ನವದೆಹಲಿ:ಐವರು ಮೆಕ್ಸಿಕನ್ನರು ಸೇರಿದಂತೆ ಆರು ಮಂದಿಯನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್​ ನೇಪಾಳದಲ್ಲಿರುವ ಪ್ರಪಂಚದ ಅತ್ಯಂತ ಎತ್ತರದ ಶಿಖರ ಮೌಂಟ್​ ಎವೆರೆಸ್ಟ್​ ಬಳಿಯ ಲಾಮ್ಜುರಾದಲ್ಲಿ ಇಂದು (ಜು.11) ಪತನವಾಗಿದೆ.
ಮ್ಯಾನೇಜಿಂಗ್​ ಏರ್​ ಚಾಪರ್​ 9ಎನ್​-ಎಎಂವಿ ಇಂದು ಬೆಳಗ್ಗೆ 10.04 ನಿಮಿಷಕ್ಕೆ ಸೊಲುಖುಂಬು ಜಿಲ್ಲೆಯ ಸುರ್ಕೆ ವಿಮಾನಿ ನಿಲ್ದಾಣದಿಂದ ಕಾಠ್ಮಂಡುವಿಗೆ ನಿರ್ಮಿಸಿದ 15 ನಿಮಿಷಗಳಲ್ಲೇ ಸುಮಾರು 12 ಸಾವಿರ ಅಡಿ ಎತ್ತರದಲ್ಲಿ ಸುಮಾರು 10.13ಕ್ಕೆ ಸಂಪರ್ಕ ಕಡಿದುಕೊಂಡಿತು ಎಂದು ತ್ರಿಬುವನ್​ ಇಂಟರ್ನ್ಯಾಷನಲ್​ ಏರ್ಪೋರ್ಟ್​ನ ಮ್ಯಾನೇಜರ್​ ಜ್ಞಾನೇಂದ್ರ ಭುಲ್ ತಿಳಿಸಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಅಪರಾಧ ಸಂಖ್ಯೆ ಹೆಚ್ಚಳ: ನಳಿನ ಕುಮಾರ ಕಟೀಲ ಟೀಕೆ
ಅಂದಹಾಗೆ ಸೊಲುಖುಂಬು ಜಿಲ್ಲೆ ಜಗತ್ತಿನ ಎತ್ತರದ ಶಿಖರ ಮೌಂಟ್​ ಎವೆರೆಸ್ಟ್​ ಸೇರಿದಂತೆ ಹಲವು ಶಿಖರಗಳು ತವರಾಗಿದೆ. ಪತನಗೊಂಡ ಚಾಪರ್​ನಲ್ಲಿ ಐವರು ಮೆಕ್ಸಿಕನ್ನರಿದ್ದರು. ಅವರ ಗುರುತು ಇನ್ನೂ ಪತ್ತೆಯಾಗಿಲ್ಲ. ಈ ಸಂಬಂಧ ತನಿಖೆ ನಡೆಯುತ್ತಿದೆ. ಸೀನಿಯರ್​ ಕ್ಯಾಪ್ಟನ್​ ಚೆಟ್​ ಬಿ ಗುರುಂಗ್​ ಅವರು ಚಾಪರ್​ನ ಪೈಲಟ್​ ಆಗಿದ್ದರು.
ಮನಾಂಗ್​ ಏರ್​ ಕಂಪನಿಯ ಹೆಲಿಕಾಪ್ಟರ್ ಲಾಮ್ಜುರಾ ಪಾಸ್​ಗೆ ತಲುಪುತ್ತಿದ್ದಂತೆ ಸಿಗ್ನಲ್​ ಟವರ್​ ಜೊತೆ ಸಂಪರ್ಕ ಕಡಿದುಕೊಂಡಿತು ಮತ್ತು ವೈಬರ್‌ನಲ್ಲಿ ಹೆಲಿಕಾಪ್ಟರ್ ಕೇವಲ ‘ಹಲೋ’ ಎಂಬ ಸಂದೇಶವನ್ನು ಮಾತ್ರ ಸ್ವೀಕರಿಸಿದೆ ಎಂದು ವರದಿಯಾಗಿದೆ. ತೀವ್ರ ಹುಡುಕಾಟದ ನಡುವೆ, ಕೆಲವು ಗಂಟೆಗಳ ನಂತರ ಪತನಗೊಂಡ ಹೆಲಿಕಾಪ್ಟರ್​ ಅವಶೇಷಗಳು ಲಾಮಜುರಾದ ಭಕಾಂಜೆ ಗ್ರಾಮದಲ್ಲಿ ಪತ್ತೆಯಾಗಿವೆ.
ಮನಾಂಗ್​ ಏರ್​ ಕಂಪನಿಯನ್ನು 1997ರಲ್ಲಿ ಸ್ಥಾಪಿಸಲಾಯಿತು. ಇದೊಂದು ನೇಪಾಳ ರಾಜಧಾನಿ ಕಾಠ್ಮಂಡುವಿನಲ್ಲಿ ಇರುವ ಹೆಲಿಕಾಪ್ಟರ್​ ವಾಯು ನೆಲೆಯಾಗಿದೆ. ಇದು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರದ ನಿಯಂತ್ರಣದ ಅಡಿಯಲ್ಲಿ ನೇಪಾಳದ ಪ್ರದೇಶದೊಳಗೆ ವಾಣಿಜ್ಯ ವಾಯು ಸಾರಿಗೆಯಲ್ಲಿ ಹೆಲಿಕಾಪ್ಟರ್‌ ಕಾರ್ಯಾಚರಣೆಯನ್ನು ನಿರ್ವಹಿಸುತ್ತಿದೆ.
ಇದನ್ನೂ ಓದಿ: ತಮಿಳುನಾಡಿನ ಸೌಂದರ್ಯವನ್ನು ಅನ್ವೇಷಿಸಿದ ಬಾಹುಬಲಿ ನಿರ್ದೇಶಕ; ಟ್ರಿಪ್​​ ವಿಡಿಯೋ ಹಂಚಿಕೊಂಡ ರಾಜಮೌಳಿ
ನೇಪಾಳವು ಹಲವು ವಿಮಾನ ಅಪಘಾತಗಳ ಕರಾಳ ಇತಿಹಾಸವನ್ನು ಹೊಂದಿದೆ. ಹಲವಾರು ವಿಮಾನಯಾನ ಸಂಸ್ಥೆಗಳು ನೇಪಾಳದ ದೂರದ ಬೆಟ್ಟಗಳು ಮತ್ತು ಪರ್ವತಗಳಲ್ಲಿ ಮೋಡಗಳಿಂದ ಆವೃತವಾದ ಮತ್ತು ರಸ್ತೆಗಳಿಂದ ದೂರವಿರುವ ಸಣ್ಣ ವಿಮಾನ ನಿಲ್ದಾಣಗಳಿಗೆ ಹಾರಾಟ ನಡೆಸುತ್ತವೆ. ಇದು ಅಪಾಯಕಾರಿ ಪ್ರಯಾಣವಾಗಿದೆ.(ಏಜೆನ್ಸೀಸ್​)
ಮಾಜಿ ನೌಕಾಧಿಕಾರಿಗಳಿಗೆ ಲಕ್ಷಾಂತರ ರೂ. ಪಂಗನಾಮ: ಬಯಲಾಯ್ತು ಮಹಿಳಾ ಇನ್ಸ್​ಪೆಕ್ಟರ್ ಕಳ್ಳಾಟ!

ಎಸ್‌ಯುವಿ-ಶಾಲಾ ಬಸ್ ಮುಖಾಮುಖಿ ಡಿಕ್ಕಿ, 6 ಮಂದಿ ಸಾವು; ಭೀಕರ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ಹೊಸ ವ್ಯವಹಾರಕ್ಕೆ ಕೈ ಹಾಕಿದ ನಟ ಉಪೇಂದ್ರ; ಮದುವೆ, ಸಮಾರಂಭಗಳಿಗೆ ಬಾಡಿಗೆಗೆ ಸಿಗಲಿದೆ ತೋಟದ ಮನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
