ನವದೆಹಲಿ:ಪತಂಜಲಿಯ ದಿವ್ಯ ದಂತ ಮಂಜನ್​ ಟೂತ್​ಪೇಸ್ಟ್​​ ಅನ್ನು ಸಸ್ಯಾಹಾರಿ ಉತ್ಪನ್ನ ಎಂದು ತಪ್ಪಾಗಿ ಬ್ರಾಂಡ್​​​ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್​​​​ ಕೇಂದ್ರ ಸರ್ಕಾರದ ನಿಲುವನ್ನು ಕೇಳಿದೆ.
ಇದನ್ನು ಓದಿ:ಇಂಡಿಯನ್​​-2 ಸಿನಿಮಾಗೆ ಮಲ್ಟಿಪ್ಲೆಕ್ಸ್​​​ ಅಸೋಸಿಯೇಷನ್​​ನಿಂದ ಲೀಗಲ್​ ನೋಟಿಸ್; ಕಾರಣ ಹೀಗಿದೆ​​
ಟೂತ್‌ಪೇಸ್ಟ್​​ನಲ್ಲಿ ಹಸಿರು ಚುಕ್ಕೆಯಿಂದ ಸಸ್ಯಾಹಾರಿ ಉತ್ಪನ್ನವೆಂದು ಮಾರಾಟ ಮಾಡಲಾಗುತ್ತಿದೆ. ಆದರೆ ಇದರಲ್ಲಿ ಮೀನಿನ ಅಂಶವಿದೆ ಎಂದು ಅರ್ಜಿದಾರರ ಪರ ವಕೀಲ ಯತಿನ್​ ಶರ್ಮಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಡ್ರಗ್ಸ್​​ ಮತ್ತು ಕಾಸ್ಮೆಟಿಕ್ಸ್​ ಆಕ್ಟ್​ ಅಡಿಯಲ್ಲಿ ಇದನ್ನು ತಪ್ಪು ಬ್ರ್ಯಾಂಡಿಂಗ್​ ಎಂದು ಪರಿಗಣಿಸಬಹುದು. ಕಾನೂನು ಔಷಧವನ್ನು ಸಸ್ಯಾಹಾರಿ ಅಥವಾ ಮಾಂಸಹಾರಿ ಎಂದು ಕಡ್ಡಾಯಗೊಳಿಸುವುದಿಲ್ಲ ಎಂದು ತಿಳಿಸಿದರು.
ಪ್ರಸ್ತಾಪವನ್ನು ಆಲಿಸಿದ ನ್ಯಾಯಮೂರ್ತಿ ಸಂಜೀವ್ ನರುಲಾ ಅವರಿದ್ದ ಪೀಠವು ಕೇಂದ್ರ ಸರ್ಕಾರ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ), ಪತಂಜಲಿ, ದಿವ್ಯ ಫಾರ್ಮಸಿ, ಯೋಗ ಗುರು ರಾಮ್‌ದೇವ್ ಅವರಿಗೆ ಈ ವಿಷಯದ ಕುರಿತು ನೋಟಿಸ್ ಜಾರಿ ಮಾಡಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್‌ಗೆ ನಿಗದಿಪಡಿಸಿದೆ.
ಅರ್ಜಿದಾರರು ದಿವ್ಯ ಟೂತ್‌ಪೇಸ್ಟ್‌ನಲ್ಲಿ ಮೀನಿನಿಂದ ಪಡೆಯಲಾದ ಸೀ ಫೋಮ್ ಸೆಪಿಯಾ ಅಫಿಷಿನಾಲಿಸ್ ಎಂಬ ಅಂಶವಿದೆ. ಈ ಉತ್ಪನ್ನದ ಬಳಕೆಯಿಂದ ತನಗೆ ಮತ್ತು ಅವನ ಕುಟುಂಬಕ್ಕೆ ಸಂಕಟವಾಗಿದೆ. ನಮ್ಮ ಧಾರ್ಮಿಕ ನಂಬಿಕೆ ಪ್ರಕಾರ ನಾವು ಸಸ್ಯಾಹಾರಿ ಉತ್ಪನ್ನಗಳನ್ನು ಮಾತ್ರ ಸೇವಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ ದಿವ್ಯ ಟೂತ್​ಪೇಸ್ಟ್ ಉತ್ಪಾದನೆ ಮತ್ತು ಪ್ರಚಾರಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪತಂಜಲಿ ಆಯುರ್ವೇದ ಈ ಉತ್ಪನ್ನವನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸಸ್ಯಾಹಾರಿ ಎಂದು ಸೂಚಿಸುವ ಹಸಿರು ಚುಕ್ಕೆಯೊಂದಿಗೆ ಮಾರಾಟ ಮಾಡುತ್ತಿದೆ. ಧಾರ್ಮಿಕ ನಂಬಿಕೆಗಳನ್ನು ಗೌರವಿಸಬೇಕು ಮತ್ತು ಉತ್ಪನ್ನಗಳ ಪ್ರಾತಿನಿಧ್ಯದಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಪತಂಜಲಿ ಪದೇಪದೆ ಕಾನೂನು ತೊಂದರೆಯನ್ನು ಎದುರಿಸುತ್ತಿದೆ. ಇತ್ತೀಚೆಗೆ ಪತಂಜಲಿಯು ತನ್ನ ಉತ್ಪನ್ನಗಳ ಬಗ್ಗೆ ತಪ್ಪುದಾರಿಗೆಳೆಯುವ ಜಾಹೀರಾತುಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿದೆ ಎಂಬ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಸುಪ್ರೀಂಕೋರ್ಟ್​​ ಆಗಸ್ಟ್​​ 13ರಂದು ಮುಕ್ತಾಯಗೊಳಿಸಿತ್ತು.(ಏಜೆನ್ಸೀಸ್​​)
ತುಪ್ಪದೊಂದಿಗೆ ಬಾಳೆಹಣ್ಣು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನ ಗೊತ್ತಾ?; ತಿಳಿದ್ರೆ ನೀವು ಫಾಲೋ ಮಾಡೋದಂತು ಗ್ಯಾರಂಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 1 =
Remember me
