ನವದೆಹಲಿ:ಇಂದು ದೆಹಲಿಯಲ್ಲಿ ನಡೆದ ಲೋಕಸಭೆಯಲ್ಲಿ ಭಾಷಣ ಮಾಡಿದ ಕಾಂಗ್ರೆಸ್​ ಸಂಸದ ರಾಹುಲ್ ಗಾಂಧಿ, ಸದನದಿಂದ ಹೊರ ಹೋಗುವ ವೇಳೆ ಫ್ಲೈಯಿಂಗ್​ ಕಿಸ್​ ಕೊಟ್ಟಿದ್ದಾರೆ. ಇದನ್ನು ಪ್ರತ್ಯೇಕವಾಗಿ ಸದನದಲ್ಲಿದ್ದ ಬಿಜೆಪಿ ಮಹಿಳಾ ಸಂಸದರು ಆರೋಪಿಸಿದ್ದು, ಈ ಬಗ್ಗೆ ನಟಿ, ರಾಜಕಾರಿಣಿ ಹೇಮಾ ಮಾಲಿನಿ, ನಾನು ರಾಹುಲ್​ ಗಾಂಧಿ ಮುತ್ತು ಕೊಟ್ಟಿದ್ದನ್ನು ನೋಡಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ವಾರೆವ್ಹಾ! ಕರ್ನಾಟಕಕ್ಕೆ ಆನೆ “ಬಲ”, ಕರುನಾಡು ಈಗ ಗಜನಾಡು; ಐದು ವರ್ಷದಲ್ಲಿ 346 ವೃದ್ಧಿ
ಕೇಂದ್ರ ಸಚಿವೆ ಮತ್ತು ಭಾರತೀಯ ಜನತಾ ಪಕ್ಷದ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಇತರ ಪಕ್ಷದ ಮಹಿಳಾ ಸದಸ್ಯರು, ರಾಹುಲ್ ಗಾಂಧಿ ಸೃತಿ ಇರಾನಿ ಮತ್ತು ಹಲವು ಮಹಿಳಾ ಸಂಸದರೊಂದಿಗೆ ನಡೆದುಕೊಂಡ ರೀತಿ ಅಕ್ಷಮ್ಯ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ಸಲ್ಲಿಸಿದರು.
ಸದನದಲ್ಲಿ ಘನತೆವೆತ್ತ ಮಹಿಳಾ ಸದಸ್ಯರಿಗೆ ರಾಹುಲ್​ ಗಾಂಧಿ ಅವಮಾನ ಮಾಡಿದ್ದಲ್ಲದೆ, ಈ ಮಹಾ ಸದನದ ಘನತೆಗೆ ಕುಂದು ತಂದಿರುವ ಇಂತಹ ವರ್ತನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಕುರಿತು ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರನ್ನು ಪ್ರಶ್ನಿಸಿದಾಗ, ರಾಹುಲ್ ಗಾಂಧಿಯವರು ಫ್ಲೈಯಿಂಗ್ ಕಿಸ್ ಕೊಟ್ಟಿದ್ದನ್ನು ನಾನು ನೋಡಿಲ್ಲ ಎಂದು ಹೇಳಿದ್ದಾರೆ,(ಏಜೆನ್ಸೀಸ್).
ರಿಲೀಸ್ ಆಯ್ತು ‘ಖುಷಿ’ ಟ್ರೇಲರ್​; ವಿಜಯ್​ ದೇವರಕೊಂಡ-ಸಮಂತಾ ಫ್ಯಾನ್ಸ್​ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
