ಲಂಡನ್:ಅಚ್ಚರಿಯಾದರೂ ಸತ್ಯ. ಈ ಒಂದು ಪೈನಾಪಲ್ ಬೆಲೆ ಬರೋಬ್ಬರಿ 1 ಲಕ್ಷ ರೂಪಾಯಿ. ಅರ್ರೇ, ಒಂದು ಅನಾನಸ್​ಗೆ ಇಷ್ಟೊಂದು ಬೆಲೆಯಾ? ಯಾಕಿರಬಹುದು? ಏನಿದರ ವಿಶೇಷತೆ ಎಂದು ಯೋಚಿಸುತ್ತಿದ್ದರೆ ಇಲ್ಲಿದೆ ಮಾಹಿತಿ.
ಹೌದು, ಇಂಗ್ಲೆಂಡ್​​ನಲ್ಲಿ ಬೆಳೆಯಲಾಗುವ ಈ ಪೈನಾಪಲ್ ಹೆಸರು ಹೆಲಿಗಾನ್ ಅನಾನಸ್. ಈ ವಿಶೇಷವಾದ ತಳಿಯನ್ನು ಬ್ರಿಟನ್​ನ ಕಾರ್ನ್​ವಾಲ್​​ನಲ್ಲಿರುವ ಹೆಲಿಗ್​​ನ ಉದ್ಯಾನವನದ ಪ್ರದೇಶದಲ್ಲಿ ಬೆಳೆಯುವ ಕಾರಣ ಹೆಲಿಗನ್ ಅನಾನಸ್ ಎಂದು ಖ್ಯಾತಿಯನ್ನು ಪಡೆದುಕೊಂಡಿದೆ.
ಸಾಗಾಟ, ಬಂಡವಾಳ, ಲಾಭ, ಕಾರ್ಮಿಕರ ವೆಚ್ಚ ಸೇರಿ ಹಣ್ಣು, ತರಕಾರಿಗಳು ಸೇರಿದಂತೆ ಪ್ರತಿಯೊಂದು ವಸ್ತುವಿನ ಬೆಲೆ ನಿರ್ಧಾರವಾಗುತ್ತದೆ. ಅಂತೆಯೇ ಹೆಲಿಗಾನ್ ಪೈನಾಪಲ್​ನ ಬೆಲೆಯೂ ನಿರ್ಧರವಾಗಿದೆ. ಮುಖ್ಯವಾಗಿ ಈ ಪೈನಾಪಲ್​ಗೆ ಇಷ್ಟೊಂದು ಬೆಲೆ ಯಾಕೆಂದು ಪ್ರಶ್ನಿಸಿದರೆ ಉತ್ತರ, ಹೆಲಿಗಾನ್ ಅನಾನಸ್ ಫಸಲು ಬರಲು ಬರೋಬ್ಬರಿ ಎರಡರಿಂದ ಮೂರು ವರ್ಷ ಬೇಕಾಗುತ್ತದೆ.
ವರದಿಯ ಪ್ರಕಾರ, ಈ ವಿಶೇಷವಾದ ಹೆಲಿಗಾನ್ ಅನಾನಸ್ ತಳಿಯನ್ನು 1819ರಲ್ಲಿ ಇಂಗ್ಲೆಂಡ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ವೇಳೆ ಬ್ರಿಟನ್‌ನ ಹವಾಮಾನವು ಕೃಷಿಗೆ ಸೂಕ್ತವಲ್ಲ ಎಂದು ಅರಿತುಕೊಂಡ ಅಂದಿನ ತೋಟಗಾರಿಕಾ ತಜ್ಞರು ಇದನ್ನು ಬೆಳೆಯಲು ವಿಶೇಷವಾದ ವಿಧಾನವನ್ನು ರೂಪಿಸಿದ್ದರು. ಇದಕ್ಕಾಗಿ ವಿಶೇಷ ಮರದ ಪಿಟ್-ಆಕಾರದ ಮಡಕೆಗಳನ್ನು ವಿನ್ಯಾಸಗೊಳಿಸಿ, ಕೊಳೆಯುವ ಗೊಬ್ಬರದ ಜತೆಗೆ ಬ್ಯಾಕಪ್ ಹೀಟರ್ ಬಳಸಿ ಈ ತಳಿಯನ್ನು ಆವಿಷ್ಕರಿಸಿದರು.
ಹೆಲಿಗಾನ್ ಅನಾನಸ್ ತಳಿಯನ್ನು ಬೆಳೆಯಲು ಇಂದಿಗೂ ಹಸಿರುಮನೆ ಪ್ರಕ್ರಿಯೆಯನ್ನು ಅನುಸರಿಸಲಾಗುತ್ತಿದೆ. ಹೆಲಿಗಾನ್ ಅನಾನಸ್ ಫಸಲು ಬರಲು 2-3 ವರ್ಷಗಳೆ ಬೇಕಾಗುತ್ತದೆ. ಈ ವೇಳೆ ಇದನ್ನು ಫಲವತ್ತಾಗಿ ಸಂರಕ್ಷಿಸುವುದೇ ಸವಾಲಾಗಿರುತ್ತದೆ. ಹೀಗಾಗಿ ಒಂದು ಹಣ್ಣಿಗೆ ಒಂದು ಲಕ್ಷದಷ್ಟು ರೂಪಾಯಿಯಷ್ಟು ವೆಚ್ಚ ತಗಲುತ್ತದೆ ಎಂದು ಈ ಹಣ್ಣನ್ನು ಬೆಳೆಯುವ ರೈತರು ಹೇಳಿರುವುದು ವರದಿಯಾಗಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 6 =
Remember me
