ತಮಿಳುನಾಡಿನ ಆನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ಸುದ್ದಿಯಾಗಿದೆ. ಆದರೆ ಕಾರಣ ಮಾತ್ರ ನಿಜಕ್ಕೂ ಅಚ್ಚರಿ ತರಿಸುವಂಥದ್ದು.
ಇಲ್ಲೊಂದು ಹೆಣ್ಣಾನೆ ತನ್ನ ಸೂಪರ್, ವಿಭಿನ್ನವಾದ​ ಹೇರ್​​ಸ್ಟೈಲ್​​ನಿಂದ ಸುದ್ದಿಯಾಗಿದೆ. ತಮಿಳುನಾಡಿನ ಮನ್ನಾರ್​ಗುಡಿ ಪಟ್ಟಣದಲ್ಲಿರುವ ರಾಜಗೋಪಾಲಸ್ವಾಮಿ ದೇವಸ್ಥಾನದಲ್ಲಿ ಸೆಂಗಮಲಮ್​ ಎಂಬ ಆನೆಯಿದೆ. ಅದರ ಕೂದಲಿಗೆ ಮಾಡಲಾದ ಬಾಬ್​ ಕಟ್​ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ದೇವಸ್ಥಾನಕ್ಕೆ ಬಂದು ಆನೆ ನೋಡಿದವರೆಲ್ಲ ಅದರ ಹೇರ್​​ಸ್ಟೈಲ್​ ಮೇಲೆ ಕಣ್ಣು ಹಾಕುತ್ತಿದ್ದಾರೆ. ಸೆಂಗಮಲಮ್​​ಗೆ ಬಾಬ್​ ಕಟ್​ ಸೆಂಗಮಲಮ್​ ಎಂದೇ ಹೆಸರು ಬಂದಿದೆ.
ಈ ಆನೆಯನ್ನು 2013ರಲ್ಲಿ ಕೇರಳದಿಂದ ತಮಿಳುನಾಡಿಗೆ ಕರೆತರಲಾಗಿದೆ. ಇದರ ಇತ್ತೀಚಿನ ಎರಡು ಫೋಟೋವನ್ನು ಐಎಫ್​ಎಸ್​ ಅಧಿಕಾರಿ ಸುಧಾ ರಾಮನ್​ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಈ ಆನೆ ಬಾಬ್​ ಕಟ್​ ಸೆಂಗಮಲಮ್​ ಎಂದೇ ಪ್ರಸಿದ್ಧವಾಗಿದೆ. ಇದರ ಹೇರ್​​ಸ್ಟೈಲ್​ಗೆ ಸಿಕ್ಕಾಪಟೆ ಜನ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ ಎಂದು ಕ್ಯಾಪ್ಷನ್​ ಬರೆದಿದ್ದಾರೆ.ಇದನ್ನೂ ಓದಿ:ಕಾನ್ಪುರ ಪೊಲೀಸ್ ಹತ್ಯೆ ಪ್ರಕರಣ; ತನಿಖೆ ನಡೆದಷ್ಟೂ ಪೊಲೀಸರೇ ಸಿಕ್ಕಿಬೀಳುತ್ತಿದ್ದಾರೆ…!
ಆನೆಗೆ ವಿಭಿನ್ನವಾಗಿ ಹೇರ್​ ಕಟ್​ ಮಾಡಿದ್ದು, ಅದರ ಮಾವುತ ಎಸ್​. ರಾಜಗೋಪಾಲ್​ ಅವರು. ಇದಕ್ಕೆ ಸ್ನಾನ ಮಾಡಿಸಲೆಂದೇ 2018ರಲ್ಲಿ 45,000 ರೂ.ವೆಚ್ಚದಲ್ಲಿ ಶವರ್​ ನಿರ್ಮಾಣ ಮಾಡಿದ್ದಾರೆ.
ಸೆಂಗಮಲಮ್​ ನನ್ನ ಮಗುವಿದ್ದ ಹಾಗೆ. ಅದು ಚೆನ್ನಾಗಿ ಕಾಣಿಸಬೇಕು ಎಂಬುದು ನನ್ನ ಆಸೆ. ಒಂದು ಬಾರಿ ಪುಟ್ಟ ಆನೆ ಮರಿಗೆ ಬಾಬ್​ ಕಟ್​ ಮಾಡಿದ್ದನ್ನು ಇಂಟರ್​ನೆಟ್​​ನಲ್ಲಿ ನೋಡಿದೆ. ತುಂಬ ಇಷ್ಟವಾಯಿತು. ಅದನ್ನು ಸೆಂಗಮಲಮ್​ ಮೇಲೆಯೂ ಪ್ರಯೋಗ ಮಾಡಿದೆ. ಕಳೆದ ಆರು ವರ್ಷಗಳಿಂದಲೂ ಅದರ ಕೂದಲನ್ನು ಜೋಪಾನವಾಗಿ ನಿರ್ವಹಣೆ ಮಾಡುತ್ತಿದ್ದೇನೆ ಎಂದು ರಾಜಗೋಪಾಲ್​ ತಿಳಿಸಿದ್ದಾರೆ. (ಏಜೆನ್ಸೀಸ್​)
ಬಾಲ್ಯದಲ್ಲಿ ಸ್ಪ್ಯಾನಿಷ್‌ ಫ್ಲೂ , ಈಗ ಕರೊನಾ ಗೆದ್ದ 106 ವರ್ಷದ ಅಜ್ಜನ ಕಥೆಯೇ ರೋಚಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
