ನವದೆಹಲಿ:ದ್ವಿಚಕ್ರ ವಾಹನ ಸವಾರರು ಇನ್ನು ಮುಂದೆ ಬಿಐಎಸ್​ ಮಾನ್ಯತೆ ಹೊಂದಿದ ಹೆಲ್ಮೆಟ್​ ಧರಿಸುವುದು ಕಡ್ಡಾಯವಾಗಲಿದೆ. ಜತೆಗೆ, ಇಂಥ ಮಾನ್ಯತೆ ಹೊಂದಿದ ಹೆಲ್ಮೆಟ್​ಗಳ ಉತ್ಪಾದನೆ ಹಾಗೂ ಮಾರಾಟಕ್ಕಷ್ಟೇ ಆವಕಾಶ ಇರಲಿದೆ.
ಕೇಂದ್ರ ಸಾರಿಗೆ ಇಲಾಖೆ ಇತ್ತೀಚೆಗೆ ಕರಡು ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ದ್ವಿಚಕ್ರ ವಾಹನ ಸವಾರರು ಬಳಸುವ ಹೆಲ್ಮೆಟ್​ಗಳು ಕಡ್ಡಾಯವಾಗಿ ಬಿಐಎಸ್​ ಹಾಲ್​ಮಾಕ್​ರ್ ಹೊಂದಿರುವುದು ಕಡ್ಡಾಯವಾಗಿರಲಿದೆ. ಇದಕ್ಕಾಗಿ ಬಿಐಎಸ್​ 2016ರ ಕಾಯ್ದೆಗೆ ತಿದ್ದುಪಡಿ ಮಾಡುತ್ತಿದೆ.
ಇದನ್ನೂ ಓದಿ;15ನೇ ವರ್ಷಕ್ಕೆ ಮದುವೆ, ಎರಡೂವರೆ ವರ್ಷದ ಮಗುವಿನ ತಾಯಿಯೀಗ ಪಿಯು ಪರೀಕ್ಷೆಯಲ್ಲಿ ಅಗ್ರ ಸಾಧಕಿ
ಈ ನಿಯಮ ಜಾರಿಗೆ ಬಂದಲ್ಲಿ, ಬಿಐಎಸ್​ ಮಾನ್ಯತೆ ಹೊಂದಿಲ್ಲದ ಹೆಲ್ಮೆಟ್​ ಧರಿಸಿದ ಸವಾರರು ದಂಡ ಪಾವತಿಸಬೇಕಾಗುತ್ತದೆ. ಇಂಥ ಹೆಲ್ಮೆಟ್​ಗಳನ್ನು ತಯಾರಿಸುವ ಕಂಪನಿಯವರು ಕೂಡ ದಂಡ ಪಾವತಿಸಬೇಕಲ್ಲದ, ಜೈಲು ಸೇರಬೇಕಾಗುತ್ತದೆ.
ಈ ನಿಯಮದಿಂದಾಗಿ ಕಳಪೆ ಹೆಲ್ಮೆಟ್​ಗಳ ತಯಾರಿಕೆ ಹಾಗೂ ಬಳಕೆಗೆ ಕಡಿವಾಣ ಬೀಳಲಿದೆ. ಜತೆಗೆ, ಈ ಬಗ್ಗೆ ಸಲಹೆ- ಸೂಚನೆಗಳನ್ನು ನೀಡುವಂತೆ ಸಾರಿಗೆ ಇಲಾಖೆ ಕೋರಿದೆ.
ಸೆಪ್ಟಂಬರ್​​ಗೆ ಶಾಲಾ- ಕಾಲೇಜು ಆರಂಭ; ಮತ್ತೊಂದು ರಾಜ್ಯ ಸೇರ್ಪಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − fourteen =
Remember me
