ಭುವನೇಶ್ವರ್​:ಬಾಯ್​ಫ್ರೆಂಡ್​ ಜತೆಗಿನ ಕಲಹದಿಂದ ಬೇಸತ್ತ ಯುವತಿಯೊಬ್ಬಳು ಜನನಿಬಿಡ ರಸ್ತೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಒಡಿಶಾ ರಾಜಧಾನಿ ಭರತಪುರ್​ ರಸ್ತೆಯಲ್ಲಿ ಸೋಮವಾರ ನಡೆದಿದೆ.
ಯುವತಿಯ ಹೈಡ್ರಾಮದಿಂದ ಬಾಯ್​ಫ್ರೆಂಡ್ ಮುಜುಗರ ಅನುಭವಿಸುವಂತಾಯಿತು. ಸೋಮವಾರ ಮಧ್ಯಾಹ್ನ 3.30ರ ಸುಮಾರಿಗೆ ಜನನಿಬಿಡ ರಸ್ತೆಯ ಪಕ್ಕದಲ್ಲೇ ಈ ಪ್ರಸಂಗ ಜರುಗಿದೆ. ಇಬ್ಬರು ಸಹ ಸ್ಕೂಟರ್​ನಲ್ಲಿ ಬಂದು ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಬಳಿಕ ಯುವತಿ ಸ್ಕೂಟರ್​ ಇಳಿದು ಹೋಗುವಾಗ ಆಕೆಯನ್ನು ತಡೆಯಲು ಬಾಯ್​ಫ್ರೆಂಡ್​, ಬ್ಯಾಗ್​ ಹಿಡಿದು ಎಳೆದಿದ್ದಾನೆ.
ಇದನ್ನೂ ಓದಿರಿ:ಟೀಮ್ ಇಂಡಿಯಾ ಪರ ಪದಾರ್ಪಣೆ ಪಂದ್ಯದಲ್ಲೇ ದಾಖಲೆ ಬರೆದ ಕನ್ನಡಿಗ ಪ್ರಸಿದ್ಧಕೃಷ್ಣ
ಹೀಗೆ ಇಬ್ಬರ ವಾಗ್ವಾದ ತಾರಕ್ಕೇರಿ ನಿಯಂತ್ರಣ ಕಳೆದುಕೊಂಡ ಯುವತಿ ತನ್ನ ಬ್ಯಾಗ್​ನಲ್ಲಿ ಇಟ್ಟಿದ್ದ ಸ್ಯಾನಿಟೈಸರ್​ ಕುಡಿದಿದ್ದಾಳೆ. ಯಾವಾಗ ಅದು ಪರಿಣಾಮ ಬೀರಲಿಲ್ಲ ಎಂದು ತಿಳಿಯಿತೋ ಆಕೆ ಎತ್ತರ ಪ್ರದೇಶದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಆದರೆ, ಮುಂದೆ ನಡೆಯುತ್ತಿದ್ದ ಅನಾಹುತದಿಂದ ಬಾಯ್​ಫ್ರೆಂಡ್​ ಮತ್ತು ಕೆಲ ಯುವಕರು, ಯುವತಿಯನ್ನು ಕಾಪಾಡಿದ್ದಾರೆ.
ಪ್ರಜ್ಞೆ ತಪ್ಪಿ ಬಿದ್ದಿದ್ದ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಬಾಯ್​ಫ್ರೆಂಡ್​ ಕರೆದೊಯ್ದಿದ್ದಾನೆ. ಅದೃಷ್ಟವಶಾತ್​ ಯುವತಿಗೆ ಮತ್ತೆ ಪ್ರಜ್ಞೆ ಬಂದಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಮತ್ತೊಂದು ಆಸ್ಪತ್ರೆಗೆ ಬಾಯ್​ಫ್ರೆಂಡ್​ ಕರೆದೊಯ್ದಿದ್ದಾನೆ. ಇಡೀ ಘಟನೆ ಸಾರ್ವಜನಿಕರ ಎದುರಲ್ಲೇ ನಡೆದಿದೆ. ಅನೇಕರು ಇಬ್ಬರ ಕಿತ್ತಾಟ ನೋಡಿ ಶಾಕ್​ ಆಗಿದ್ದು ಉಂಟು.(ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಸಿನಿಮಾ ನಿರ್ಮಾಪಕ ಶಂಕರೇಗೌಡ ಬಂಧನ; ಡ್ರಗ್ಸ್​ ಮಾಫಿಯಾ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಪ್ರೊಡ್ಯೂಸರ್

ಖಾಸಗಿ ಶಾಲಾ ಶಿಕ್ಷಕರಿಗೂ ಶಿಕ್ಷಕರ ಕಲ್ಯಾಣ ನಿಧಿಗೆ ಸದಸ್ಯತ್ವ: ಸುರೇಶ್ ಕುಮಾರ್

ಆಮೆಗಳ ದಿಕ್ಕು ತಪ್ಪಿಸುವ ವಿದ್ಯುತ್ ದೀಪಗಳು! ಎಲ್ಲ ಆಮೆಗಳು ಒಂದೇ ದಿನ ಮೊಟ್ಟೆ ಇಡೋದಕ್ಕೆ ಕಾರಣವಿದು…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 11 =
Remember me
