ಭೋಪಾಲ್:ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು (ಸೆ.17) ನಮೀಬಿಯಾದಿಂದ ಕರೆತಂದ ಚೀತಾಗಳನ್ನು ಮಹಾರಾಷ್ಟ್ರದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಅರ್ಪಿಸಲಾಯಿತು. ವಿಶೇಷ ವಿಮಾನದಲ್ಲಿ ಚೀತಾಗಳು ಭಾರತಕ್ಕೆ ಬಂದಿವೆ. ಮರದಡಿಯಲ್ಲಿ ವಿಶ್ರಾಂತಿಯಲ್ಲಿದ್ದ ಚೀತಾಗಳ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ವೈರಲ್ ಆಗಿತ್ತು. ನಮೀಬಿಯಾದಿಂದ ಒಟ್ಟು 8 ಚಿರತೆಗಳು ಬಂದಿದ್ದು, 5 ಗಂಡು ಹಾಗೂ 3 ಹೆಣ್ಣು ಚಿರತೆಗಳಿವೆ.
ಕುನೋ ರಾಷ್ಟ್ರೀಯ ಉದ್ಯಾನ ಆಯ್ಕೆ ಯಾಕೆ?
ಭಾರತದಲ್ಲಿ ಚೀತಾಗಳ ಸಂಖ್ಯೆ ಬೆರಳೆಣಿಕೆಯಷ್ಟಿದ್ದು, ಅವನತಿಯತ್ತ ಸಾಗುತ್ತಿದೆ. ಇದೀಗ ನಮೀಬಿಯಾದಿಂದ ಕರೆತಂದಿರುವ ಚೀತಾಗಳಿಗೆ ಭಾರತದಲ್ಲಿ ಕುನೋ ರಾಷ್ಟ್ರೀಯ ಉದ್ಯಾನವನಲ್ಲಿ ವಾಸಸ್ಥಾನ ಕಲ್ಪಿಸಲಾಗುತ್ತಿದೆ. ಮಧ್ಯಪ್ರದೇಶದ ಅರಣ್ಯ ಭೂಪ್ರದೇಶದಲ್ಲಿ ವಿಶಾಲವಾಗಿ 748 ಚ.ಕಿ.ಮೀ ವ್ಯಾಪ್ತಿಯಲ್ಲಿ ಕುನೋ ಪಾಲ್ಪುರ್ ರಾಷ್ಟ್ರೀಯ ಉದ್ಯಾನವನವು ವ್ಯಾಪಿಸಿಕೊಂಡಿದೆ. ಮಾನವನ ಸಂಚಾರವಿಲ್ಲದ ಪ್ರದೇಶವಾಗಿದ್ದು, ಕೊರಿಯಾದ ಸಾಲ್ ಕಾಡುಗಳಿಗೆ ಹತ್ತಿರದಲ್ಲಿದೆ.
ಚೀತಾಗಳಿಗೆ ವಾಸಿಸಲು ಸೂಕ್ತವಾದ ಹವಾಮಾನ ಬೇಕು. ಎತ್ತರದ ಪ್ರದೇಶ, ಕರಾವಳಿ, ಈಶಾನ್ಯ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಡೆ ಚಿರತೆಗಳ ನೆಲೆಯಾಗಿವೆ. ಹೀಗಾಗಿ ನಮೀಬಿಯಾದಿಂದ ಕರೆತರುತ್ತಿರುವ ಚೀತಾಗಳಿಗೆ ವಾಸಸ್ಥಾನ ಕಲ್ಪಿಸಲು ಸೂಕ್ತ ಅರಣ್ಯ ಪ್ರದೇಶ ಹುಡಕಲಾಗಿತ್ತು. ಅದರಂತೆ ಮಧ್ಯಪ್ರದೇಶ, ಛತ್ತೀಸ್​ಗಢ, ರಾಜಸ್ಥಾನ, ಗುಜರಾತ್ ಹಾಗೂ ಉತ್ತರ ಪ್ರದೇಶದಲ್ಲಿ ಸರ್ವೇ ಮಾಡಲಾಗಿತ್ತು. ಕೊನೆಗೆ ಚೀತಾಗಳಿಗೆ ನೆಲೆ ಕಲ್ಪಿಸಲು ಕುನೋ ರಾಷ್ಟ್ರೀಯ ಉದ್ಯಾನವನ ಸೂಕ್ತವಾಗಿದ್ದು, ಇದನ್ನೇ ಆಯ್ಕೆ ಮಾಡಲಾಗಿದೆ.
ಚೀತಾಗಳ ವಾಸಕ್ಕೆ ಯೋಗ್ಯವಾದ ಹವಾಮಾನ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿದೆ. ಇಲ್ಲಿ ಮನುಷ್ಯರ ಸಂಚಾರವಿಲ್ಲ. ಚೀತಾಗಳಿಗೆ ಭೇಟೆಯಾಡಿ ಆಹಾರ ಪಡೆದುಕೊಳ್ಳುವ ವಾತಾವರಣವಿದೆ. ಹೀಗಾಗಿ ವೈಲ್ಡ್​ಲೈಫ್ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ ಮತ್ತು ವೈಲ್ಡ್​​ಲೈಫ್ ಟ್ರಸ್ಟ್​ ಆಫ್ ಇಂಡಿಯಾ (WTI) ಕುನೋ ರಾಷ್ಟ್ರೀಯ ಉದ್ಯಾನವನವನ್ನು ಆಯ್ಕೆ ಮಾಡಿದೆ.(ಏಜೆನ್ಸೀಸ್)
Happy to share that India has signed a historic MoU with Namibia to promote Wildlife Conservation and Sustainable Biodiversity Utilization. The MoU seeks to promote conservation and restoration of cheetah in their former range from which the species went extinct.pic.twitter.com/MNVyw8S2eQ— Bhupender Yadav (@byadavbjp)July 20, 2022
Happy to share that India has signed a historic MoU with Namibia to promote Wildlife Conservation and Sustainable Biodiversity Utilization. The MoU seeks to promote conservation and restoration of cheetah in their former range from which the species went extinct.pic.twitter.com/MNVyw8S2eQ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 5 =
Remember me
