ಮೀರತ್:ಮಾನವ ಸಮಾಜವೇ ತಲೆತಗ್ಗಿಸುವ ವಿಡಿಯೋವೊಂದು ಬೆಳಕಿಗೆ ಬಂದಿರುವ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ:ವಿವಾಹಿತ ಪ್ರಿಯಕರನ್ನು ಭೇಟಿಯಾಗಲು 2200 ಕಿ.ಮೀ. ಪ್ರಯಾಣಿಸಿದ ಮಹಿಳೆ..
ಮೀರತ್‌ನ ಮೆಡಿಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ತೇಜ್‌ಗರ್ಹಿ ಛೇದಕ ಎಂಬಲ್ಲಿ ಈ ಘಟನೆ ನಡೆದಿದ್ದು, ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವೀಡಿಯೊದಲ್ಲಿ, ಅಸಹಾಯಕ ಬಡ ತಾಯಿ ತನ್ನ ಚಿಕ್ಕ ಮಗನ ಮೃತದೇಹವನ್ನು ತಳ್ಳುಗಾಡಿಯಲ್ಲಿ ಹೊತ್ತುಕೊಂಡು ಆತನ ಅಂತಿಮ ಸಂಸ್ಕಾರಕ್ಕಾಗಿ ಸಾರ್ವಜನಿಕರಿಂದ ಹಣವನ್ನು ಕೇಳುತ್ತಿರುವ ದೃಶ್ಯಾವಳಿಗಳು ಕ್ಯಾಮರಾದಲ್ಲಿ ಸೆರೆಯಾಗಿದೆ.
मेरठ में एक माँ आज अपने बेटे के शव को ठेले पर लिए लोगों से अंतिम संस्कार के पैसे मांगती रही, वो चिल्लाती रही “हाय मेरा बेटा.. मेरा बेटा..” लेकिन किसी का दिल नहीं पसीजा । फिर जब वो किसी तरह पुलिस चौकी पहुंची तो चौकी इंचार्ज ने अपनी जेब से पैसे दिए। इंसानियत फिर हुई शर्मसार!pic.twitter.com/EqnoymN4BH
— Shivam Gaur (@ShivamG27190108)September 5, 2023
ಮೃತನನ್ನು ರಾಜು ಎಂದು ಗುರುತಿಸಲಾಗಿದ್ದು, ಈತ ಮೂಲತಃ ಇಟಾವಾ ನಿವಾಸಿಯಾಗಿದ್ದರು. ಆದರೆ ಅವರ ಕುಟುಂಬದೊಂದಿಗೆ ಹಲವು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದು, ಸೋಮವಾರ ಇದ್ದಕ್ಕಿದ್ದಂತೆ ಮನೆಯಿಂದ ಹೊರಟು ಹೋಗಿದ್ದನು. ತಾಯಿ ಆತನಿಗಾಗಿ ಸಾಕಷ್ಟು ಹುಡುಕಾಡಿದರೂ ಸಿಗಲಿಲ್ಲ. ಇದಾದ ಬಳಿಕ ಮಂಗಳವಾರ ಬೆಳಗ್ಗೆ ತೇಜ್‌ಗರ್ಹಿ ಛೇದನದ ರಸ್ತೆ ಬದಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಅಷ್ಟರಲ್ಲಿ ಮೃತನ ಕಿರಿಯ ಸಹೋದರ ತಳ್ಳುಗಾಡಿಯೊಂದಿಗೆ ಬಂದು ಶವವನ್ನು ಅದರ ಮೇಲೆ ಹೊತ್ತುಕೊಂಡು ಹೋಗಿದ್ದಾನೆ.
ಯುವಕನ ಅಂತಿಮ ಸಂಸ್ಕಾರ ಮಾಡುವಂತೆ ತಾಯಿ ಮತ್ತು ಸಹೋದರ ಜನರ ಮುಂದೆ ಬೇಡಿಕೊಂಡರೂ ಯಾರೂ ತಲೆಕೆಡಿಸಿಕೊಂಡಿಲ್ಲ. ನಂತರ ಮಹಿಳೆ ತೇಜ್‌ಗಢಿ ಪೊಲೀಸ್ ಠಾಣೆ ಬಳಿ ತಲುಪಿದ್ದು, ಆ ಬಳಿಕ ಅಂತಿಮ ವಿಧಿವಿಧಾನಕ್ಕಾಗಿ ಹಣವನ್ನು ಸಂಗ್ರಹಿಸಿ ಯುವಕನ ಶವವನ್ನು ಸುಟ್ಟು ಹಾಕಲಾಯಿತು.(ಏಜೆನ್ಸೀಸ್)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two + 8 =
Remember me
