ಮುಂಬೈ:ಡ್ರೀಮ್​ ಗರ್ಲ್ ಹೇಮಮಾಲಿನಿ ಅಂದು ಇದಕ್ಕಾಗಿ ತುಂಬಾ ಹುಡುಕಾಡಿದ್ದರು. ಆದರೆ ಅವತ್ತು ಎಷ್ಟು ಹುಡುಕಾಡಿದರೂ ಸಿಗದ್ದು ಇತ್ತೀಚೆಗೆ ಸಿಕ್ಕಿದ್ದು, ಅದನ್ನು ಹಂಚಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ.
ಆವತ್ತು ಲೇಖಕ ರಾಮ್​ ಕಮಲ್​ ಮುಖರ್ಜಿ ಅವರು ನನ್ನ ಜೀವನಚರಿತ್ರೆ ‘ಬಿಯಾಂಡ್​ ದ ಡ್ರೀಮ್​ ಗರ್ಲ್’ ಬರೆಯುತ್ತಿದ್ದಾಗ ನಾನು ಇದಕ್ಕಾಗಿ ಬಹಳ ಹುಡುಕಾಡಿದ್ದೆ. ಎಷ್ಟು ಹುಡುಕಾಡಿದರೂ ಸಿಗದ್ದಕ್ಕೆ ತುಂಬ ಬೇಸರವಾಗಿತ್ತು. ಕೊನೆಗೂ ಈಗ ಸಿಕ್ಕಿದ್ದರಿಂದ ತುಂಬ ಖುಷಿಯಾಗಿದೆ. ಹೀಗಾಗಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ಅವರು ದೇವಿಯ ಗೆಟಪ್​ನಲ್ಲಿದ್ದ ಹಳೆಯ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದೊಂದು ಮ್ಯಾಗಜಿನ್​ಗಾಗಿ ಮಾಡಿದ್ದ ಫೋಟೋಶೂಟ್​. ಮ್ಯಾಗಜಿನ್ ಹೆಸರು ನೆನಪಿಲ್ಲ. ಆದರೆ ಇದನ್ನು ನಾನು ಅಂದು ರಾಜ್​ಕಪೂರ್ ಅವರ ಜತೆಗಿನ ಮೊದಲ ಹಿಂದಿ ಸಿನಿಮಾ “ಸಪ್ನೋಂಕಾ ಸೌದಾಗರ್”​ ಶೂಟಿಂಗ್​ಗೆ ಹೋಗುತ್ತ ಎವಿಎಂ ಸ್ಟುಡಿಯೋಸ್​ನಲ್ಲಿ ಕ್ಲಿಕ್ಕಿಸಿದ್ದು. ಆಗ ನನಗೆ 14-15 ವರ್ಷ ಎಂದು ಹೇಮಮಾಲಿನಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + eight =
Remember me
