ನವದೆಹಲಿ:ಪ್ರೀತಿಸುವ ಹೃದಯಗಳನ್ನು ಬೆಸೆದು ಕೊಂಡಿರುವಂತೆ ಮಾಡಲು ಅಂತರವೊಂದು ಸಮಸ್ಯೆಯೇ ಅಲ್ಲ. ಪ್ರೀತಿ ಇದ್ದಾಗ ಪ್ರೀತಿಸುವವರು ಎಷ್ಟೇ ದೂರದಲ್ಲಿದ್ದರೂ ಮನಸು-ಹೃದಯ ಒಂದು ಅವ್ಯಕ್ತ ಅಗೋಚರ ಸಂಬಂಧ ಹೊಂದಿರುತ್ತವೆ.
ಪ್ರೀತಿಸುವವರು ಎಷ್ಟೇ ದೂರದಲ್ಲಿದ್ದರೂ ಪ್ರೀತಿಯನ್ನು ಪರಸ್ಪರ ಫೀಲ್​ ಮಾಡಬಹುದು. ಆದರೆ ಅವರೇ ಚುಂಬನವನ್ನು ಆಲಿಂಗನವನ್ನು ಅನುಭವಿಸಬೇಕು ಎಂದರೆ ಕೈಗೆಟುಕುವಷ್ಟು ಹತ್ತಿರದಲ್ಲೇ ಇರಬೇಕು. ಅದಾಗ್ಯೂ ಇದೀಗ ಎಷ್ಟೇ ದೂರದಲ್ಲಿದ್ದರೂ ಪ್ರೀತಿಸುವವರಿಬ್ಬರು ಪರಸ್ಪರ ಚುಂಬಿಸಬಹುದು. ಹಾಗಂತ ಇದು ಫ್ಲೈಯಿಂಗ್ ಕಿಸ್​ ಥರ ಅಲ್ಲ ಮತ್ತು ನಿಜವಾದ ಮುತ್ತಲ್ಲದಿದ್ದರೂ ನಿಜವಾದ ಕಿಸ್​ ಕೊಡುವ ಫೀಲ್​ಗೇನೂ ಕಡಿಮೆ ಇರುವುದಿಲ್ಲ. ದೂರದಿಂದಲೇ ಅಂಥದ್ದೊಂದು ನೈಜ ಮುತ್ತಿನ ಅನುಭವಕ್ಕೆಂದೇ ಚುಂಬನ ಸಾಧನ ಅರ್ಥಾತ್ ಕಿಸ್ಸಿಂಗ್ ಡಿವೈಸ್ ಇದೀಗ ಲಭ್ಯವಿದೆ.
ಇದನ್ನೂ ಓದಿ:ಆಸ್ತಿ ಆಸೆಗೆ ಒಂದೇ ಮನೆಯ ನಾಲ್ವರ ಕೊಲೆ; ಮಕ್ಕಳಿಬ್ಬರ ಪ್ರಾಣ ಉಳಿಸಿತೇ ನಿದ್ರೆ-ಆಟ!?
ಚೀನಾದ ಜಿಯಾಂಗ್ ಝೋಂಗ್ಲಿ ಎಂಬಾತ ಈ ಸಾಧನನ್ನು ವಿನ್ಯಾಸ ಮಾಡಿದ್ದಾನೆ. ದೂರದಲ್ಲಿರುವ ತನ್ನ ಪ್ರೇಯಸಿಗೆ ಮುತ್ತು ಕೊಡಲು ಹಾಗೂ ಅದು ಹತ್ತಿರದಲ್ಲೇ ಇದ್ದು ಕೊಡುವ ಮುತ್ತಿನಷ್ಟೇ ನೈಜ ಅನುಭವ ನೀಡಲು ಆತ ಈ ಉಪಕರಣ ಕಂಡು ಹಿಡಿದಿದ್ದಾನೆ. ಇದನ್ನು ಚೀನಾದ ಚಾಂಗ್​ಝೌ ಯುನಿವರ್ಸಿಟಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ.
ಇದನ್ನೂ ಓದಿ:ಪತಿ ಹೃದಯಾಘಾತಕ್ಕೆ ಬಲಿ; ಒಂದೇ ಉರುಳಿಗೆ ಮಗನೊಂದಿಗೆ ಕೊರಳೊಡ್ಡಿ ಪ್ರಾಣ ಬಿಟ್ಟ ಪತ್ನಿ
ಈ ಚುಂಬನ ಸಾಧನ ಟಚ್ ಸೆನ್ಸರ್, ಆ್ಯಕ್ಚುವೇಟರ್ಸ್​ ಹಾಗೂ ಸಿಲಿಕಾನ್ ಲಿಪ್​ಗಳನ್ನು ಒಳಗೊಂಡಿದೆ. ಇದರ ಮೂಲಕ ಮುತ್ತು ಹಂಚಿಕೊಂಡಾಗ ನಿಜವಾದ ಚುಂಬನದ ಸಂದರ್ಭದಲ್ಲಿನ ಚಲನೆ, ಶಬ್ದ ಹಾಗೂ ಬೆಚ್ಚನೆಯ ಅನುಭವ ಲಭಿಸಲಿದೆಯಂತೆ.
ಇದನ್ನೂ ಓದಿ:ಅವರು ತಂದೆಯಂತೆ, ರಾಜಕೀಯವಾಗಿ ಬಿಎಸ್​​ವೈ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ: ಜನಾರ್ದನ ರೆಡ್ಡಿ
ಈ ಸಾಧನವನ್ನು ಬಳಸುವವರು ತಮ್ಮ ಮೊಬೈಲ್​ಫೋನ್​ನಲ್ಲಿ ಆ್ಯಪ್​ವೊಂದನ್ನು ಇನ್​ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ ಮತ್ತು ಈ ಸಾಧನವನ್ನು ಅವರ ಫೋನ್​ ಚಾರ್ಜಿಂಗ್ ಸಾಕೆಟ್​​ಗೆ ಅಳವಡಿಸಿಕೊಳ್ಳಬೇಕಾಗುತ್ತದೆ. ಪರಸ್ಪರ ಮುತ್ತು ಕೊಡಬೇಕಾದವರು ಈ ಆ್ಯಪ್​ ಬಳಸಿಕೊಂಡು ವಿಡಿಯೋ ಕಾಲ್ ಮಾಡಬೇಕಾಗುತ್ತದೆ. ನಂತರ ಅವರು ಮುತ್ತು ಕೊಟ್ಟರೆ ಇಬ್ಬರೂ ಹತ್ತಿರವಿದ್ದು ಮುತ್ತು ಕೊಟ್ಟಷ್ಟೇ ನೈಜವಾಗಿರುತ್ತದೆಯಂತೆ. ಇದೀಗ ಈ ಕಿಸ್ಸಿಂಗ್ ಡಿವೈಸ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಲಾರಂಭಿಸಿದೆ.
Remote kissing device recently invented by a Chinese university student. The device is designed specifically for long-distance relationships and can mimic and transfer the kiss of a person to the "mouth on the other side"pic.twitter.com/G74PrjfHQA
— Levandov (@blabla112345)February 23, 2023

19ರ ಯುವಕ ಡ್ಯಾನ್ಸ್​ ಮಾಡುತ್ತಲೇ ಕುಸಿದು ಬಿದ್ದು ಸಾವು; ಸಂಭ್ರಮದ ಸಂದರ್ಭದಲ್ಲೇ ಶೋಕ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen + three =
Remember me
