ಜೈಪುರ: ಅನರ್ಹತೆಯಿಂದ ಪಾರು ಮಾಡುವಂತೆ ಹೈಕೋರ್ಟ್ ಮೆಟ್ಟಿಲೇರಿರುವ ರಾಜಸ್ಥಾನ ಮಾಜಿ ಡಿಸಿಎಂ ಸಚಿನ್​ ಪೈಲಟ್​ ಹಾಗೂ ಅವರ ಬಣದ 18 ಶಾಸಕರು ಸದ್ಯದ ಮಟ್ಟಿಗೆ ಸೇಫ್​ ಆಗಿದ್ದಾರೆ.
ಇಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​, ಸಚಿನ್ ಪೈಲಟ್​ ಹಾಗೂ 18 ಎಂಎಲ್​ಎಗಳು ಸಲ್ಲಿಸಿದ ಅರ್ಜಿಯ ವಿಚಾರಣೆಯ ತೀರ್ಪನ್ನು ಶುಕ್ರವಾರ ನೀಡಲಿದ್ದೇವೆ. ಅಲ್ಲಿಯವರೆಗೆ ಸಚಿನ್​ ಪೈಲಟ್ ಹಾಗೂ ಅವರ ಬಣದ ಶಾಸಕರ ವಿರುದ್ಧ ಯಾವುದೇ ಕ್ರಮವನ್ನೂ ತೆಗೆದುಕೊಳ್ಳಬಾರದು ಎಂದು ಸ್ಪೀಕರ್​ಗೆ ಸೂಚಿಸಿದೆ.
ಪಕ್ಷದಿಂದ ದೂರ ಉಳಿದು, ಶಾಸಕಾಂಗ ಪಕ್ಷದ ಎರಡು ಸಭೆಗಳಿಗೆ ಗೈರಾದ ಸಚಿನ್​ ಪೈಲಟ್​ ಮತ್ತು 18 ಎಂಎಲ್​ಎ ಗಳಿಗೆ ರಾಜಸ್ಥಾನ ಸ್ಪೀಕರ್​ ಅನರ್ಹತೆಯ ನೋಟಿಸ್ ನೀಡಿದ್ದರು. ಅದರ ವಿರುದ್ಧ ಈ ಬಣ ಹೈಕೋರ್ಟ್​ ಮೆಟ್ಟಿಲೇರಿದ್ದು, ಅರ್ಜಿ ವಿಚಾರಣೆ ನಡೆಯುತ್ತಿದೆ.
ಇಂದು ಸಚಿನ್​ ಪೈಲಟ್​ ಹಾಗೂ ಶಾಸಕರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್​ ರೋಹಟಗಿ ಅವರು, ಸಚಿನ್​ ಪೈಲಟ್​​ ಬಣದ ವಿರುದ್ಧ ಅನರ್ಹತೆ ನೋಟಿಸ್​ ಜಾರಿ ಮಾಡುವಾಗ ಸ್ಪೀಕರ್​ ಯಾವುದನ್ನೂ ದಾಖಲೆಯಲ್ಲಿ ಇಲ್ಲ. ಅವರಿಗೆ ಯಾಕೆ ಅನರ್ಹತೆಯ ನೋಟಿಸ್​ ನೀಡಲಾಗಿದೆ ಎಂದೂ ಉಲ್ಲೇಖ ಮಾಡಿಲ್ಲ. ಅಷ್ಟೇ ಅಲ್ಲದೆ, ನೋಟಿಸ್​ಗೆ ಉತ್ತರಿಸಲು ನಿಯಮದ ಪ್ರಕಾರ ಕೊಡಬೇಕಾದಷ್ಟು ಸಮಯವನ್ನೂ ಸ್ಪೀಕರ್​ ಕೊಡಲಿಲ್ಲ ಎಂದು ವಾದಿಸಿದ್ದಾರೆ.ಇದನ್ನೂ ಓದಿ:ಆರೇಳು ತಿಂಗಳಲ್ಲಿ ಮನೆಮನೆಗೆ ರೇಷನ್‌: ದೆಹಲಿ ಸಚಿವ ಸಂಪುಟದಲ್ಲಿ ಅನುಮೋದನೆ
ಇನ್ನು ಸ್ಪೀಕರ್​ ಪರ ವಾದ ಮಂಡಿಸಿದ ಅಭಿಷೇಕ್​ ಮನು ಸಿಂಘ್ವಿ, ಶಾಸಕರಿಗೆ ಅನರ್ಹತೆಯ ಎಚ್ಚರಿಕೆಯ ನೋಟಿಸ್​ ನೀಡಲಾಗಿದೆ. ಅವರನ್ನು ಸದನದಿಂದ ಅನರ್ಹ ಮಾಡುವ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಅಷ್ಟಕ್ಕೂ ವಿಧಾನಸಭೆಯಲ್ಲಿ ಸ್ಪೀಕರ್​ ತೀರ್ಮಾನವೇ ಅಂತಿಮ. ಅವರೇ ಮುಖ್ಯಸ್ಥರು. ಹೈಕೋರ್ಟ್​ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದ್ದಾರೆ.
ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್​ ದಾಖಲೆಗಳನ್ನೆಲ್ಲ ಪರಿಶೀಲನೆ ಮಾಡಿದ್ದು, ಶುಕ್ರವಾರ ತೀರ್ಪು ನೀಡುವುದಾಗಿ ಘೋಷಿಸಿದೆ. ಅಲ್ಲಿಯವರೆಗೂ ಸ್ಪೀಕರ್ ಕೂಡ ತಟಸ್ಥವಾಗಿರಬೇಕು. ಸಚಿನ್​ ಪೈಲಟ್​ ಬಣದ ವಿರುದ್ಧ ಕ್ರಮ ಕೈಗೊಳ್ಳಬಾರದು ಎಂದು ಹೇಳಿದೆ. (ಏಜೆನ್ಸೀಸ್​)
ಮನೇಲೇ ಇದ್ದೀನಿ, ಯಾವುದೇ ರೂಲ್ಸ್​ ಬ್ರೇಕ್​ ಮಾಡಿಲ್ಲ ಎಂದ ಸೋನಂ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × 2 =
Remember me
