ವರ್ಜೀನಿಯಾ:ಅದೃಷ್ಟ ಎನ್ನುವುದು ಹೇಗೆ, ಯಾವಾಗ, ಯಾವ ರೂಪದಲ್ಲಿ ಬರುತ್ತದೆಯೋ ತಿಳಿಯುವುದೇ ಕಷ್ಟ. ಕೋಟ್ಯಧಿಪತಿಯಾದವ ಒಂದೇ ದಿನದಲ್ಲಿ ಭಿಕ್ಷೆ ಬೇಡುವಂತವನೂ ಆಗಬಹುದು, ಅದೇ ಇನ್ನೊಂದೆಡೆ ತುತ್ತು ಅನ್ನಕ್ಕೂ ಗತಿ ಇಲ್ಲದವರು ಇದ್ದಕ್ಕಿದ್ದಂತೆಯೇ ಅದೃಷ್ಟ ಖುಲಾಯಿಸಿ ಕೋಟ್ಯಧಿಪತಿಯೂ ಆಗಬಹುದು.
ಅಂಥದ್ದೇ ಒಂದು ಕುತೂಹಲದ ಘಟನೆ ನಡೆದಿದೆ ದೂರದ ವರ್ಜೀನಿಯಾದಲ್ಲಿ. ಅದೆಲ್ಲೋ ನಡೆದಿರುವ ಘಟನೆ ಇಡೀ ವಿಶ್ವದಲ್ಲೇ ವೈರಲ್‌ ಆಗಿದೆಯೆಂದರೆ ಅದರ ಮಹತ್ವ ತಿಳಿದೀತು.ಹೌದು. ಈ ಫೋಟೋದಲ್ಲಿ ಕಾಣಿಸಿತ್ತಿರುವ ಮಹಿಳೆಯರ ಹೆಸರು ಅಲಘಾ ರಿಚ್ಚಿ. ಈಕೆ ವರ್ಜೀನಿಯಾದ ಹೆನರಿಕೋ ಪ್ರದೇಶದವಳು. ಉಳಿಯಲು ಸರಿಯಾದ ಸೂರಿಲ್ಲಾದೆ ಈಕೆ.
ಅದೊಂದು ದಿನ ಇವಳಿಗೆ ವಿಪರೀತ ತಲೆನೋವು ಬಂದಿತು. ಅಂಗಡಿಗೆ ಹೋಗಿ ತಲೆನೋವಿನ ಮಾತ್ರೆಯೊಂದನ್ನು ಖರೀದಿಸಿದಳು. ಅದರ ಜತೆಗೆ ಒಂದು ಸ್ಕ್ರ್ಯಾಚ್‌ ಕಾರ್ಡ್‌ ನೀಡಲಾಯಿತು. ಲಾಟರಿ ರೂಪದ ಕಾರ್ಡ್‌ ಇದು.
ಇದನ್ನೂ ಓದಿ:ಸಂಕಷ್ಟದಲ್ಲಿದ್ದ ತಿರುಮಲನಿಗೆ ಎರಡೇ ವಾರದಲ್ಲಿ ಬಂದ ಆದಾಯ ಎಷ್ಟು ಗೊತ್ತಾ?
ಇದರಲ್ಲೇನು ಮಹಾ ಎಂದುಕೊಂಡ ರಿಚಾಗೆ ಈ ಕಾರ್ಡ್‌ ಬಗ್ಗೆ ಗಮನವೇ ಇರಲಿಲ್ಲ. ತಲೆನೋವು ಬಂದ ಸಂಕಟದಲ್ಲಿ ಇದರ ಬಗ್ಗೆ ಗಮನ ಹರಿಸುವವರಾದರೂ ಯಾರು? ತಲೆನೋವಿನ ಮಾತ್ರೆ ನುಂಗಿ ಆಕೆ ಮಲಗಿಕೊಂಡರು.
ಆದರೆ ಅವರ ಪಕ್ಕದಲ್ಲಿಯೇ ಕೋಟಿಕೋಟಿ ಹಣ ಸ್ಕ್ರ್ಯಾಚ್‌ ಕಾರ್ಡ್‌ನಲ್ಲಿ ಅಡಗಿ ಕುಳಿತದದ್ದು ಅವರಿಗೆ ಅರಿವೇ ಇರಲಿಲ್ಲ. ಮಾರನೆಯ ದಿನ ಕಾರ್ಡ್‌ ಉಜ್ಜಿ ನೋಡಿದಾಗ ತಲೆ ನೋವು ಮಾಯವಾಗುವುದು ದೂರದ ಮಾತು, ಅಲ್ಲಿಯೇ ತಲೆಸುತ್ತಿಬಂದಿತು.
ಏಕೆಂದರೆ ಅವರಿಗೆ ಬರೋಬ್ಬರಿ 5 ಲಕ್ಷ ಡಾಲರ್‌ (ಅಂದರೆ ಸುಮಾರು 3.79 ಕೋಟಿ ರೂಪಾಯಿ) ಲಾಟರಿ ಸಿಕ್ಕಿತ್ತು! ಈ ಲಾಟರಿಯ ಹಣವನ್ನು ಪಡೆಯುತ್ತಿದ್ದಂತೆಯೇ ಈ ಸುದ್ದಿ ವೈರಲ್‌ ಆಗಿ ಸಕತ್‌ ಫೇಮಸ್‌ ಆಗಿದ್ದಾರೆ ಈ ಮಹಿಳೆ. ಇದೀಗ ಹಣದಿಂದ ತಮ್ಮ ಮನೆಯನ್ನು ರಿಪೇರಿ ಮಾಡಿಸಿಕೊಳ್ಳುವಲ್ಲಿ ತೊಡಗಿದ್ದಾರೆ.(ಏಜೆನ್ಸೀಸ್‌)
ಉದ್ಯೋಗ ಸೃಷ್ಟಿಗೆ ಇಸ್ರೋದಿಂದ ಮಹತ್ವದ ಘೋಷಣೆ: ಖಾಸಗಿಯವರಿಗೂ ತೆರೆದ ಬಾಗಿಲು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen − eighteen =
Remember me
