ಡೆಹ್ರಾಡೂನ್​​:ಉತ್ತರಾಖಂಡದ ಕೇದಾರನಾಥ ಧಾಮದಲ್ಲಿ ಹೆಲಿಕಾಪ್ಟರ್​ವೊಂದು ಪತನಗೊಂಡಿದೆ. ಕೆಲವು ದಿನಗಳ ಹಿಂದೆ ಕೆಟ್ಟುಹೋಗಿದ್ದ ಹೆಲಿಕಾಪ್ಟರ್​ ಅನ್ನು ಸರಿಪಡಿಸುವ ಸಲುವಾಗಿ ಭಾರತೀಯ ವಾಯುಪಡೆಯ ಎಂಐ-17 ಹೆಲಿಕಾಪ್ಟರ್​ನಿಂದ ಗೌಚಾರ್​​ ಏರ್​ಸ್ಟ್ರೀಪ್​ಗೆ ಕೊಂಡೊಯ್ಯವು ಸಮಯದಲ್ಲಿ ಈ ಘಟನೆ ನಡದಿದೆ.
ಇದನ್ನು ಓದಿ:ದೆಹಲಿಯ ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ IAS ಧರ್ಮೇಂದ್ರ ನೇಮಕ
ಕೇದಾರನಾಥದಲ್ಲಿ 2024 ಮೇ 24ರಂದು ಲ್ಯಾಂಡಿಂಗ್​ ಮಾಡುವ ವೇಳೆ ಹೆಲಿಕಾಪ್ಟರ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಹೆಲಿಕಾಪ್ಟರ್​​ಅನ್ನು ವಾಯುಪಡೆಯ ಎಂಐ-17 ಹೆಲಿಕಾಪ್ಟರ್​ ಸಹಾಯದಿಂದ ನೇತುಹಾಕಿ ಗೌಚಾರ್​​​ ಏರ್​ಸ್ಟ್ರೀಪ್​​ಗೆ ಸಾಗಿಸುವ ವೇಳೆ ಹಾರಾಟದ ಸಮಯದಲ್ಲಿ ಟೋಯಿಂಗ್​ ಚೈನ್​​ ಮುರಿದು ಬಿದಿದ್ದೆ. ಹೆಲಿಕಾಪ್ಟರ್​ ಪತನದ ವೇಳೆ ಯಾರದರ ಗಾಯಗೊಂಡಿದ್ದಾರೆಯೇ ಅಥವಾ ಇಲ್ಲವೇ ಎಂಬ ವಿಚಾರ ಇನ್ನು ಸ್ಪಷ್ಟವಾಗಿಲ್ಲ.
ಪ್ರಸ್ತುತ ಆ ಹೆಲಿಕಾಪ್ಟರ್​ ಅನ್ನು ಹೊರತೆಗೆಯುವ ಪ್ರಯತ್ನದಲ್ಲಿ ಅಪಘಾತ ಸಂಭವಿಸಿದೆ. ಪಿಟಿಐ ಹಂಚಿಕೊಂಡಿರುವ ವಿಡಿಯೋದಲ್ಲಿ ಅಪಘಾತಕ್ಕೀಡಾಗುವ ಮೊದಲು ಹೆಲಿಕಾಪ್ಟರ್​​ ಹಾರಾಟದ ವೇಳೆ ಗಾಳಿಯಲ್ಲಿ ತೂಗಾಡುತ್ತಿರುವುದನ್ನು ಕಾಣಬಹುದಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
VIDEO | Uttarakhand: A defective helicopter, which was being air lifted from#Kedarnathby another chopper, accidentally fell from mid-air as the towing rope snapped, earlier today.#UttarakhandNews(Source: Third Party)pic.twitter.com/yYo9nCXRIw
ತಾಂತ್ರಿಕ ದೋಷ ಕಂಡ ಕೂಡಲೆ ಪೈಲಟ್​​​ ಬುದ್ಧಿವಂತಿಕೆಯಿಂದ ಕೇದಾರನಾಥ ಹೆಲಿಪ್ಯಾಡ್​ಗೆ ಸ್ವಲ್ಪ ದೂರದಲ್ಲಿ ಹೆಲಿಕಾಪ್ಟರ್​ ಅನ್ನು ಎಮರ್ಜೆನ್ಸಿ ಲ್ಯಾಂಡಿಂಗ್​ ಮಾಡಲಾಗಿತ್ತು. ಖಾಲಿ ಜಾಗವನ್ನು ನೋಡಿದ ಬಳಿಕ ಹೆಲಿಕಾಪ್ಟರ್​ ಅನ್ನು ಕಣಿವೆಯಲ್ಲಿ ಇಳಿಸಲಾಗಿತ್ತು. ಶನಿವಾರ(ಆಗಸ್ಟ್​​ 31)ಹೆಲಿಕಾಪ್ಟರ್​ ರಿಪೇರಿ ಮಾಡಲು ಗೌಚಾರ್ ಏರ್‌ಸ್ಟ್ರಿಪ್‌ಗೆ ಕೊಂಡೊಯ್ಯುವ ಯೋಜನೆ ಇತ್ತು. ಈ ವೇಳೆ ಅಪಘಾತ ಸಂಭವಿಸಿದೆ ಎಂದು ಪ್ರವಾಸೋದ್ಯಮ ಅಧಿಕಾರಿ ಹೇಳಿದರುಎಂದು ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ ರಾಹುಲ್ ಚೌಬೆ ಹೇಳಿದರು.
ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಕರು ಅಥವಾ ಲಗೇಜ್ ಇರಲಿಲ್ಲ. ಮಾಹಿತಿ ಬಂದ ತಕ್ಷಣ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದೆ. ತಂಡವು ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡುತ್ತಿದೆ. ಹೆಲಿಕಾಪ್ಟರ್​​ ಅಪಘಾತದಲ್ಲಿ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವದಂತಿಗಳನ್ನು ಹಬ್ಬಿಸಬೇಡಿ ಎಂದು ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ ರಾಹುಲ್ ಚೌಬೆ ಮನವಿ ಮಾಡಿದ್ದಾರೆ.(ಎಜೆನ್ಸೀಸ್​​)
ಬಾಬಾ ರಾಮ್​ದೇವ್​ಗೆ ಎದುರಾಯ್ತು ಮತ್ತೊಂದು ಸಂಕಷ್ಟ; ಹೈಕೋರ್ಟ್​ನಿಂದ ನೋಟಿಸ್​ ಜಾರಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen − ten =
Remember me
