ನವದೆಹಲಿ:ಅತ್ಯಾಧುನಿಕ ಯುದ್ಧ ಹೆಲಿಕಾಪ್ಟರ್​ಗಳ ಖರೀದಿಗಾಗಿ ಭಾರತ ವಿದೇಶಗಳಿಗೆ ನೀಡುತ್ತಿರುವ ಸಾವಿರಾರು ಕೋಟಿ ಹಣ ಉಳಿಸಲು ಹಾಗೂ ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಯೋಜನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್​ಎಎಲ್) ಅತ್ಯಾಧುನಿಕ ಲಘು ಯುದ್ಧ ಹೆಲಿಕಾಪ್ಟರ್​ಗಳ ನಿರ್ವಣಕ್ಕೆ ಬೃಹತ್ ಯೋಜನೆ ಸಿದ್ಧಪಡಿಸಿದೆ. ಇದರ ಅನ್ವಯ ನಿರ್ವಿುಸಲಾಗುವ ಹೆಲಿಕಾಪ್ಟರ್​ಗಳು 10ರಿಂದ 12 ಟನ್ ತೂಕದ್ದಾಗಿದ್ದು, ಇವುಗಳು ಬೋಯಿಂಗ್ ಕಂಪನಿಯ ಅತ್ಯಾಧುನಿಕ ಅಪಾಚೆ ಹೆಲಿಕಾಪ್ಟರ್​ಗೂ ಸೆಡ್ಡು ಹೊಡೆಯುವಷ್ಟು ಸಾಮರ್ಥ್ಯ ಹೊಂದಿರಲಿವೆ ಎನ್ನಲಾಗಿದೆ.
ವಿಮಾನ, ಯುದ್ಧ ವಿಮಾನ ಹಾಗೂ ಹೆಲಿಕಾಪ್ಟರ್​ಗಳ ತಯಾರಿಕೆಯಲ್ಲಿ ಅಮೆರಿಕದ ಬೋಯಿಂಗ್ ಸಂಸ್ಥೆ ವಿಶ್ವದಲ್ಲೇ ಪ್ರಮುಖ ಸ್ಥಾನ ಹೊಂದಿದೆ. ಆದರೆ, ಎಚ್​ಎಎಲ್ ಸಂಸ್ಥೆ ಅದರ ಸರಿಸಮನಾಗಿ ಯುದ್ಧ ಹೆಲಿಕಾಪ್ಟರ್​ಗಳನ್ನು ತಯಾರಿಸುವ ಗುರಿ ಹೊಂದಿದೆ ಎಂದು ಎಚ್​ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್. ಮಾಧವನ್ ಮಾಹಿತಿ ನೀಡಿದ್ದಾರೆ.
500 ಕಾಪ್ಟರ್ ಉತ್ಪಾದನೆ ಗುರಿ
ಅತ್ಯಾಧುನಿಕ ಯುದ್ಧ ಹೆಲಿಕಾಪ್ಟರ್​ಗಳ ನಿರ್ವಣಕ್ಕೆ ಸಂಬಂಧ ಈಗಾಗಲೇ ಪ್ರಾಯೋಗಿಕ ಹಂತದ ಕೆಲಸಗಳನ್ನು ಪ್ರಾರಂಭಿಸಲಾಗಿದ್ದು, ಕನಿಷ್ಠ 500 ಹೆಲಿಕಾಪ್ಟರ್​ಗಳನ್ನು ನಿರ್ವಿುಸುವ ಗುರಿ ಹೊಂದಿದ್ದೇವೆ. ಕೇಂದ್ರ ಸರ್ಕಾರ 2020ರಲ್ಲಿ ಈ ಯೋಜನೆಗೆ ಅನುಮೋದನೆ ನೀಡಿದರೆ 2023ರ ವೇಳೆಗೆ ಹೆಲಿಕಾಪ್ಟರ್​ನ ಮೊದಲ ಸ್ವರೂಪ ಸಿದ್ಧವಾಗಲಿದೆ ಎಂದು ಮಾಧವನ್ ತಿಳಿಸಿದ್ದಾರೆ. ವಿನ್ಯಾಸ ಹಾಗೂ ಮೊದಲ ಮಾಡೆಲ್​ಗಾಗಿ ಸುಮಾರು -ಠಿ; 9,600 ಕೋಟಿ ವೆಚ್ಚವಾಗಲಿದ್ದು, ಅಂದುಕೊಂಡತೆ ಯೋಜನೆ ಕೈಗೂಡಿದರೆ ಎಚ್​ಎಎಲ್ 2027ರ ವೇಳೆಗೆ ದೇಶಿ ನಿರ್ವಿುತ ಅತ್ಯಾಧುನಿಕ ಲಘು ಯುದ್ಧ ಹೆಲಿಕಾಪ್ಟರ್​ನ್ನು ಸಿದ್ಧಪಡಿಸಲಿದೆ.
ಅಮೆರಿಕ ಜತೆ ಒಪ್ಪಂದ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿ ವೇಳೆ -ಠಿ; 25 ಸಾವಿರ ಕೋಟಿ ಮೌಲ್ಯದ 30 ಅತ್ಯಾಧುನಿಕ ಯುದ್ಧ ಹೆಲಿಕಾಪ್ಟರ್ ಖರೀದಿ ಒಪ್ಪಂದ ಮಾಡಿಕೊಳ್ಳಲಾಗಿದೆ. ನೌಕಾಪಡೆಗಾಗಿ 24 ‘ಎಂಎಚ್-60 ರೋಮಿಯೊ’ ಬಹುಕಾರ್ಯ ಹೆಲಿಕಾಪ್ಟರ್​ಗಳು ಹಾಗೂ ಸೇನೆಗಾಗಿ 6 ‘ಎಎಚ್-64ಇ’ ಆಕ್ರಮಣಕಾರಿ ಅಪಾಚೆ ಹೆಲಿಕಾಪ್ಟರ್​ಗಳನ್ನು ಖರೀದಿಸಲಾಗುತ್ತಿದೆ. 2007ರಿಂದ ಅಮೆರಿಕದಿಂದ ರಕ್ಷಣಾ ಸರಕುಗಳ ಒಟ್ಟು ಖರೀದಿ 20 ಬಿಲಿಯನ್ ಡಾಲರ್.
ರಫೇಲ್ ಮಾದರಿಯಲ್ಲಿ ತೇಜಸ್ ಅಭಿವೃದ್ಧಿ
ಭಾರತೀಯ ಸೇನೆಯ ಯುದ್ಧವಿಮಾನಗಳ ಬಲ ಹೆಚ್ಚಿಸಲು ಏರೋನಾಟಿಕಲ್ ಡಿಸೈನ್ ಏಜೆನ್ಸಿ (ಎಡಿಎ) ಕೂಡ ಈಗಾಗಲೇ ತೇಜಸ್ ಹಗುರ ಯುದ್ಧ ವಿಮಾನದ ಮುಂದುವರಿದ ವಿನ್ಯಾಸಗಳ ಬಗ್ಗೆ ಅಧ್ಯಯನ ನಡೆಸುತ್ತಿದೆ. ಇದರಲ್ಲಿ ನೇವಿ ಟ್ವಿನ್ ಇಂಜಿನ್ ಡೆಕ್ ಜೆಟ್ ಹಾಗೂ ವಾಯುಪಡೆ ಓಮ್ನಿ ರೋಲ್ ಕಾಂಬ್ಯಾಟ್ ಯುದ್ಧವಿಮಾನಗಳ ವಿನ್ಯಾಸವನ್ನು ತಯಾರಿಸಲಾಗಿದ್ದು, ಈ ಯುದ್ಧ ವಿಮಾನಗಳು ಫ್ರಾನ್ಸ್ ನಿರ್ವಿುತ ರಫೇಲ್ ಜೆಟ್​ಗೆ ಸರಿಸಮನಾಗಿರಲಿವೆ ಎನ್ನಲಾಗಿದೆ.
ಸರ್ಕಾರ ಈ ಯೋಜನೆಗೂ ಒಪ್ಪಿಗೆ ನೀಡಿದರೆ ಮುಂದಿನ 6 ವರ್ಷಗಳಲ್ಲಿ ಬೆಂಗಳೂರಿನ ಎಚ್​ಎಎಲ್​ನಿಂದ ಹೊಸ ಯುದ್ಧವಿಮಾನಗಳನ್ನು ತಯಾರಿಸಲಾಗುತ್ತದೆ. ನೌಕಾಪಡೆಯ ವಿಮಾನವಾಹಕ ನೌಕೆಗಳಾದ ಐಎನ್​ಎಸ್ ವಿಕ್ರಮಾದಿತ್ಯ ಮತ್ತು ವಿಕ್ರಾಂತ್​ನಲ್ಲಿ ನಿಯೋಜಿಸಲಾಗಿರುವ ರಷ್ಯಾ ನಿರ್ವಿುತ ಮಿಗ್-29ಕೆ ಜೆಟ್​ಗಳನ್ನು ಬದಲು ಈ ವಿಮಾನಗಳನ್ನು ನಿಯೋಜಿಸುವ ಕುರಿತು ಚರ್ಚೆ ನಡೆಯುತ್ತಿದೆ.
ಶಸ್ತ್ರಾಸ್ತ್ರ ಖರೀದಿ ಹಣ ಉಳಿತಾಯ
ವಿಶ್ವದಲ್ಲಿ ಅತಿ ಹೆಚ್ಚು ಶಸ್ತ್ರಾಸ್ತ್ರ ಮತ್ತು ಮಿಲಿಟರಿ ಉಪಕರಣಗಳನ್ನು ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ರಕ್ಷಣಾ ಉತ್ಪಾದನೆಯನ್ನು ದೇಶೀಯಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆಯಾದರೂ ಗುಣಮಟ್ಟದ ಹಾಗೂ ಯುದ್ಧ ಸಾಮರ್ಥ್ಯ ಹೆಚ್ಚಳಕ್ಕಾಗಿ ಅತ್ಯವಶ್ಯಕ ಶಸ್ತ್ರಾಸ್ತ್ರಗಳು ಹಾಗೂ ವಿಮಾನ, ಹೆಲಿಕಾಪ್ಟರ್​ಗಳನ್ನು ವಿದೇಶಗಳಿಂದ ಖರೀದಿಸುತ್ತಿದೆ. ಭಾರತಲ್ಲೇ ಆ ದರ್ಜೆಯ ಯುದ್ಧ ಹೆಲಿಕಾಪ್ಟರ್​ಗಳನ್ನು ನಿರ್ವಿುಸುವುದರಿಂದ ವಿದೇಶಕ್ಕೆ ಹರಿದು ಹೋಗುವ ಹಣವೂ ಉಳಿತಾಯವಾಗುವುದರ ಜತೆಗೆ ಇಲ್ಲಿ ಉದ್ಯೋಗಾವಕಾಶಗಳು ಹೆಚ್ಚುವ ಸಾಧ್ಯತೆ ಇದೆ.
ನೌಕ, ವಾಯು ಸೇನೆಗೆ ಭಿನ್ನ ವಿನ್ಯಾಸ
ಉದ್ದೇಶಿತ ಯುದ್ಧ ಹೆಲಿಕಾಪ್ಟರ್​ಗಳ ವಿನ್ಯಾಸದ ಬಗ್ಗೆ ವಾಯುಪಡೆ ಹಾಗೂ ನೌಕಾದಳದ ಜತೆ ಈಗಾಗಲೇ ರ್ಚಚಿಸಲಾಗಿದ್ದು, ಎರಡೂ ಸೇನೆಗಳಿಗೆ ವಿಭಿನ್ನ ರೀತಿಯ ಮಾಡೆಲ್​ಗಳನ್ನು ನಿರ್ವಿುಸುವ ಗುರಿ ಹೊಂದಲಾಗಿದೆ. ನೌಕಾಪಡೆಗಳ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಅದರ ಹೆಲಿಕಾಪ್ಟರ್​ಗಳ ಬ್ಲೇಡ್​ಗಳನ್ನು ಮಡಿಸುವ ವ್ಯವಸ್ಥೆ ನೀಡಲಾಗುತ್ತದೆ.
ಈ ಹೆಲಿಕಾಪ್ಟರ್​ಗಳು ಎರಡು ಇಂಜಿನ್ ಹೊಂದಿರಲಿದ್ದು, ವೈಮಾನಿಕ ದಾಳಿ, ಸಾರಿಗೆ, ನೆರವು, ಶತ್ರುಗಳ ಹುಡುಕಾಟ ಮತ್ತು ಇನ್ನಿತರ ರಕ್ಷಣಾ ಕಾರ್ಯಾಚರಣೆಗಳಲ್ಲಿ ಮಹತ್ತರ ಪಾತ್ರ ವಹಿಸಲಿವೆ. ಹೀಗಾಗಿ ಇವುಗಳನ್ನು ನಾವು ಬೇರೆ ದೇಶಕ್ಕೂ ವ್ಯಾಪಾರ ಮಾಡಬಹುದು ಎಂದು ಮಾಧವನ್ ತಿಳಿಸಿದ್ದಾರೆ.
500 ಲಘು ಯುದ್ಧ ಹೆಲಿಕಾಪ್ಟರ್​ಗಳು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − eleven =
Remember me
