ಮುಂಬೈ:ಬಾಲಿವುಡ್​ ನಟಿ ಕಂಗನಾ ರಣಾವತ್​ ಅವರ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸಲು ಬಾಂಬೆ ಹೈಕೋರ್ಟ್​ ಇಂದು ನಿರಾಕರಿಸಿದೆ. ಇದರಿಂದಾಗಿ ಕವಿ ಮತ್ತು ಚಿತ್ರ ರಚನಾಕಾರ ಜಾವೆದ್​​ ಅಖ್ತರ್​ ದೂರಿನ ಮೇಲೆ ಮುಂಬೈ ಮೆಟ್ರೊಪೊಲಿಟನ್​ ಮ್ಯಾಜಿಸ್ಟ್ರೇಟ್​ ವಿಚಾರಣೆ ನಡೆಸುತ್ತಿರುವ ಕ್ರಿಮಿನಲ್​ ಮೊಕದ್ದಮೆಯಲ್ಲಿ ಕಂಗನಾ ವಿಚಾರಣೆಗೆ ಹಾಜರಾಗಬೇಕಾಗಲಿದೆ.
ಟಿ.ವಿ. ಸಂದರ್ಶನವೊಂದರಲ್ಲಿ ಕಂಗನಾ ತಮ್ಮ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದರು ಎಂದು ಮಾಜಿ ಸಂಸದರೂ ಆಗಿರುವ ಜಾವೆದ್​ ಅಖ್ತರ್​ ದೂರು ನೀಡಿದ್ದರು. ಆ ದೂರಿನ ಮೇಲೆ ಮ್ಯಾಜಿಸ್ಟ್ರೇಟರು ಪ್ರಕರಣ ದಾಖಲಿಸಿ ವಿಚಾರಣೆ ಕೈಗೆತ್ತಿಕೊಂಡಿದ್ದರು. ಈ ನಿಟ್ಟಿನಲ್ಲಿ ವಿಚಾರಣೆಗಾಗಿ ​ಕಳೆದ ಸೆಪ್ಟೆಂಬರ್​ 1ನೇ ತಾರೀಖು ಕೋರ್ಟಿಗೆ ಕಂಗನಾ ಖುದ್ದು ಹಾಜರಾಗಬೇಕೆಂದು ಮ್ಯಾಜಿಸ್ಟ್ರೇಟರು ಆದೇಶಿಸಿದ್ದರು.
ಇದನ್ನೂ ಓದಿ:ರೌಡಿ ಪೆರೇಡ್​: ಹಬ್ಬದ ವೇಳೆ ಕೆಟ್ಟ ಕೆಲಸಕ್ಕೆ ಕೈಹಾಕದಂತೆ ವಾರ್ನಿಂಗ್​​!
ಹೈಕೋರ್ಟ್​ನಲ್ಲಿ ಕಂಗನಾ ಈ ಪ್ರಕರಣದ ದಾಖಲಿಸಿಕೊಂಡ ಮ್ಯಾಜಿಸ್ಟ್ರೇಟರ ಆದೇಶವನ್ನು ಪ್ರಶ್ನಿಸಿದ್ದರಿಂದ ವಿಚಾರಣೆಯನ್ನು ಮುಂದೂಡಲಾಗಿತ್ತು. ಇಂದು ಹೈಕೋರ್ಟ್​ ಕಂಗನಾರಿಗೆ ಈ ವಿಚಾರವಾಗಿ ಯಾವುದೇ ರಿಲೀಫ್​ ನೀಡಲು ನಿರಾಕರಿಸಿರುವುದರಿಂದ, ಅವರು ಸೆಪ್ಟೆಂಬರ್​ 14 ರ ಮಂಗಳವಾರ ನಿಗದಿಯಾಗಿರುವ ವಿಚಾರಣೆಗೆ ಮ್ಯಾಜಿಸ್ಟ್ರೇಟ್​ ಕೋರ್ಟ್​ನ ಮುಂದೆ ಹಾಜರಾಗಬೇಕಿದೆ.(ಏಜೆನ್ಸೀಸ್)
VIDEO| 5 ಭಾಷೆಗಳಲ್ಲಿ 777 ಚಾರ್ಲಿಯ ‘ಟಾರ್ಚರ್ ಸಾಂಗ್’ ರಿಲೀಸ್! ಚಿತ್ರದ ಬಿಡುಗಡೆಗೂ ದಿನಾಂಕ ನಿಗದಿ

ಹು-ಧಾ ಪಾಲಿಕೆ: ಬಿಜೆಪಿಗೆ ಹೊಸತೊಂದು ವಿಘ್ನ – ಪಕ್ಷದಲ್ಲಿ ಉಪಮೇಯರ್​ ಅಭ್ಯರ್ಥಿಯೇ ಇಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
