀ ವರದಿಯಾಗಿದೆ. ಅಹಮದಾಬಾದ್​ನಲ್ಲಿ ಇಂದು ಬೆಳಗ್ಗೆ 6ರಿಂದ ಸಂಜೆ 4ರ ನಡುವೆ 62 ಮಿಮೀ ಮಳೆಯಾಗಿದ್ದು, ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ,(ಏಜೆನ್ಸೀಸ್).
ಜು.02 ನಟ ಗಣೇಶ್ ಹುಟ್ಟುಹುಬ್ಬ; ಅಭಿಮಾನಿಗಳಲ್ಲಿ ವಿನಂತಿ ಮಾಡಿಕೊಂಡ ಗೋಲ್ಡನ್ ಸ್ಟಾರ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty − 19 =
Remember me
