ನವದೆಹಲಿ:ಇಂಟರ್​ನೆಟ್​ ಸರ್ಚ್​ ಇಂಜಿನ್​ ಗೂಗಲ್​​ ಮೂಲಕ ಹುಡುಕಲ್ಪಟ್ಟ 2021ರ ಟಾಪ್​ ಟ್ರೆಂಡಿಂಗ್​ ಸರ್ಚ್​​ಗಳ ವಿವರವನ್ನು ಕಂಪೆನಿ ಪ್ರಕಟಿಸಿದೆ. ಈ ವರ್ಷ ಭಾರತದಲ್ಲಿ ಗೂಗಲ್​​ ಟಾಪ್​ ಟ್ರೆಂಡಿಂಗ್​ ಸರ್ಚ್​ ಎಂದರೆ ಇಂಡಿಯನ್​ ಪ್ರೀಮಿಯರ್​ ಲೀಗ್​(ಐಪಿಎಲ್​) ಆಗಿದೆ. ಟಾಪ್​​ ಟ್ರೆಂಡಿಂಗ್​ ಪರ್ಸನಾಲಿಟಿಗಳ ಪಟ್ಟಿಯಲ್ಲಿ ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಚಿನ್ನ ಗೆದ್ದು ಭಾರತಕ್ಕೆ ಹೆಮ್ಮೆ ತಂದ ನೀರಜ್​ ಚೋಪ್ರ ಮೊದಲಿಗರಾಗಿದ್ದಾರೆ. ಹಾಗೇ ಡ್ರಗ್ಸ್​​ ಕೇಸಿನಲ್ಲಿ ಬಂಧನಕ್ಕೊಳಗಾಗಿ ವಿವಾದಕ್ಕೆ ಸಿಕ್ಕ ಬಾಲಿವುಡ್​ ಸ್ಟಾರ್​ ಶಾರುಖ್​ ಪುತ್ರ ಆರ್ಯನ್​ ಖಾನ್ ಕೂಡ ಭಾರತದ ಟಾಪ್​ ಟೆನ್​ನಲ್ಲಿ ಸ್ಥಾನ ಪಡೆದಿದ್ದಾರೆ.​
ಟ್ರೆಂಡಿಂಗ್​ ಟಾಪಿಕ್​ಗಳ ಟಾಪ್​ ಲಿಸ್ಟ್​ನಲ್ಲಿ ಕರೊನಾ ಕಾರಣದಿಂದಾಗಿ ಎರಡು ಕಂತುಗಳಲ್ಲಿ ನಡೆದ ಐಪಿಎಲ್​​ ಮೊದಲ ಸ್ಥಾನ ಗಳಿಸಿದರೆ, ಎರಡನೇ ಸ್ಥಾನದಲ್ಲಿ ಕೋವಿನ್​ ಕಂಡುಬಂದಿದೆ. ತದನಂತರದಲ್ಲಿ ಐಸಿಸಿ ಟಿ20 ವರ್ಲ್ಡ್​ ಕಪ್​, ಯೂರೋ ಕಪ್​ ಮತ್ತು ಟೋಕಿಯೋ ಒಲಿಂಪಿಕ್ಸ್​​ ಸ್ಥಾನ ಪಡೆದಿವೆ. ಕೋವಿಡ್​ ವ್ಯಾಕ್ಸಿನ್​​ ಆರನೇ ಅತಿಹೆಚ್ಚು ಸರ್ಚ್​ ಮಾಡಲಾದ ವಿಷಯವಾಗಿದೆ. ಏಳನೇ ಸ್ಥಾನದಲ್ಲಿ ಫ್ರೀ ಫೈರ್​ ರೀಡೀಮ್​ ಕೋಡ್​ ಮತ್ತು ಕೋಪಾ ಅಮೆರಿಕ ಕಂಡುಬಂದರೆ, ನೀರಜ್​ ಚೋಪ್ರ ಮತ್ತು ಆರ್ಯನ್​ ಖಾನ್​ ಕ್ರಮವಾಗಿ 9ನೇ ಮತ್ತು 10ನೇ ಅತಿಹೆಚ್ಚು ಸರ್ಚ್​ ಆದ ಟಾಪಿಕ್​ಗಳಲ್ಲಿದ್ದಾರೆ.
ಇದನ್ನೂ ಓದಿ:ನೀರು ಕೇಳಿದರೆ ಮೂತ್ರ ಕುಡಿಸಿದ ಆರೋಪ ಹೊತ್ತ ಎಸ್​ಐ ಸಸ್ಪೆಂಡ್​
ಇನ್ನು ಟಾಪ್​ ಟ್ರೆಂಡಿಂಗ್ ಪರ್ಸನಾಲಿಟಿಗಳ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದ ಟೆಸ್ಲಾ ಮುಖ್ಯಸ್ಥ ಎಲಾನ್​ ಮಸ್ಕ್​ ಜೊತೆಗೂ ನೀರಜ್​ ಚೋಪ್ರಾರ ಹೆಸರು ಎದ್ದುಕಂಡಿದೆ. ಜೊತೆಗೆ, ಆರ್ಯನ್​ ಖಾನ್ ಮತ್ತು ರೂಪದರ್ಶಿ-ನಟಿ ಶಹನಾಜ್​ ಗಿಲ್​, ಬಾಲಿವುಡ್​ ನಟ ವಿಕಿ ಕೌಶಲ್​ ಮತ್ತು ಬ್ಯಾಡ್ಮಿಂಟನ್​ ತಾರೆ ಪಿ.ವಿ.ಸಿಂಧು ಹೆಸರುಗಳು ಕಂಡುಬಂದಿವೆ.
ಕೋವಿಡ್​-19 ಸಂಬಂಧಿತ ಸರ್ಚ್​ಗಳು ಗೂಗಲ್​ನ ‘ಹೌ ಟು’ ಕ್ಯಾಟಗರಿಯಲ್ಲಿ ಅಗ್ರಸ್ಥಾನ ಪಡೆದಿದೆ. ಕೋವಿಡ್​ ಲಸಿಕೆಗೆ ನೋಂದಾಯಿಸಿಕೊಳ್ಳುವುದು ಹೇಗೆ? ಲಸಿಕೆ ಸರ್ಟಿಫಿಕೇಟ್​ ಡೌನ್​ಲೋಡ್ ಮಾಡೋದು ಹೇಗೆ? ಮತ್ತು ಆಕ್ಸಿಜನ್​ ಮಟ್ಟ ಹೆಚ್ಚಿಸಿಕೊಳ್ಳುವುದು ಹೇಗೆ? – ಎಂಬ ಸರ್ಚ್​ಗಳು ಈ ವಿಭಾಗದಲ್ಲಿ ಟಾಪ್​ 3. ಎಲಾನ್​ ಮಸ್ಕ್​​ರಿಂದ ಹೆಚ್ಚು ಜನಪ್ರಿಯತೆ ಕಂಡ ಕ್ರಿಪ್ಟೊ ಕರೆನ್ಸಿ ಕೂಡ ಈ ವಿಭಾಗದಲ್ಲಿ ಕಂಡುಬಂದಿದ್ದು, ಬಿಟ್​ಕಾಯಿನ್​ನಲ್ಲಿ ಹೂಡಿಕೆ ಮಾಡುವುದು ಹೇಗೆ ? ಎಂಬ ಪ್ರಶ್ನೆ 9ನೇ ಅತಿಹೆಚ್ಚು ಟ್ರೆಂಡಿಂಗ್​ ಹೌ ಟು ಆಗಿದೆ.(ಏಜೆನ್ಸೀಸ್)
‘ಮೊಬೈಲ್​ ರೂಮಲ್ಲೇ ಬಿಟ್ಟು ಬನ್ನಿ’ – ಅತಿಥಿಗಳಿಗೆ ವಿಕಿ-ಕತ್ರೀನಾ ಓಲೆ! ಅಭಿಮಾನಿಗಳಿಗೆ ಒಟಿಟಿಯಲ್ಲಿ ಮದುವೆ ದೃಶ್ಯಾವಳಿ?

300 ರೂಪಾಯಿಗೆ ಜಗಳ.. ಅಂಗಡಿ ಮಾಲಿಕನ ಮೇಲೆ ಕಾರು ಹಾಯಿಸಿದ ಸೋದರರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − three =
Remember me
