
ಬಿಹಾರ:ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡುವ ಜನರಿಗೆ ಪೊಲೀಸರು ದಂಡ ವಿಧಿಸುತ್ತಿರುತ್ತಾರೆ. ಎಷ್ಟೇ ಮುನ್ಸೂಚನೆ ಕೊಟ್ಟರು ವಾಹನ ಸವಾರರು ತಲೆ ಕೆಡಿಸಿಕೊಳ್ಳುವುದಿಲ್ಲ. ವ್ಯಕ್ತಿಯೊಬ್ಬರು ತಾನಿದ್ದ ಮನೆಯನ್ನೇ ಮಾರಿ ಉಚಿತವಾಗಿ ಹೆಲ್ಮೆಟ್‌ಗಳನ್ನು ಹಂಚುತ್ತಿದ್ದಾರೆ.
ಚಾಲಕರು ಹಿಂಬದಿ ಕುಳಿತುಕೊಳ್ಳುವವರು ಹೆಲ್ಮೆಟ್ ಧರಿಸಿ ತಮ್ಮ ಜೀವಕ್ಕೆ ತಾವೆ ಹೊಣೆಗಾರರು ಎಂಬುದನ್ನು ಮರೆಯಬಾರದು. ಕಳೆದ ತಿಂಗಳು ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ ವೇಯಲ್ಲಿ ವಾಹನ ಸವಾರರಿಗೆ ಬಿಹಾರ ಮೂಲದ ರಾಘವೇಂದ್ರ ಕುಮಾರ್ ಉಚಿತ ಹೆಲ್ಮೆಟ್ ನೀಡುವ ವಿಡಿಯೋ ವೈರಲ್ ಆಗಿತ್ತು. ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡುವ ಜನರಿಗೆ ಉಚಿತವಾಗಿ ಹೆಲ್ಮೆಟ್ ನೀಡುತ್ತಿದ್ದಾರೆ.
ಹೆಲ್ಮೆಟ್ ಹಂಚಲು ಕಾರಣವೇನು?:ಒಂಬತ್ತು ವರ್ಷಗಳ ಹಿಂದೆ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ ನಡೆದಿತ್ತು. ಈ ಅಪಘಾತದಲ್ಲಿ ತನ್ನ ಇಬ್ಬರು ಸ್ನೇಹಿತರನ್ನು ರಾಘವೇಂದ್ರ ಕುಮಾರ್ ಕಳೆದುಕೊಂಡಿದ್ದರು. ಇದರಲ್ಲಿ ಒಬ್ಬರು ರೂಮ್‌ಮೇಟ್ ಮತ್ತು ಇನ್ನೊಬ್ಬರು ಆಪ್ತ ಸ್ನೇಹಿತ, ಈ ಘಟನೆಯು ತೀರ್ವ ಖಿನ್ನತೆಗೆ ಒಳಗಾಗುವಂತೆ ಮಾಡಿತು. ನಂತರ ಉಚಿತ ಹೆಲ್ಮೆಟ್‌ಗಳನ್ನು ವಿತರಿಸಲು ನಿರ್ಧರಿಸಿದರು.
ಇದನ್ನೂ ಓದಿ:ಏಪ್ರಿಲ್ 30ರಂದು ಕೊಲ್ಲುತ್ತೇನೆ; ಬುಲೆಟ್​ ಪ್ರೂಫ್​ ಕಾರ್​ ಕೊಂಡ ಬೆನ್ನಲ್ಲೇ ಸಲ್ಲು ಭಾಯ್​ಗೆ ಮತ್ತೊಮ್ಮೆ ಬೆದರಿಕೆ!
ದೇಶಾದ್ಯಂತ 56,000 ಕ್ಕೂ ಹೆಚ್ಚು ಹೆಲ್ಮೆಟ್‌ಗಳನ್ನು ವಿತರಣೆ; ರಾಘವೇಂದ್ರ ಕುಮಾರ್ ಅವರು, ಸದ್ಯ ಹಣದ ಕೊರತೆ ಎದುರಿಸುತ್ತಿದ್ದಾರೆ. ಹೆಲ್ಮೆಟ್‌ಗಳನ್ನು ಖರೀದಿಸುವ ಸಲುವಾಗಿ ಗ್ರೇಟರ್ ನೋಯ್ಡಾದಲ್ಲಿನ ತಮ್ಮ ಅಪಾರ್ಟ್ಮೆಂಟ್ ಅನ್ನು ಕೂಡ ಮಾರಾಟ ಮಾಡಿದ್ದಾರೆ. ಅವರ ಪತ್ನಿಯ ಆಭರಣಗಳನ್ನು ಅಡವಿಟ್ಟು ಸಾಲ ಪಡೆದಿದ್ದರು. ದೇಶಾದ್ಯಂತ 56,000 ಕ್ಕೂ ಹೆಚ್ಚು ಹೆಲ್ಮೆಟ್‌ಗಳನ್ನು ವಿತರಣೆ ಮಾಡಿದ್ದಾರೆ. ಆದರೆ ಈಗ ಅವರ ಬಳಿ ಏನೂ ಇಲ್ಲದ ಕಾರಣ ತಮ್ಮ ಗ್ರಾಮಕ್ಕೆ ಹಿಂತಿರುಗಿ ಮಗನನ್ನು ಸರ್ಕಾರಿ ಶಾಲೆಗೆ ಸೇರಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ:ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಕೆ.ಎಸ್. ಈಶ್ವರಪ್ಪ“ನನ್ನನ್ನು ಹುಚ್ಚ ಎಂದು ಕರೆದರೂ ಚಿಂತೆಯಿಲ್ಲ ನಾನ್ನ ಪ್ರಯತ್ನಗಳನ್ನು ಮುಂದುವರೆಸುತ್ತೇನೆ. ಮುಂದಿನ ಕೆಲವು ವಾರಗಳಲ್ಲಿ, ನನಗೆ ಹೆಲ್ಮೆಟ್ ಖರೀದಿಸುವ ವೆಚ್ಚ ಹೆಚ್ಚಾಗಲಿದೆ. ಹಾಗಾಗಿ ನಗರದಲ್ಲಿ ಜೀವಿಸುವುದು ಕಷ್ಟವಾಗಲಿದ್ದು, ಬಿಹಾರದ ಕೈಮೂರ್ ಜಿಲ್ಲೆಯ ನನ್ನ ಗ್ರಾಮಕ್ಕೆ ಹಿಂತಿರುಗುತ್ತೇನೆ. ಯಾವುದೇ ಕಾರಣಕ್ಕೂ ನಾನು ಹೆಲ್ಮೆಟ್ ಖರೀದಿಸುವುದನ್ನು ಬಿಡುವುದಿಲ್ಲ. ನಿಮ್ಮ ಕೈಯಲ್ಲಾದರೆ ಜೀವಗಳನ್ನು ಉಳಿಸಿ,” ಎಂದು ಕುಮಾರ್ ಹೇಳಿದ್ದಾರೆ.
ಹೊಳೆಯುವ ಪ್ಲಾಸ್ಟಿಕ್ ತರಹದ ಚರ್ಮದೊಂದಿಗೆ ಜನಿಸಿದ ಮಗು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 16 =
Remember me
