ಶ್ರೀನಗರ:ನಾಗರಿಕ ಮೇಲೆ ದಾಳಿ ನಡೆಸುತ್ತಿರುವ ಉಗ್ರರು, ಜಮ್ಮು-ಕಾಶ್ಮೀರದಲ್ಲಿನ ವಿದ್ಯುತ್ ಉತ್ಪಾದನಾ ಘಟಕಗಳು ಮತ್ತು ಏರ್ ಸ್ಟ್ರಿಪ್​ಗಳ ಮೇಲೆ ವಿಧ್ವಂಸಕ ಕೃತ್ಯ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ವರದಿ ಎಚ್ಚರಿಕೆ ನೀಡಿದೆ. ಹರ್ಕತ್ 313 ಎಂಬ ಭಯೋತ್ಪಾದಕರ ಹೊಸ ಗುಂಪು ಈಗ ಸಕ್ರಿಯವಾಗಿದ್ದು, ಗಡಿ ನಿಯಂತ್ರಣ ರೇಖೆ (ಎಲ್​ಐಸಿ) ಬಳಿಯ ಉರಿಯಲ್ಲಿರುವ ಎರಡು ಜಲ ವಿದ್ಯುತ್ ಘಟಕಗಳನ್ನು ಗುರಿಯಾಗಿರಿಸಿಕೊಂಡಿದೆ.
ಅನಂತನಾಗ್​ನಲ್ಲಿರುವ ತುರ್ತು ಬಳಕೆ ಏರ್ ಸ್ಟ್ರಿಪ್ (ವಿಮಾನ ಏರುವ ಮತ್ತು ಇಳಿಯುವ ರನ್ ವೇ) ಮೇಲೆ ಉಗ್ರರ ಕಣ್ಣು ನೆಟ್ಟಿದೆ ಎಂದು ಗುಪ್ತಚರ ವರದಿ ಹೇಳಿದೆ. ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯು ಕಾಶ್ಮೀರದಲ್ಲಿನ ಧಾರ್ವಿುಕ ಮುಖಂಡರ ಮೇಳೆ ದಾಳಿ ನಡೆಸಲು ಪಿತೂರಿ ಮಾಡಿದ್ದು, ಪಾಕ್ ಮೂಲದ ಲಷ್ಕರ್-ಎ-ತೊಯ್ಬಾದ (ಎಲ್​ಇಟಿ) ಅಂಗವಾದ ದಿ ರೆಸಿಸ್ಟೆಂನ್ಸಿ ಫ್ರಂಟ್ (ಟಿಆರ್​ಎಫ್) ಗ್ರಾಮ ಪಂಚಾಯಿತಿ ಮುಖ್ಯಸ್ಥರಾದ ಸರಪಂಚ್ ಮತ್ತು ಸ್ಥಳೀಯರಲ್ಲದವರ ಹತ್ಯೆಗೆ ಸಂಚು ನಡೆಸಿದೆ. ವಲಸಿಗ ಕಾರ್ವಿುಕರ ಮೇಲೆ ಅವ್ಯಾಹತ ದಾಳಿ ನಡೆಯುವ ಸಂಭವ ಇದೆ ಎಂದು ಬೇಹುಗಾರಿಕಾ ಮೂಲಗಳು ಹೇಳಿವೆ.
ಹೊಣೆ ಹೊತ್ತ ಯುಎಲ್​ಎಫ್:ಜಮ್ಮು-ಕಾಶ್ಮೀರದಲ್ಲಿ ಅಕ್ಟೋಬರ್​ನಲ್ಲಿ 11 ನಾಗರಿಕರ ಹತ್ಯೆಯಾಗಿದ್ದು, ಇದರ ಹೊಣೆಯನ್ನು ಲಷ್ಕರ್-ಎ-ತೊಯ್ಬಾ (ಎಲ್​ಇಟಿ), ಯುನೈಟೆಡ್ ಲಿಬರೇಷನ್ ಫ್ರಂಟ್ (ಯುಎಲ್​ಎಫ್) ಹೊತ್ತುಕೊಂಡಿದೆ. ವಲಸೆ ಕಾರ್ವಿುಕರು ಕಾಶ್ಮೀರವನ್ನು ತೊರೆಯಬೇಕು. ಭಾರತದಲ್ಲಿ ನಡೆಯುತ್ತಿರುವ ಮುಸ್ಲಿಮರ ಹತ್ಯೆಯ ಪ್ರತೀಕಾರವಾಗಿ ವಲಸೆಗರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಲಾಗುತ್ತಿದೆ ಎಂದು ಯುಎಲ್​ಎಫ್ ಟ್ವೀಟ್ ಮಾಡಿದೆ ಎಂದು ಕಾಶ್ಮೀರ ವಲಯದ ಪೋಲಿಸರು ಹೇಳಿದ್ದಾರೆ. ಕುಲ್ಗಾಂನಲ್ಲಿ ಭಾನುವಾರ ನಡೆದ ಇಬ್ಬರು ವಲಸೆ ಕಾರ್ವಿುಕರ ಹತ್ಯೆಯೂ ಸೇರಿದಂತೆ ಅಕ್ಟೋಬರ್ ಮೊದಲ ವಾರದಿಂದ ಈ ವರೆಗೆ 11 ಜನರ ಹತ್ಯೆ ಆಗಿದೆ.
ಕಾಶ್ಮೀರಕ್ಕೆ ವಿಶೇಷ ತಂಡ:ಜಮ್ಮು-ಕಾಶ್ಮೀರದಲ್ಲಿ ನಾಗರಿಕರ ಮೇಲೆ ದಾಳಿ ಮತ್ತು ಹತ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ವಿಶೇಷ ಬೇಹುಗಾರಿಕಾ ಕಾರ್ಯಾಚರಣೆ ತಂಡವನ್ನು ಕೇಂದ್ರ ಸರ್ಕಾರ ಶ್ರೀನಗರಕ್ಕೆ ರವಾನಿಸಿದೆ. ಈ ತಂಡಗಳು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಅವರ ಜತೆಯಲ್ಲಿ ಕಾರ್ಯನಿರ್ವಹಿಸಲಿದೆ. ಈ ತಂಡಕ್ಕೆ ಹೆಚ್ಚುವರಿ ನಿರ್ದೇಶಕರು ಮುಖ್ಯಸ್ಥರಾಗಿರುತ್ತಾರೆ. ಆಯ್ದ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುತ್ತಿರುವ ಉದ್ದೇಶ ಏನು ಎಂಬುದನ್ನು ಕೂಲಂಕಷವಾಗಿ ತಿಳಿಯಲು ಬಯಸಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ, ಈ ವಿಶೇಷ ತಂಡವನ್ನು ಕಾಶ್ಮೀರ ಕಣಿವೆಗೆ ಕಳುಹಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಕುಲ್ಗಾಂ ಜಿಲ್ಲೆಯ ವಾನ್ಲೋ ಪ್ರದೇಶದಲ್ಲಿ ಭಾನುವಾರ ಇಬ್ಬರು ವಲಸೆ ಕಾರ್ವಿುಕರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಈ ವಿಶೇಷ ತಂಡವನ್ನು ಕಳುಹಿಸಿದೆ.
ದುಬೈ ಜತೆ ಒಡಂಬಡಿಕೆ:ಉಗ್ರರ ಚಟುವಟಿಕೆ ಮಧ್ಯೆಯೂ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಜಮ್ಮು- ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ದುಬೈ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿದೆ. ರಿಯಲ್ ಎಸ್ಟೇಟ್, ಕೈಗಾರಿಕಾ ಪ್ರದೇಶಗಳ ಸ್ಥಾಪನೆ, ಐಟಿ ಟವರ್, ವಿವಿದ್ದೋದೇಶ ಟವರ್, ಲಾಜಿಸ್ಟಿಕ್ಸ್, ವೈದ್ಯಕೀಯ ಕಾಲೇಜ್ ಸ್ಥಾಪನೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ ಈ ಯೋಜನೆಗಳಲ್ಲಿ ಸೇರಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಸೋಮವಾರ ತಿಳಿಸಿದ್ದಾರೆ. ಈ ಒಪ್ಪಂದ ಏರ್ಪಡುವ ವೇಳೆ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಇದ್ದರು.
28 ಸಂಸ್ಥೆಗಳ ಸಹಕಾರ:ಉಗ್ರರ ನಿಗ್ರಹಕ್ಕೆ ಬೇರೆ ಬೇರೆ 28 ಏಜೆನ್ಸಿಗಳು ಕೈಜೋಡಿಸಿವೆ. ಇವು ಜಮ್ಮು ಮತ್ತು ಕಾಶ್ಮೀರದ ಜತೆಗೆ ದೆಹಲಿ, ಉತ್ತರ ಪ್ರದೇಶ, ಪಂಜಾಬ್​ಗಳ ಉಗ್ರರ ನಿಗ್ರಹ ಪಡೆಗಳ ಜತೆಗೆ ಕಾರ್ಯನಿರ್ವಹಿಸಲಿವೆ. ಭಯೋತ್ಪಾದಕರು ಮತ್ತು ಅವರಿಗೆ ನೆರವು ನೀಡುವವರ ಮಾಹಿತಿಯನ್ನು ಹಂಚಿಕೊಳ್ಳಲಿವೆ. ನಿತ್ಯದ ಗುಪ್ತಚರ ಮಾಹಿತಿ ಹೆಚ್ಚಳ ಮತ್ತು ರವಾನಿಸುವ ಸಿಗ್ನಲ್ ಶೇ. 40ರಷ್ಟು ಅಧಿಕಗೊಳಿಸುವ ಗುರಿಯನ್ನು ವಿಶೇಷ ಬೇಹುಗಾರಿಕಾ ಕಾರ್ಯಾಚರಣೆ ತಂಡಕ್ಕೆ ನೀಡಲಾಗಿದೆ. ಅನ್ಯ ರಾಜ್ಯಗಳ ನಿವಾಸಿಗಳನ್ನು ಗುರಿಯಾಗಿಟ್ಟುಕೊಂಡು 2 ದಿನಗಳಲ್ಲಿ ಮೂರು ದಾಳಿ ನಡೆದಿದೆ. ಈ ವಲಸಿಗರು ಬೀದಿಬಿದಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುವವರಾಗಿದ್ದರು. ಶನಿವಾರ ನಡೆದ ದಾಳಿಗೆ ಮೃತಪಟ್ಟವರಲ್ಲಿ ಓರ್ವ ಬಿಹಾರದ ಬಂಕಾ ಜಿಲ್ಲೆಯವನಾಗಿದ್ದು, ಗೋಲ್​ಗಪ್ಪ ಮಾರಾಟ ಮಾಡುತ್ತಿದ್ದ. ಇನ್ನೊಬ್ಬ ಉತ್ತರ ಪ್ರದೇಶದ ಸಹರನಪುರದವನಾಗಿದ್ದು ಮರಗೆಲಸ ಮಾಡುತ್ತಿದ್ದ. ಇನ್ನೊಂದೆಡೆ ಜಮ್ಮು ರೈಲು ನಿಲ್ದಾಣದ ಹೊರಗೆ ಕುಳಿತಿದ್ದವರ ಮೇಲೆ ದಾಳಿ ನಡೆದಿದೆ. ಈ ದಾಳಿಯಿಂದ ಜಮ್ಮು-ಕಾಶ್ಮೀರದಲ್ಲಿರುವ ವಲಸಿಗರು ಆತಂಕಗೊಂಡಿದ್ದಾರೆ. ಕೈಯಲ್ಲಿ ಹಣವಿಲ್ಲ. ದುಡಿಯಲು ಹೊರಗೆ ಹೋಗೋಣವೆಂದರೆ ಪ್ರಾಣಕ್ಕೆ ಸಂಚಕಾರ ಎಂದು ಭಯಭೀತರಾಗಿದ್ದಾರೆ. ಇವರಿಗೆ ಸರ್ಕಾರ ಆಹಾರದ ವ್ಯವಸ್ಥೆ ಮಾಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + nine =
Remember me
