ನವದೆಹಲಿ:ಹೊಸ ವರ್ಷ ಎಂದ ಮೇಲೆ ಜನರು ಹೊಸದೇನನ್ನಾದರೂ ಶುರು ಮಾಡುತ್ತಾರೆ. ವಿಶೇಷವಾದ ಏನನ್ನಾದರೂ ಆರಂಭಿಸುವುದಿದ್ದರೆ ಅದಕ್ಕೆ ಹೊಸ ವರ್ಷದಂಥ ವಿಶೇಷ ದಿನಗಳನ್ನೇ ಆರಿಸಿಕೊಳ್ಳುತ್ತಾರೆ. ಇನ್ನು ತಾವು ಅಪ್ಪ-ಅಮ್ಮ ಎನಿಸಿಕೊಳ್ಳುವ ಅಥವಾ ತಮಗೆ ಮಗುವಾಗುವ ದಿನಕ್ಕೂ ಹಲವರು ಜನವರಿ ಒಂದನ್ನೇ ಆರಿಸಿಕೊಳ್ಳುವುದು ಹೊಸದೇನಲ್ಲ.
ಯುನಿಸೆಫ್​​ ಸಂಸ್ಥೆ ಭಾರತ ಮಾತ್ರವಲ್ಲದೆ ಜಗತ್ತಿನಲ್ಲಿ ಹೊಸ ವರ್ಷದ ದಿನದಂದು ಎಷ್ಟು ಮಕ್ಕಳು ಹುಟ್ಟಬಹುದು ಎಂಬ ಲೆಕ್ಕಾಚಾರವನ್ನೂ ಮಾಡಿದೆ. ವಿಶೇಷವೆಂದರೆ ಇವತ್ತು ಭಾರತದಲ್ಲೇ ಅತಿ ಹೆಚ್ಚು ಮಕ್ಕಳು ಜನಿಸಲಿದ್ದಾರಂತೆ. ಯುನಿಸೆಫ್​ ಲೆಕ್ಕಾಚಾರದ ಪ್ರಕಾರ, ಚೀನಾದಲ್ಲಿ 35,615, ನೈಜೀರಿಯಾ- 21,439, ಪಾಕಿಸ್ತಾನ- 14,161, ಇಂಡೊನೇಷ್ಯಾ- 12,336, ಇಥಿಯೋಪಿಯಾ- 12,006, ಅಮೆರಿಕ- 10,312, ಈಜಿಪ್ಟ್​- 9,455, ಬಾಂಗ್ಲಾ ದೇಶ- 9,236, ಕಾಂಗೋ ಗಣರಾಜ್ಯದಲ್ಲಿ 8,640 ಮಕ್ಕಳು ಇಂದು ಜನಿಸಲಿವೆ.
ಇದನ್ನೂ ಓದಿ:ಪತ್ನಿಗೆ ತಿಳಿಯದಂತೆ ಆರು ತಿಂಗಳ ಮಗು ಕಯ್ದೊಯ್ದು ಮಾರಾಟ ಮಾಡಿದ ಅಪ್ಪ!
ಯುಎನ್​​ನ ವರ್ಲ್ಡ್ ಪಾಪ್ಯುಲೇಷನ್​ ಪ್ರಾಸ್ಪೆಕ್ಟ್ಸ್​(2019)ರ ಅಂಕಿ-ಅಂಶಗಳನ್ನು ಆಧರಿಸಿ ಯುನಿಸೆಫ್ 2021ರ ಜನವರಿ 1ರಂದು ಜನಿಸಲಿರುವ ಮಕ್ಕಳ ಪ್ರಮಾಣವನ್ನು ಅಂದಾಜು ಮಾಡಿದೆ. ಆ ಪ್ರಕಾರ ಭಾರತದಲ್ಲಿ ಇಂದು 60 ಸಾವಿರ ಮಕ್ಕಳು ಜನಿಸಲಿದ್ದರೆ, ಜಗತ್ತಿನಲ್ಲಿ ಒಟ್ಟು 3.7 ಕೋಟಿ ಮಕ್ಕಳು ಜನಿಸಲಿವೆ ಎಂದು ಅಂದಾಜಿಸಲಾಗಿದೆ. (ಏಜೆನ್ಸೀಸ್​)
ನಿನ್ನೆ ದೀಪಿಕಾ ಪಡುಕೋಣೆ ಹಾಗೇಕೆ ಮಾಡಿದ್ರು?!; ಎಲ್ಲ ತೆಗೆದ ಅವರಿಂದು ಫೀಲಿಂಗ್ ಹೇಳಿಕೊಂಡಿದ್ದಾರೆ…

ಗ್ರಾಪಂ ಚುನಾವಣೆಯಲ್ಲಿ ಗೆದ್ದವರನ್ನು ನಮ್ಮ ಪಕ್ಷದ ಬೆಂಬಲಿತರು ಎಂದು ಹೇಳಿದ್ರೆ ಬೀಳುತ್ತೆ ಕೇಸ್​!

ಸ್ನೇಹಿತನ ಕೊಂದು ಶವದ ಜತೆ ಊರೆಲ್ಲಾ ಸುತ್ತಾಡಿದ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 12 =
Remember me
