ನವದೆಹಲಿ:ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರ ಗಗನಮುಖಿಯಾಗಿದ್ದು, ಭಾನುವಾರ ಲೀಟರಿಗೆ ತಲಾ 35 ಪೈಸೆ ಹೆಚ್ಚಾಗಿದೆ. ಇದರೊಂದಿಗೆ ವಿಮಾನದ ಇಂಧನ ದರಕ್ಕಿಂತಲೂ ಪೆಟ್ರೋಲ್, ಡೀಸೆಲ್ ಶೇಕಡ 30ರಷ್ಟು ದುಬಾರಿ ಎನಿಸಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟ ಲೀಟರಿಗೆ 105.84 ರೂಪಾಯಿ ತಲುಪಿದೆ. ಮುಂಬೈನಲ್ಲಿ ಇದು 111.77 ರೂಪಾಯಿ ಆಗಿದೆ. ಡೀಸೆಲ್ ಬೆಲೆ ದೆಹಲಿಯಲ್ಲಿ ಲೀಟರಿಗೆ 94.57 ರೂ. ಮತ್ತು ಮುಂಬೈನಲ್ಲಿ 102.52 ರೂಪಾಯಿ ಆಗಿದೆ. ಈಗಾಗಲೇ 100 ರೂಪಾಯಿ ಗಡಿದಾಟಿರುವ ಪೆಟ್ರೋಲ್ ದರದ ಜತೆಗೆ ಡೀಸೆಲ್ ದರ ಕೂಡ ಈಗ ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ 100 ರೂಪಾಯಿ ಗಡಿ ದಾಟಿದೆ. ಪೆಟ್ರೋಲ್ ಮೂಲ ದರ ಲೀಟರ್​ಗೆ 66 ರೂ. ಹಾಗೂ ಡೀಸೆಲ್​ಗೆ 55 ರೂ. ಆಗಿದೆ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ತೆರಿಗೆ ಸೇರಿ ಈಗ 100 ರೂ. ಗಡಿ ದಾಟಿದೆ.
ಗ್ರಾಹಕಸ್ನೇಹಿ ಅಲ್ಲದ ದರ ಪರಿಷ್ಕರಣೆ
ಪ್ರಸ್ತುತ ಕಚ್ಚಾ ತೈಲದರ ಪ್ರತಿ ಬ್ಯಾರೆಲ್​ಗೆ 84.8 ಡಾಲರ್ (ಕಳೆದ ತಿಂಗಳು 73.51 ಡಾಲರ್ ಇತ್ತು) ಇದೆ. 2014ರಲ್ಲೂ ಕಚ್ಚಾ ತೈಲದರ 74 ಡಾಲರ್ ಆಸುಪಾಸಿನಲ್ಲೇ ಇತ್ತು. ಇನ್ನು, 1975ರಿಂದ 2010ರ ತನಕ ಪೆಟ್ರೋಲ್ ದರ ನಿಯಂತ್ರಿತವಾಗಿತ್ತು. 2014ರ ಅಕ್ಟೋಬರ್ ತನಕ ಡಿಸೇಲ್ ಬೆಲೆ ನಿಯಂತ್ರಿತವಾಗಿತ್ತು. ಬೆಲೆ ನಿಯಂತ್ರಣವನ್ನು ಸಡಿಲಗೊಳಿಸಿದ ನಂತರದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯ ಕಚ್ಚಾ ತೈಲ ದರಕ್ಕೆ ಅನುಗುಣವಾಗಿ ದೇಶೀಯ ಮಾರುಕಟ್ಟೆಯಲ್ಲಿ ಅದನ್ನು ವಿಶೇಷವಾಗಿ ದರ ಇಳಿದಾಗ, ತೆರಿಗೆ ಏರಿದ ಪರಿಣಾಮ ಅದರ ಪ್ರಯೋಜನ ಗ್ರಾಹಕರಿಗೆ ವರ್ಗಾವಣೆ ಆಗಲಿಲ್ಲ ಎಂಬುದು ವಾಸ್ತವ.
ದರ ಹೆಚ್ಚಳ ಎಷ್ಟು?
ಸೆಪ್ಟೆಂಬರ್ 28ರಿಂದೀಚೆಗೆ ಪೆಟ್ರೋಲ್ ದರ ಲೀಟರಿಗೆ 4.65 ರೂಪಾಯಿ, ಸೆಪ್ಟೆಂಬರ್ 24 ರಿಂದೀಚೆಗೆ ಡೀಸೆಲ್ ದರ ಲೀಟರಿಗೆ 5.95 ರೂಪಾಯಿ ಹೆಚ್ಚಳವಾಗಿದೆ. ಇದಕ್ಕೂ ಮುನ್ನ, ಮೇ 4 -ಜುಲೈ 17ರ ನಡುವೆ ಪೆಟ್ರೋಲ್ ದರ ಲೀಟರಿಗೆ 11.44 ರೂಪಾಯಿ, ಡೀಸೆಲ್ ದರ ಲೀಟರಿಗೆ 9.14 ರೂಪಾಯಿ ಏರಿತ್ತು.
ವಿಮಾನ ಇಂಧನ ದರವೇ ಕಡಿಮೆ
ವಿಮಾನ ಇಂಧನ ದರ(ಎಟಿಎಫ್) ಪೆಟ್ರೋಲ್ ಮತ್ತು ಡೀಸೆಲ್ ದರಕ್ಕಿಂತ ಕಡಿಮೆ ಇದೆ. ದೆಹಲಿಯಲ್ಲಿ ಎಟಿಎಫ್ ದರ ಪ್ರತಿ ಲೀಟರಿಗೆ 79 ರೂಪಾಯಿ ಮಾತ್ರ. ಆದರೆ ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ದರ 100 ರೂಪಾಯಿ ಮತ್ತು ಆಸುಪಾಸಿನಲ್ಲಿದೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳು ಶೇಕಡ 30ರಷ್ಟು ದುಬಾರಿ ಎನಿಸಿದೆ.
ಸಾಲ ಕೇಳಿದ ಲಂಕಾ
ಕಚ್ಚಾ ತೈಲ ಖರೀದಿಗೆ 50 ಕೋಟಿ ಡಾಲರ್ ಸಾಲ ನೀಡುವಂತೆ ಶ್ರೀಲಂಕಾ ಸರ್ಕಾರ ಭಾರತಕ್ಕೆ ಮನವಿ ಮಾಡಿದೆ. ಜನವರಿ ತನಕ ಸಾಕಾಗುವಷ್ಟು ತೈಲ ಮಾತ್ರ ಲಂಕೆಯಲ್ಲಿದೆ. ಹೆಚ್ಚಿನ ದಾಸ್ತಾನಿಗೆ ಕ್ರಮ ತೆಗೆದುಕೊಳ್ಳಬೇಕಾಗಿದ್ದು, ಭಾರತದ ಜತೆಗೆ ಸಾಲಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಸದ್ಯದಲ್ಲೇ ಸಹಿ ಹಾಕುವ ಸಾಧ್ಯತೆ ಇದೆ.
ತೆರಿಗೆ ಹೊರೆ ಚಿತ್ರಣ
ಪೆಟ್ರೋಲ್, ಡೀಸೆಲ್ ದುಬಾರಿ ದರ ಲೆಕ್ಕದ ಹಿಂದಿನ ಡೇಟಾ ವಿಶ್ಲೇಷಣೆಯು ತೆರಿಗೆ ಹೊರೆಯ ಚಿತ್ರಣವನ್ನು ಮುಂದಿಟ್ಟಿದೆ. 2014ರ ಜೂನ್ ತಿಂಗಳು ಮತ್ತು ತದನಂತರದ ವರ್ಷಗಳ ಅಕ್ಟೋಬರ್ ತಿಂಗಳ ಚಿಲ್ಲರೆ ಮಾರಾಟದರದ ಲೆಕ್ಕ ಇಲ್ಲಿದೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 13 =
Remember me
