ಬಿಹಾರ:ಪರೀಕ್ಷೆ ಎಂದರೆ ವಿದ್ಯಾರ್ಥಿಗಳು ಯುದ್ಧ ಗೆದ್ದು ಬಂದಂತೆ ಎಂದು ಭಾವಿಸುತ್ತಾರೆ. ಕೆಲವು ಕಷ್ಟಪಟ್ಟಾದ್ರು ಓದಿ ಪರೀಕ್ಷೆಯಲ್ಲಿ ಪಾಸಾಗಲು ಪ್ರಯತ್ನ ಮಾಡುತ್ತಾರೆ. ಈ ಹಿಂದ ಮೌಲ್ಯಮಾಪಕರಿಗೆ ಉತ್ತರ ಪ್ರತಿಯಲ್ಲಿ ಹಣವನ್ನು ಇಟ್ಟು ಪಾಸ್​​ ಮಾಡಿ ಎಂದು ಮನವಿ ಮಾಡಿರುವ ಎಷ್ಟೋ ಸುದ್ದಿಗಳನ್ನು ನಾವು ಈ ಹಿಂದೆ ಕೇಳಿದ್ದೇವೆ. ಆದರೆ ಇದಲ್ಲಕ್ಕೂ ವಿಭಿನ್ನವಾಗಿ ಸುದ್ದಿಯೊಂದು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದೆ.
ಬಿಹಾರದ ಬೋರ್ಡ್ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ʼದಯವಿಟ್ಟು ನನ್ನನ್ನು ಪಾಸ್ ಮಾಡಿ ಸರ್, ಇಲ್ಲಾಂದ್ರೆ ನನ್ನ ತಂದೆ ನನಗೆ ಮದುವೆ ಮಾಡ್ತಾರೆʼ ಎಂದು ಉತ್ತರ ಪತ್ರಿಕೆಯಲ್ಲಿ ಬರೆದು ಆಕೆಯನ್ನು ಹೇಗಾದರೂ ಪರೀಕ್ಷೆಯಲ್ಲಿ ಪಾಸ್ ಮಾಡುವಂತೆ ಮೌಲ್ಯ ಮಾಪಕರಿಗೆ ಮನವಿಯನ್ನು ಮಾಡಿದ್ದಾಳೆ. ಈ ಉತ್ತರ ಪತ್ರಿಕೆಯ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
12 ನೇ ತರಗತಿಯ ಬೋರ್ಡ್ ಪರೀಕ್ಷೆಯ ಮೌಲ್ಯ ಮಾಪನದ ಸಂದರ್ಭದಲ್ಲಿ ಈ ಉತ್ತರ ಪತ್ರಿಕೆ ಸಿಕ್ಕಿದ್ದು, ವಿದ್ಯಾರ್ಥಿನಿ ಉತ್ತರ ಪತ್ರಿಕೆಯಲ್ಲಿ “ನಾನು ಬಡ ಕುಟುಂಬದ ಹುಡುಗಿ. ನನ್ನ ತಂದೆ ಕೃಷಿಕರಾಗಿದ್ದು, ನನ್ನ ವಿದ್ಯಾಭ್ಯಾಸದ ಹೊರೆಯನ್ನು ಅವರಿಗೆ ಹೊರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ 318 ಕ್ಕಿಂತ ಕಡಿಮೆ ಅಂಕ ತೆಗೆದರೆ ಮದುವೆ ಮಾಡುವುದಾಗಿ ನನ್ನ ತಂದೆ ಹೇಳಿದ್ದಾರೆ. ಆದರೆ ನನಗೆ ಇಷ್ಟು ಬೇಗ ಮದುವೆಯಾಗಲು ಇಷ್ಟವಿಲ್ಲ. ಸರ್ ದಯವಿಟ್ಟು ನನ್ನನ್ನು ಪಾಸ್ ಮಾಡಿ” ಎಂದು ಉತ್ತರ ಪತ್ರಿಕೆಯಲ್ಲಿ ಮೌಲ್ಯ ಮಾಪಕರಿಗೆ ಮನವಿಯನ್ನು ಮಾಡಿದ್ದಾಳೆ. ಈ ಕುರಿತ ಫೋಟೋವೊಂದು ಇದೀಗ ವೈರಲ್ ಆಗುತ್ತಿದೆ.
ಬಿಹಾರ ಸ್ಕೂಲ್ ಎಕ್ಸಾಮಿನೇಷನ್ ಬೋರ್ಡ್ (BSEB) ಫೆಬ್ರವರಿ 15 ರಿಂದ ಫೆಬ್ರವರಿ 23 ರವರೆಗೆ 2024 ನೇ ತರಗತಿ 10 ಬೋರ್ಡ್ ಪರೀಕ್ಷೆಯನ್ನು ನಡೆಸಿತು. ಗ್ರೇಡಿಂಗ್ ಮಾನದಂಡಗಳ ಆಧಾರದ ಮೇಲೆ, ವಿದ್ಯಾರ್ಥಿಗಳು ಉತ್ತೀರ್ಣರಾಗಲು ಸೈದ್ಧಾಂತಿಕ ಪತ್ರಿಕೆಗಳಲ್ಲಿ ಕನಿಷ್ಠ 30 ಪ್ರತಿಶತ ಮತ್ತು ಪ್ರಾಯೋಗಿಕ ಪರೀಕ್ಷೆಗಳಲ್ಲಿ ಒಟ್ಟಾರೆ ಅಂಕಗಳಲ್ಲಿ 40 ಪ್ರತಿಶತವನ್ನು ಗಳಿಸಬೇಕು.
ಎಲ್ಲಾ ಹೀರೋಗಳ ಜತೆ ಮಾಡಿದ್ದೇನೆ, ಆದ್ರೆ ಈಗ ನನ್ನ ಜೀವನ ಹೀಗಾಗುತ್ತೆ ಅಂದು ಕೊಂಡಿರಲಿಲ್ಲ ಎಂದ ಖ್ಯಾತ ನಟಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − eighteen =
Remember me
