ಚಂಡೀಗಢ:ಕಳೆದ ವಾರ ಹರಿಯಾಣದ ಸೋನಿಪತ್​ನಲ್ಲಿ ನಡೆದ ಕರ್ತವ್ಯನಿರತ ಇಬ್ಬರು ಪೊಲೀಸ್​ ಸಿಬ್ಬಂದಿಯ ಹತ್ಯೆಗೆ ಸಂಬಂಧಿಸಿದಂತೆ ಆರು ಆರೋಪಿಗಳಲ್ಲಿ ಐವರನ್ನು ಬಂಧಿಸಿರುವುದಾಗಿ ಹರಿಯಾಣ ಪೊಲೀಸರು ಖಚಿತಪಡಿಸಿದ್ದಾರೆ. ಕೊಲೆಗಾರರನ್ನು ಹಿಡಿಯಲು ಹೈರಾಣಾಗಿದ್ದ ಪೊಲೀಸರಿಗೆ ನೆರವಾಗಿದ್ದು, ಮೃತ ಪೊಲೀಸರೇ ಎಂಬುದು ಇಲ್ಲಿನ ವಿಶೇಷ.
ಹರಿಯಾಣದ ಜಿಂಧ್​ ಜಿಲ್ಲೆಯಲ್ಲಿ ಪೊಲೀಸರ ಹತ್ಯೆ ನಡೆದಿತ್ತು. ಮೃತ ಪೊಲೀಸರಲ್ಲಿ ಒಬ್ಬರಾದ ರವೀಂದರ್​ ಸಿಂಗ್​ (28) ಅವರು ಸಾವಿನ ಕೊನೆಗಳಿಗೆಯಲ್ಲಿ ತನ್ನ ಅಂಗೈಯಲ್ಲಿ ಬರೆದುಕೊಂಡು ಕೊಲೆಗಾರರ ವಾಹನದ ನಂಬರ್​ ಸಹಾಯದಿಂದ ಆರೋಪಿಗಳನ್ನು ಪತ್ತೆಹಚ್ಚಲು ನೆರವಾಯಿತು.
ಇದನ್ನೂ ಓದಿ:PHOTOS| ಥ್ರಿಲ್​ ನೀಡಲು ಅಪ್ಸರಾ ರೆಡಿ: ಹಾಟ್​ ಫೋಟೋಗಳನ್ನು ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ ಆರ್​ಜಿವಿ!
ಇದಕ್ಕೂ ಮುನ್ನ ಕೊಲೆಗಾರರನ್ನು ಪತ್ತೆಹಚ್ಚಲು ಪೊಲೀಸರು ಹೆಣಗಾಡಿದ್ದರು. ಆದರೂ ಸಾಧ್ಯವಾಗಿರಲಿಲ್ಲ. ಮೃತ ಪೊಲೀಸ್ ಸಿಬ್ಬಂದಿಯ ಮರಣೋತ್ತರ ಪರೀಕ್ಷೆಯ ವೇಳೆ ಅವರ ಕೈಮೇಲೆ ಬರೆಯಲಾಗಿದ್ದ ಸುಳಿವು ಪೊಲೀಸರಿಗೆ ದೊರೆತಿದೆ. ಇದೇ ಜಾಡನ್ನು ಹಿಡಿದು ಹೊರಟ ಪೊಲೀಸರಿಗೆ ಪ್ರಕರಣ ಭೇದಿಸಲು ನೆರವಾಗಿದೆ. ​
ಈ ಬಗ್ಗೆ ಮಾತನಾಡಿರುವ ಹರಿಯಾಣ ಪೊಲೀಸ್​ ಮುಖ್ಯಸ್ಥ ಮನೋಜ್​ ಯಾದವ್​, ನಮ್ಮ ದಿಟ್ಟ ಸಿಬ್ಬಂದಿ ರವೀಂದರ್​ ಸಿಂಗ್ ಅವರು ಸಾವಿನ ಕೊನೆಗಳಿಗೆಯಲ್ಲೂ ನಮ್ಮ ಪೊಲೀಸ್​ ಕೌಶಲ್ಯವನ್ನು ಮೆರದಿದ್ದಾರೆ. ಅವರಿಗೆ ಮರಣೋತ್ತರ ಪೊಲೀಸ್​ ಪದಕಕ್ಕೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದ್ದಾರೆ.
ರವಿಂದರ್​ ಸಿಂಗ್​ ಮತ್ತು ಕಪ್ತಾನ್​ ಸಿಂಗ್​ ರಕ್ತಸಿಕ್ತವಾಗಿ ಬಿದ್ದಿರುವ ಸ್ಥಿತಿಯಲ್ಲಿ ಕಳೆದ ಮಂಗಳವಾರ ಶವವಾಗಿ ಪತ್ತೆಯಾಗಿದ್ದರು. ಸೋನಿಪತ್​-ಜಿಂಧ್​ ಹೆದ್ದಾರಿಯಲ್ಲಿ ಕಾರು ಪಾರ್ಕಿಂಗ್​ ವಿಚಾರವಲ್ಲದೆ, ಪಾನಮತ್ತರಾಗಿದ್ದ ಕಾರು ಪ್ರಯಾಣಿಕರನ್ನು ಪೊಲೀಸ್​ ಸಿಬ್ಬಂದಿ ಪ್ರಶ್ನಿಸಿದ್ದರು. ಈ ವೇಳೆ ವಾಗ್ವಾದ ನಡೆದು ತಾರಕಕ್ಕೇರಿ ಗುಂಡಿನ ದಾಳಿಯಲ್ಲಿ ಮೃತ್ತಪಟ್ಟಿದ್ದಾರೆ ಎಂದು ಪ್ರಾಥಮಿಕ ವರದಿಯಲ್ಲಿ ಹೇಳಲಾಗಿತ್ತು. ಸಿಬ್ಬಂದಿಯನ್ನು ಕೊಲೆ ಮಾಡಿ ಆರೋಪಿಗಳು ಜಿಂಧ್​ ಕಡೆ ವೇಗವಾಗಿ ತೆರಳಿದ್ದರು.
ಇದನ್ನೂ ಓದಿ:ನೇಣಿಗೆ ಕೊರಳೊಡ್ಡಿದ ಯುವತಿಗೆ ವರವಾಗಬೇಕಿದ್ದ ಪ್ರೀತಿಯೇ ಶಾಪವಾಯ್ತು
ಪೊಲೀಸ್​ ಸಿಬ್ಬಂದಿಯ ಕೈನಲ್ಲಿದ್ದ ವಾಹನ ನಂಬರಿನ ಸಹಾಯದ ಮೂಲಕ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ ಇನ್ನೊರ್ವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.(ಏಜೆನ್ಸೀಸ್​)
ಲಾಕ್‌ಡೌನ್‌ ತಂದ ಅದೃಷ್ಟ: ಮೂರೇ ತಿಂಗಳಲ್ಲಿ ಕೋಟ್ಯಧಿಪತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − twelve =
Remember me
