ನವದೆಹಲಿ:ದೇಶದ ಮಹತ್ವಾಕಾಂಕ್ಷೆಯ ಹಾಗೂ ಹೆಮ್ಮೆಯ ನೂತನ ಸಂಸತ್ ಭವನ ನಾಡಿದ್ದು ಅದ್ಧೂರಿಯಾಗಿ ಉದ್ಘಾಟನೆಗೊಳ್ಳಲಿದ್ದು, ಭವನದ ಸೊಬಗನ್ನು ಒಳಗೊಂಡ ವಿಡಿಯೋ ತುಣುಕೊಂದು ಬಿಡುಗಡೆಯಾಗಿದೆ.ಪ್ರಧಾನಿ ನರೇಂದ್ರ ಮೋದಿಯವರೇ ಈ ವಿಡಿಯೋ ಹಂಚಿಕೊಂಡಿದ್ದು, ಅದಕ್ಕೆ ಸಾರ್ವಜನಿಕರು ತಮ್ಮದೇ ವಾಯ್ಸ್​ಓವರ್​​ ನೀಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡು ಸಂಭ್ರಮಿಸುವ ಅವಕಾಶವನ್ನೂ ಕಲ್ಪಿಸಿದ್ದಾರೆ.
ವೀರ ಸಾರ್ವಕರ್ ಅವರ ಜನ್ಮದಿನವಾದ ಮೇ 28ರಂದು ಉದ್ಘಾಟನೆ ಆಗಲಿರುವ ಈ ಸಂಸತ್ ಭವನ ಹೇಗಿದೆ ಎಂಬ ಝಲಕ್ ಈ ವಿಡಿಯೋದಲ್ಲಿದೆ. ಈ ಸಂಸತ್ ಭವನ ನಿರ್ಮಾಣಕ್ಕೆ 2020ರ ಡಿ.10ರಂದು ಶಂಕುಸ್ಥಾಪನೆ ಮಾಡಲಾಗಿತ್ತು. ಆ ಬಳಿಕ ಕರೊನಾ ಸಾಂಕ್ರಾಮಿಕ ಪಿಡುಗು ಬಾಧಿಸಿದ್ದರೂ, ಸಂಸತ್ ಭವನದ ಭವ್ಯತೆಗೆ ಕಿಂಚಿತ್ತೂ ಲೋಪವಾಗದಂತೆ ಅದ್ಧೂರಿಯಾಗೇ ನಿರ್ಮಾಣವಾಗುವಂತೆ ಪ್ರಧಾನಿ ಮೋದಿ ಕ್ರಮಕೈಗೊಂಡಿದ್ದರು.
ಇದನ್ನೂ ಓದಿ:ಪೂಜೆಯಿಂದಾಗಿ ಪ್ರಾಣಾಪಾಯದಿಂದ ಪಾರಾದ ಉದ್ಯಮಿ!; ಆಗಿದ್ದೇನು?​
ತ್ರಿಕೋನಾಕಾರದ ನಾಲ್ಕಂತಸ್ತಿನ ಈ ಕಟ್ಟಡದ ವಿಸ್ತೀರ್ಣ 64,500 ಚದರ ಮೀಟರ್ ಆಗಿದ್ದು, ಇದರ ನಿರ್ಮಾಣಕ್ಕೆ ಬರೋಬ್ಬರಿ 1,200 ಕೋಟಿ ರೂಪಾಯಿ ವೆಚ್ಚ ತಗುಲಿದೆ. ಈ ಭವನದ ಮೇಲೆ ರಾಷ್ಟ್ರೀಯ ಲಾಂಛನದ ಕಂಚಿನ ಪ್ರತಿರೂಪವಿದ್ದು, 6.5 ಮೀಟರ್ ಎತ್ತರದ ಇದರ ತೂಕವೇ 9500 ಕಿಲೋಗ್ರಾಂ ಇದೆ.
ಭವನಕ್ಕೆ ಒಂದಲ್ಲ, ಎರಡಲ್ಲ, ಮೂರು ಪ್ರವೇಶವಿದ್ದು, ಜ್ಞಾನದ್ವಾರ, ಶಕ್ತಿದ್ವಾರ, ಕರ್ಮದ್ವಾರ ಎಂದು ಒಂದೊಂದಕ್ಕೂ ವಿಶೇಷ ಹೆಸರು ಕೊಡಲಾಗಿದೆ. ಒಳಗೆ 1,280 ಸಂಸದರಿಗೆ ಆಸನ ವ್ಯವಸ್ಥೆ ಮಾಡಲಾಗಿದ್ದು, ಅದು ಒಪ್ಪವಾಗಿ ಜೋಡಿಸಿದಂತಿದೆ.
ಇದನ್ನೂ ಓದಿ:ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಬಿದ್ದ ಕೊಂಬೆ; ಮುರಿದೇ ಹೋಯ್ತು ಸವಾರನ ಕಾಲು, ತಲೆಗೆ ಗಂಭೀರ ಗಾಯ!
ಲೋಕಸಭೆ-ರಾಜ್ಯಸಭೆಯ ಸದಸ್ಯರ ಮೂಲಕ ದೇಶದ ಜನರ ಹಿತಕ್ಕಾಗಿ ಚಿಂತನೆ, ಚರ್ಚೆ, ಕಾನೂನು ರಚನೆ ಮುಂತಾದ ಧ್ಯೇಯದಿಂದ ನಿರ್ಮಿಸಲಾದ ಈ ಭವ್ಯ ಭವನದ ಸೊಬಗಿನ ವೀಕ್ಷಣೆಯೇ ಒಂದು ವೈಭೋಗ ಎಂದರೂ ಅತಿಶಯೋಕ್ತಿಯೇನಲ್ಲ.
ಕಣ್ತುಂಬಿಕೊಳ್ಳಿ ನೂತನ ಸಂಸತ್ ಭವನದ ಈ ಸೊಬಗ..ಈ ಭವ್ಯ ಭವನದ ಸೊಬಗಿನ ವೀಕ್ಷಣೆಯೇ ಒಂದು ವೈಭೋಗ..pic.twitter.com/gnVzARAOD0
— Vijayavani (@VVani4U)May 26, 2023

ದಂಪತಿ ಮಧ್ಯೆ ಪ್ರೀತಿ ಇದ್ದರೂ ದಾಂಪತ್ಯ ದ್ರೋಹ; ವಿವಾಹೇತರ ಸಂಬಂಧದ ಬಗ್ಗೆ ಇಲ್ಲ ಪಶ್ಚಾತ್ತಾಪ: ಏನಿದು ಅಧ್ಯಯನ?

‘ನಿನ್ನನ್ನು, ನಿನ್ನ ಮಕ್ಕಳನ್ನು ಜೀವಸಹಿತ ಬಿಡಲ್ಲ’ ಎಂದು ಕೆಎಎಸ್​ ಅಧಿಕಾರಿಗೆ ಕೊಲೆ ಬೆದರಿಕೆ: ಡಾ.ಸಂಜಯ್ ವಿರುದ್ಧ ಎಫ್​ಐಆರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − three =
Remember me
