ಭೋಪಾಲ್​​:ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದಂದು ನಮೀಬಿಯಾದಿಂದ ಭಾರತಕ್ಕೆ ಆಗಮಿಸಿದ 8 ಚೀತಾಗಳಲ್ಲಿ ಎರಡು ಚೀತಾಗಳನ್ನು ಎರಡು ದಿನಗಳ ಹಿಂದೆ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದ ವಿಶಾಲ ಅರಣ್ಯ ಪ್ರದೇಶಕ್ಕೆ ಬಿಡುಗಡೆ ಮಾಡಲಾಗಿದೆ. ಖುಷಿಯ ಸಂಗತಿ ಎಂದರೆ, ಚೀತಾಗಳು ನ. 6 ಮತ್ತು 7ರ ಮಧ್ಯರಾತ್ರಿ ಒಂದು ಜಿಂಕೆಯನ್ನು ಬೇಟೆಯಾಡಿವೆ. ಅಲ್ಲಿಗೆ ಈ ಹವಾಮನಕ್ಕೆ ಚೀತಾಗಳು ಹೊಂದಿಕೊಂಡಂತೆ ಕಾಣುತ್ತಿದೆ. ಆದರೆ, ಇದೀಗ ಮೂಡಿಬಂದಿರುವ ಪ್ರಶ್ನೆ ಏನೆಂದರೆ, 8 ಚೀತಾಗಳಲ್ಲಿ ಕೇವಲ ಎರಡು ಚೀತಾಗಳನ್ನು ಮಾತ್ರ ಏಕೆ ಬಿಡಲಾಗಿದೆ? ಉಳಿದ ಆರು ಚೀತಾಗಳನ್ನು ಯಾವಾಗ ಬಿಡುತ್ತಾರೆ ಎಂಬುದು. ಅದಕ್ಕೆ ಉತ್ತರವೂ ಇಲ್ಲಿದೆ.
ರಾಷ್ಟ್ರೀಯ ಅರಣ್ಯ ನಿರ್ವಹಣಾ ಪ್ರಾಧಿಕಾರದ ಪ್ರಕಾರ ವಿಶಾಲ ಅರಣ್ಯ ಪ್ರದೇಶಕ್ಕೆ ಚೀತಾಗಳನ್ನು ಯಾವಾಗ ಬಿಡಬೇಕು ಎಂಬುದನ್ನು ಕಾರ್ಯಪಡೆ ಸಮಿತಿ ಮಾತ್ರ ನಿರ್ಧಾರ ಮಾಡುತ್ತದೆ. ಹಂತ ಹಂತವಾಗಿ ಉಳಿದ ಚೀತಾಗಳನ್ನು ವಿಶಾಲ ಅರಣ್ಯ ಪ್ರದೇಶಕ್ಕೆ ಬಿಡುವ ಕಾರ್ಯತಂತ್ರದ ಮೇಲೆ ಈ ಸಮಿತಿ ಕೆಲಸ ಮಾಡಲಿದೆ. 5 ಚದರ ಕಿ.ಮೀ ವಿಶಾಲವಾಗಿ ನಿರ್ಮಾಣವಾಗಿರುವ ರಾಷ್ಟ್ರೀಯ ಅರಣ್ಯದಲ್ಲಿ ಚೀತಾಗಳನ್ನು ಬಿಡುಗಡೆ ಮಾಡಲಾಗುತ್ತದೆ. ಇದಕ್ಕೂ ಮುನ್ನ ಎಲ್ಲ ಚಿರತೆಗಳನ್ನು ಕ್ವಾರಂಟೈನ್​ನಲ್ಲಿ ಇಡಲಾಗಿತ್ತು. ಇದೀಗ ಆ ಅವಧಿ ಮುಕ್ತಾಯವಾಗಿದ್ದು, 8 ಚೀತಾಗಳಲ್ಲಿ ಎರಡು ಚೀತಾಗಳನ್ನು ಮಾತ್ರ ಹೊರಗಡೆ ಬಿಡಲಾಗಿದೆ. ಉಳಿದ ಆರು ಚೀತಾಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತದೆ.
ಸದ್ಯ ಬಿಡುಗಡೆಯಾಗಿರುವ ಎರಡು ಚೀತಾಗಳ ಮೇಲೆ ತಜ್ಞರು ನಿರಂತರವಾಗಿ ನಿಗಾವಹಿಸಿದ್ದು, ಅವುಗಳ ಸ್ಥಿತಿಗಳನ್ನು ವಿಶ್ಲೇಷಣೆ ಮಾಡುತ್ತಿದ್ದಾರೆ. ಹವಾಮಾನಕ್ಕೆ ಹೊಂದಿಕೊಳ್ಳುವುದು ಮತ್ತು ಇತರೆ ಕ್ರೂರ ಮೃಗಗಳಿಂದ ಚೀತಾಗಳಿಗೆ ಯಾವುದೇ ತೊಂದರೆ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಉಳಿದ ಚೀತಾಗಳನ್ನು ವಿಶಾಲ ಪ್ರದೇಶಕ್ಕೆ ಬಿಡುಗಡೆ ಮಾಡಲಾಗುತ್ತದೆ.
ಕುನೋ ರಾಷ್ಟ್ರೀಯ ಉದ್ಯಾನವನದ ವಿಭಾಗೀಯ ಅರಣ್ಯಾಧಿಕಾರಿ ಪ್ರಕಾಶ್​ ವರ್ಮಾ ಮಾತನಾಡಿದ್ದು, ಕಾರ್ಯಪಡೆ ಸಮಿತಿಯಿಂದ ಕ್ವಾರಂಟೈನ್​ಗೆ ಒಳಗಾಗಿದ್ದ 8 ಚೀತಾಗಳಲ್ಲಿ ಎರಡು ಚೀತಾಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದಾಗಿನಿಂದ ಚೀತಾಗಳು ಸಾಮಾನ್ಯ ವರ್ತನೆಯನ್ನು ತೋರುತ್ತಿವೆ. ಅಲ್ಲದೆ, ಸೋಮವಾರ ಬೆಳಗ್ಗೆ ಜಿಂಕೆಯನ್ನು ಬೇಟೆಯಾಡಿರುವುದು ಒಳ್ಳೆಯ ಸಂಕೇತ ಎಂದಿದ್ದಾರೆ.
ಸೌಲಭ್ಯಗಳ ಮೇಲ್ವಿಚಾರಣೆ ಮತ್ತು ರಾಷ್ಟ್ರೀಯ ಉದ್ಯಾನವನದ ಆವರಣವನ್ನು ಪರಿಶೀಲಿಸಿದ ನಂತರ ವಿಶಾಲ ಆವರಣದಲ್ಲಿ ಎರಡು ಚೀತಾಗಳನ್ನು ಬಿಡಲು ನಿರ್ಧರಿಸಲಾಯಿತು ಎಂದು ವರ್ಮಾ ತಿಳಿಸಿದ್ದಾರೆ.
ಎರಡು ಚೀತಾಗಳನ್ನು ಬಿಡುಗಡೆ ಮಾಡಿದ ವಿಡಿಯೋವನ್ನು ಪ್ರಧಾನಿ ಮೋದಿ ಅವರು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ. ಎರಡು ಚೀತಾಗಳು ಕಡ್ಡಾಯ ಕ್ವಾರಂಟೈನ್​ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಇಂದು ಅವುಗಳನ್ನು ವಿಶಾಲ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು. ಇನ್ನುಳಿದ ಆರು ಚೀತಾಗಳನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು. ಖುಷಿಯಾದ ಸಂಗತಿ ಏನೆಂದರೆ, ಎಲ್ಲ ಚೀತಾಗಳು ಆರೋಗ್ಯಯುತವಾಗಿದ್ದು, ಈ ಪರಿಸರಕ್ಕೆ ಚೆನ್ನಾಗಿ ಹೊಂದಿಕೊಂಡಿವೆ ಎಂದು ತಿಳಿಸಿದ್ದಾರೆ.
ಅಂದಹಾಗೆ ಸೆ.17ರಂದು ನಮೀಬಿಯಾ ದೇಶದಿಂದ 8 ಚೀತಾಗಳನ್ನು ಭಾರತಕ್ಕೆ ಕರೆತರಲಾಯಿತು. 8ರಲ್ಲಿ 5 ಹೆಣ್ಣು ಮತ್ತು 3 ಗಂಡು ಚೀತಾಗಳಿವೆ. ನಮೀಬಿಯಾ ರಾಜಧಾನಿ ವಿಂಡ್ಹೋಕ್​ನಿಂದ ವಿಶೇಷವಾಗಿ ಡಿಸೈನ್​ ಮಾಡಲಾದ ಹುಲಿ ಮುಖದ ಬಿ-747 ಜಂಬೋ ಜೆಟ್​ನಿಂದ ಚೀತಾಗಳನ್ನು ಕರೆತರಲಾಯಿತು. ಅವುಗಳನ್ನು ಪ್ರಧಾನಿ ಮೋದಿ ಅವರು ತಮ್ಮ ಜನ್ಮದಿನದಂದೇ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾವನಕ್ಕೆ ಬಿಟ್ಟರು. 70 ವರ್ಷಗಳ ಹಿಂದೆಯೇ ಅಳಿದು ಹೋಗಿದ್ದ ಚೀತಾ ಸಂತತಿಯನ್ನು ಮರುಸ್ಥಾಪಿಸುವ ಉದ್ದೇಶದಿಂದ ಭಾರತಕ್ಕೆ ಚೀತಾಗಳನ್ನು ಕರೆತರಲಾಗಿದೆ. ಇದಕ್ಕಾಗಿ ಪ್ರಾಜೆಕ್ಟ್​ ಚೀತಾ ಹೆಸರಿನಲ್ಲಿ ಭಾರತವು ನಮೀಬಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ.(ಏಜೆನ್ಸೀಸ್​)
ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

ಕ್ವಾರಂಟೈನ್​ ಮುಗಿಸಿದ 2 ಚೀತಾಗಳನ್ನು ವಿಶಾಲ ಅರಣ್ಯ ಪ್ರದೇಶಕ್ಕೆ ಬಿಡುಗಡೆ: ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ

ಭಾರತದಲ್ಲಿ ನಮೀಬಿಯಾ ಚಿರತೆಗಳ ಮೊದಲ ಬೇಟೆ!

ಆಲ್ಕೋಹಾಲ್​ ನೀಡಿ ಅಪ್ರಾಪ್ತ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ! ಶಿಕ್ಷಕಿಯ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + fourteen =
Remember me
