ಲಖನೌ:ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಉತ್ತರಭಾರತದ ಹಲವೆಡೆ ದಟ್ಟವಾದ ಮಂಜು ಆವರಿಸಿದ್ದು, ರಸ್ತೆ ಸಂಚಾರ, ವಿಮಾನ ಮತ್ತು ರೈಲು ಸೇವೆಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರಿವೆ. ಗೋಚರತೆ ಬಹುತೇಕ ಶೂನ್ಯವಾಗಿದೆ. ರಸ್ತೆಗಳೆಲ್ಲಾ ದಟ್ಟ ಮಂಜಿನಿಂದ ಕೂಡಿದ್ದು ಸರಣಿ ಅಪಘಾತಗಳು ಸಂಭವಿಸುತ್ತಿವೆ.
ಇದೀಗ ಉತ್ತರಪ್ರದೇಶ ಆಗ್ರಾ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಇದರಲ್ಲಿ ಕೋಳಿ ಸಾಗಿಸುತ್ತಿದ್ದ ಟೆಂಪೋ ಒಂದು ಅಪಘಾತಕ್ಕಿಡಾಗಿದೆ. ಈ ವಿಚಾರವನ್ನು ತಿಳಿದ ಸ್ಥಳೀಯರು ಕ್ಷಣಾರ್ಧದಲ್ಲೇ ಕೋಳಿಗಳನ್ನು ಹೊತ್ತೊಯ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
In UP's Agra, a lorry carrying chickens met with an accident in a road pile up due to dense fog. Commuters can be seen grabbing chickens and fleeing from the spot. Some bundled them in sack.pic.twitter.com/hBUaFCjj7g
ಇದನ್ನೂ ಓದಿ:ದೇಶದಲ್ಲಿ ಮತ್ತೊಮ್ಮೆ ಪುಲ್ವಾಮಾ ದಾಳಿ ನಡೆಯಲಿದೆ; ಬೆದರಿಕೆ ಹಾಕಿದ ವಿದ್ಯಾರ್ಥಿ ಅರೆಸ್ಟ್
ವೈರಲ್​ ಆಗಿರುವ ವಿಡಿಯೋದಲ್ಲಿ ಸರಣಿ ಅಪಘಾತದಿಂದ ವಾಹನಗಳು ಜಖಂಗೊಂಡಿದ್ದು, ಜನರು ಚೆಲ್ಲಾಪಿಲ್ಲಿಯಾಗಿ ರಸ್ತೆಗಳಲ್ಲಿ ಬಿದ್ದಿರುವ ಕೋಳಿಗಳನ್ನು ಚೀಲದಲ್ಲಿ ಹಾಗೂ ಬ್ಯಾಗ್​ಗಳಲ್ಲಿ ತುಂಬಿಕೊಳ್ಳುತ್ತಿರುವುದನ್ನು ನೋಡಬಹುದಾಗಿದೆ. ಇತ್ತ ಜನರು ತಮ್ಮ ಪಾಡಿಗೆ ತಾವು ಕೋಳಿಗಳನ್ನು ತೆಗೆದುಕೊಳ್ಳುತ್ತಿದ್ದರೆ ಅತ್ತ ಗಾಯಾಳುಗಳು ನರಳಾಡುತ್ತಿರುವುದನ್ನು ವೈರಲ್​ ವಿಡಿಯೋದಲ್ಲಿ ನೋಡಬಹುದಾಗಿದೆ.
ವಿಡಿಯೋ ವೈರಲ್​ ಆದ ಬೆನ್ನಲ್ಲೇ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದು, ಗಾಯಾಳುಗಳಿಗಿಂತ ನಿಮಗೆ ಕೋಳಿಯೇ ಹೆಚ್ಚಾಯಿತಾ ಎಂದು ಹಲವರು ಪ್ರಶ್ನಿಸಿದ್ದಾರೆ. ಟೆಂಪೋದಲ್ಲಿ ಸುಮಾರು 2,50,000 ರೂ. ಮೌಲ್ಯದ ಕೋಳಿಗಳಿದ್ದವು ಎಂದು ಅಂದಾಜಿಸಲಾಗಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × three =
Remember me
