ನವದೆಹಲಿ:ಈ ಬಾರಿಯ ವಿಶ್ವ ಮಹಿಳಾ ದಿನದ ಸಂದರ್ಭದಲ್ಲಿ, ರಿಲೆಯನ್ಸ್ ಫೌಂಡೇಶನ್​, ಮಹಿಳೆಯರಿಗೇ ಮೀಸಲಾದ ಸೋಷಿಯಲ್ ನೆಟ್ವರ್ಕಿಂಗ್ ಸ್ಪೇಸ್​ ಒದಗಿಸುವ ಮತ್ತು ಆರೋಗ್ಯ, ಜೀವನಶೈಲಿ, ಉದ್ಯೋಗ, ಫಿಟ್​ನೆಸ್​ ಮುಂತಾಗಿ ಸಮಗ್ರ ಮಾಹಿತಿ ಒದಗಿಸುವ ವಿಶೇಷ ಡಿಜಿಟಲ್ ವೇದಿಕೆಯನ್ನು ರೂಪಿಸಿದೆ. “ಹರ್​ಸರ್ಕಲ್​”(HerCircle.in) ಎಂಬ ಹೆಸರಿನಲ್ಲಿ ಮಹಿಳೆಯರಿಗೇ ಮೀಸಲಾದ, ಸ್ಮಾರ್ಟ್ ಫೋನ್​ಗಳಲ್ಲಿ ಲಭ್ಯವಾಗುವ ಆ್ಯಪ್​, ಮತ್ತು ವೆಬ್​ಸೈಟ್​ಗಳಿಗೆ ನೀತಾ ಅಂಬಾನಿ ಚಾಲನೆ ನೀಡಿದ್ದಾರೆ.
‘ಹರ್​ಸರ್ಕಲ್​​’ನಲ್ಲಿ ಸಮಾನ ಮನಸ್ಕರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಮಹಿಳೆಯರಿಗೆ ನೆಟ್​​ವರ್ಕ್​ ಕಲ್ಪಿಸಲಾಗಿದೆ. ಜೊತೆಗೆ, ಟ್ರೆಂಡಿಂಗ್ ಫ್ಯಾಶನ್ ಮತ್ತು ಲೈಫ್​ಸ್ಟೈಲ್, ಪ್ರೇರಣಾದಾಯಕ ಕಥೆಗಳು, ಮಹಿಳಾ ಸಂಬಂಧಿ ಬೆಳವಣಿಗೆಗಳ ಬಗೆಗಿನ ಸುದ್ದಿಗಳು ಎಲ್ಲವೂ ಲಭ್ಯ. ಉದ್ಯೋಗಸ್ಥ ಮಹಿಳೆಯರಿಗೆ ತಮ್ಮ ಕೌಶಲ್ಯಾಭಿವೃದ್ಧಿಗೆ ವಿವಿಧ ತರಗತಿಗಳು, ನೂತನ ಉದ್ಯೋಗಾವಕಾಶಗಳು ಮಾಹಿತಿ ಲಭ್ಯವಿದ್ದರೆ, ಗೃಹಿಣಿಯರಿಗೆ ಮನೆ ನಿರ್ವಹಣೆ, ಹೊಸ ಹೊಸ ರೆಸಿಪಿ ಮುಂತಾದಂತೆ ಮಾಹಿತಿ ಇರಲಿದೆ.
ಮಹಿಳೆಯರ ದಿನಕ್ಕೆ ನೀತಾ ಅಂಬಾನಿ ಗಿಫ್ಟ್ವಿಶ್ವ ಮಹಿಳಾ ದಿನದ ಉಡುಗೊರೆಯಾಗಿ, ರಿಲೆಯನ್ಸ್ ಫೌಂಡೇಶನ್​, ಮಹಿಳೆಯರಿಗೆ ಸೋಷಿಯಲ್ ನೆಟ್ವರ್ಕಿಂಗ್ ಜೊತೆಗೆ ಫಿಟ್​ನೆಸ್​, ಲೈಫ್​ಸ್ಟೈಲ್, ಆರೋಗ್ಯ, ಉದ್ಯೋಗದ ಬಗ್ಗೆ ಮಾಹಿತಿ ನೀಡುವ ಹರ್​ಸರ್ಕಲ್(HerCircle)​ ಆ್ಯಪ್ ಮತ್ತು ವೆಬ್​ಸೈಟ್​ಗೆ ಚಾಲನೆ ನೀಡಿದೆ.#DigitalPlatformWomen#HerCirclepic.twitter.com/8DCoa1uY95— Vijayavani (@VVani4U)March 7, 2021
ಮಹಿಳೆಯರ ದಿನಕ್ಕೆ ನೀತಾ ಅಂಬಾನಿ ಗಿಫ್ಟ್ವಿಶ್ವ ಮಹಿಳಾ ದಿನದ ಉಡುಗೊರೆಯಾಗಿ, ರಿಲೆಯನ್ಸ್ ಫೌಂಡೇಶನ್​, ಮಹಿಳೆಯರಿಗೆ ಸೋಷಿಯಲ್ ನೆಟ್ವರ್ಕಿಂಗ್ ಜೊತೆಗೆ ಫಿಟ್​ನೆಸ್​, ಲೈಫ್​ಸ್ಟೈಲ್, ಆರೋಗ್ಯ, ಉದ್ಯೋಗದ ಬಗ್ಗೆ ಮಾಹಿತಿ ನೀಡುವ ಹರ್​ಸರ್ಕಲ್(HerCircle)​ ಆ್ಯಪ್ ಮತ್ತು ವೆಬ್​ಸೈಟ್​ಗೆ ಚಾಲನೆ ನೀಡಿದೆ.#DigitalPlatformWomen#HerCirclepic.twitter.com/8DCoa1uY95

ಇನ್ನು ಫಿಟ್​​ನೆಸ್​ ಬಗ್ಗೆ ಆಸಕ್ತಿ ಇರುವ ಮಹಿಳೆಯರಿಗೆ ಪರ್ಸನಲೈಸ್ಡ್​ ಟ್ರ್ಯಾಕರ್​​ಗಳು, ಫಿಟ್​ನೆಸ್​ ಮಾಡೆಲ್ ಮತ್ತು ಶೆಡ್ಯೂಲ್​ಗಳು, ಡಯಟ್​ ಪ್ಲಾನ್ ಮುಂತಾದ ಸೌಲಭ್ಯ ಇದರಲ್ಲಿದೆ. ಜೊತೆಗೆ ಸದಸ್ಯರಿಗೆ ಆರೋಗ್ಯದ ವಿಚಾರಗಳನ್ನು ತಜ್ಞರೊಂದಿಗೆ ಚರ್ಚಿಸಲು ಉಚಿತ ಅವಕಾಶವೂ ಉಂಟು.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ನಟಿ ಪ್ರಿಯಾಂಕಾರ ಇತ್ತೀಚಿನ ಸಾಹಸ ಏನು ಗೊತ್ತೆ?!
‘ಮೋದಿ ಕಿ ದುಕಾನ್’​ನಲ್ಲಿ ​​ಕೈಗೆಟಕುವ ಬೆಲೆಯಲ್ಲಿ ಔಷಧಿಗಳು


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − two =
Remember me
