ನವದೆಹಲಿ:ಯಾವುದೇ ಮುಷ್ಕರ-ಬಂದ್ ನಡೆದರೂ ವ್ಯಾವಹಾರಿಕವಾಗಿ ದೊಡ್ಡ ಪ್ರಮಾಣದಲ್ಲೇ ನಷ್ಟ ಉಂಟಾಗುತ್ತದೆ. ಅಂಥದ್ದೇ ಒಂದು ಬೃಹತ್ ವ್ಯಾವಹಾರಿಕ ನಷ್ಟ ಪ್ರಸ್ತುತ ನಡೆಯುತ್ತಿರುವ ರೈತರ ಪ್ರತಿಭಟನೆಯಿಂದ ಆಗಿರುವುದು ಈಗ ಬೆಳಕಿಗೆ ಬಂದಿದೆ. ಈ ಬಗ್ಗೆ ಟ್ರೇಡ್​ ಯೂನಿಯನ್​ವೊಂದು ಮಾಹಿತಿ ಹೊರಹಾಕಿದೆ.
ದೆಹಲಿಯ-ಎನ್​ಸಿಆರ್ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ನಿರಂತರ ನಡೆಯುತ್ತಿರುವ ರೈತರ ಪ್ರತಿಭಟನೆಯಿಂದ ಆಗಿರುವ ವ್ಯಾವಹಾರಿಕ ನಷ್ಟದ ಕುರಿತ ಮಾಹಿತಿಯನ್ನು ಕಾನ್​ಫೆಡರೇಷನ್​ ಆಫ್​ ಆಲ್​ ಇಂಡಿಯಾ ಟ್ರೇಡರ್ಸ್​ (ಸಿಎಐಟಿ) ಬಹಿರಂಗಪಡಿಸಿದೆ. ರೈತರ ಪ್ರತಿಭಟನೆಯಿಂದ ವ್ಯಾಪಾರ ಕ್ಷೇತ್ರದಲ್ಲಿ 50 ಸಾವಿರ ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್​ವಾಲ್​ ಹೇಳಿದ್ದಾರೆ.
ಇದನ್ನೂ ಓದಿ:ಟ್ಯೂಷನ್​ ಹೇಳಿಕೊಡುವ ನೆಪದಲ್ಲಿ ರೇಪ್​ ಮಾಡ್ತಿದ್ದ; 3 ತಿಂಗಳು ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಅಪ್ರಾಪ್ತೆ
ಈಗಾಗಲೇ ಭಾರಿ ನಷ್ಟ ಉಂಟಾಗಿರುವುದರಿಂದ ನಾವು ಕೃಷಿ ಕಾಯ್ದೆ ಕುರಿತು ಸರ್ಕಾರ ಕೊಟ್ಟಿರುವ ಹೊಸ ಪ್ರಸ್ತಾವನೆಯನ್ನು ರೈತರ ದೊಡ್ಡ ಸಮುದಾಯದ ಹಿತಾಸಕ್ತಿಗಾಗಿ ಒಪ್ಪುವುದು ಒಳ್ಳೆಯದು. ಒಪ್ಪದಿದ್ದರೆ ರೈತರಿಗೆ ಪರಿಹಾರದ ಬಗ್ಗೆ ಆಸಕ್ತಿ ಇಲ್ಲ ಎಂಬ ಸಂದೇಶ ರವಾನೆ ಆಗುತ್ತದೆ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)
ನೀವು ಈ ಆ್ಯಪ್​ ಬಳಸುತ್ತಿದ್ದರೆ ನಿಮ್ಮ ಮಾಹಿತಿ ಕಳವಾಗಿರುವ ಸಾಧ್ಯತೆ ಇದೆ; 19 ಲಕ್ಷ ಬಳಕೆದಾರರ ಡೇಟಾ ಕದ್ದ ಹ್ಯಾಕರ್​…

ಇದು ಅಮಲಿಳಿಸೋ ಸುದ್ದಿ; ‘ಫಿಗರ್’ ಬೇಕೆಂದರೆ ‘ಡ್ರಿಂಕ್ಸ್’ ಬಿಡಿ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 7 =
Remember me
