ನವದೆಹಲಿ:ಜಾಗತಿಕವಾಗಿ ವರದಿಯಾದ ಸಾರ್ಸ್-ಕೋವ್-2 ವೈರಸ್​ನ ಕೆಲವು ಹೊಸ ರೂಪಾಂತರಗಳು ಪತ್ತೆಯಾದ ಇತ್ತೀಚಿನ ವರದಿಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರದ ಮಟ್ಟದಲ್ಲಿ ಇಂದು ಉನ್ನತ ಮಟ್ಟದ ಸಭೆ ನಡೆಯಿತು.
ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ.ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಿತು. ಜಾಗತಿಕ ಮತ್ತು ರಾಷ್ಟ್ರೀಯವಾಗಿ ಕೋವಿಡ್-19ರ ಪ್ರಸ್ತುತ ಪರಿಸ್ಥಿತಿ, ಚಲಾವಣೆಯಲ್ಲಿರುವ ಹೊಸ ರೂಪಾಂತರಗಳು ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಅವುಗಳ ಪರಿಣಾಮವನ್ನು ಪರಿಶೀಲಿಸಲು ಉನ್ನತ ಮಟ್ಟದ ಸಭೆ ನಡೆಸಲಾಯಿತು.
ಜಾಗತಿಕವಾಗಿ ವರದಿಯಾಗಿರುವ ಸಾರ್ಸ್-ಕೋವ್-2 ವೈರಸ್​​ನ ಕೆಲವು ಹೊಸ ರೂಪಾಂತರಗಳಾದ ಬಿಎ.2.86 (ಪಿರೋಲಾ) ಮತ್ತು ಇಜಿ.5 (ಎರಿಸ್) ಸೇರಿದಂತೆ ಜಾಗತಿಕ ಕೋವಿಡ್ -19 ಪರಿಸ್ಥಿತಿಯ ಅವಲೋಕನವನ್ನು ಆರೋಗ್ಯ ಕಾರ್ಯದರ್ಶಿ ನೀಡಿದರು. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಇಜಿ.5 (ಎರಿಸ್) 50ಕ್ಕೂ ಹೆಚ್ಚು ದೇಶಗಳಿಂದ ವರದಿಯಾಗಿದ್ದರೆ, ರೂಪಾಂತರ ಬಿಎ .2.86 (ಪಿರೋಲಾ) ನಾಲ್ಕು ದೇಶಗಳಲ್ಲಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ:ದ್ವೇಷಕ್ಕೆ ದ್ವೇಷ ಮಾತ್ರ ಕಾಣಿಸುವುದು, ಟ್ರೋಲಿಗರಿಗೆ ಕಂಡ ಚಾಯ್​ವಾಲಾ ಯಾರು?: ನಟ ಪ್ರಕಾಶ್​ ರಾಜ್​ ಮತ್ತೊಂದು ‘ಎಕ್ಸ್​’
ಕಳೆದ 7 ದಿನಗಳಲ್ಲಿ ಜಾಗತಿಕವಾಗಿ ಒಟ್ಟು 2,96,219 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದರೆ, ಜಾಗತಿಕ ಜನಸಂಖ್ಯೆಯ ಸುಮಾರು ಶೇ. 17ರಷ್ಟು ಕೊಡುಗೆ ನೀಡುವ ಭಾರತದಲ್ಲಿ ಕಳೆದ ವಾರದಲ್ಲಿ ಕೇವಲ 223 ಪ್ರಕರಣಗಳು (ಜಾಗತಿಕ ಹೊಸ ಪ್ರಕರಣಗಳ 0.075%) ವರದಿ ಆಗಿವೆ. ಇಡೀ ದೇಶದಲ್ಲಿ ಹೊಸ ಕೋವಿಡ್-19 ಪ್ರಕರಣಗಳ ದೈನಂದಿನ ಸರಾಸರಿ 50ಕ್ಕಿಂತ ಕಡಿಮೆ ಇದೆ ಮತ್ತು ದೇಶದಲ್ಲಿ ಸಾಪ್ತಾಹಿಕ ಟೆಸ್ಟ್ ಪಾಸಿಟಿವಿಟಿ ದರ 0.2% ಕ್ಕಿಂತ ಕಡಿಮೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಹೇಳಿದರು. ಭಾರತದಲ್ಲಿ ಹರಡುತ್ತಿರುವ ವಿವಿಧ ರೂಪಾಂತರಗಳ ಜೀನೋಮ್ ಅನುಕ್ರಮವನ್ನು ಕೂಡ ಈ ಸಂದರ್ಭದಲ್ಲಿ ಅವಲೋಕಿಸಲಾಯಿತು.
ಇದನ್ನೂ ಓದಿ:ಆಣೆ ಮಾಡುವ ಹಂತಕ್ಕೆ ತಲುಪಿತು ಸೌಜನ್ಯಾ ಪ್ರಕರಣ; ಇಬ್ಬರ ಮಧ್ಯೆ ಆರೋಪ, ದೇವರ ಮುಂದೆ ಪ್ರಮಾಣ!
ವಿಸ್ತೃತ ಚರ್ಚೆಗಳ ನಂತರ, ಡಾ.ಪಿ.ಕೆ.ಮಿಶ್ರಾ ಅವರು ದೇಶದಲ್ಲಿ ಕೋವಿಡ್ -19 ಪರಿಸ್ಥಿತಿ ಸ್ಥಿರವಾಗಿದೆ ಮತ್ತು ದೇಶದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳು ಸನ್ನದ್ಧವಾಗಿದ್ದರೂ, ರಾಜ್ಯಗಳು ಐಎಲ್ಐ/ ಎಸ್ಎಆರ್​​ಐ ಪ್ರಕರಣಗಳ ಪ್ರವೃತ್ತಿಗಳನ್ನು ಮೇಲ್ವಿಚಾರಣೆ ಮಾಡುವ, ಕೋವಿಡ್ -19 ಪರೀಕ್ಷೆಗೆ ಸಾಕಷ್ಟು ಮಾದರಿಗಳನ್ನು ಕಳುಹಿಸುವ ಅವಶ್ಯಕತೆ ಇದೆ ಎಂದೂ ಹೇಳಿದರು.
ಸಭೆಯಲ್ಲಿ ನೀತಿ ಆಯೋಗದ ಸದಸ್ಯ ಡಾ. ವಿನೋದ್ ಪಾಲ್ ಭಾಗವಹಿಸಿದ್ದರು. ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ, , ಪಿಎಂಒ ಸಲಹೆಗಾರ ಅಮಿತ್ ಖರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿ ಸುಧಾಂಶ್ ಪಂತ್, ಡಿಎಚ್ಆರ್ ಮತ್ತು ಡಿಜಿ ಐಸಿಎಂಆರ್ ಕಾರ್ಯದರ್ಶಿ ರಾಜೀವ್ ಬಹ್ಲ್, ಬಯೋಟೆಕ್ನಾಲಜಿ ಕಾರ್ಯದರ್ಶಿ ರಾಜೇಶ್ ಎಸ್. ಗೋಖಲೆ ಮತ್ತು ಪ್ರಧಾನ ಮಂತ್ರಿಯವರ ಹೆಚ್ಚುವರಿ ಕಾರ್ಯದರ್ಶಿ ಪುಣ್ಯ ಸಲಿಲಾ ಶ್ರೀವಾಸ್ತವ ಈ ಉನ್ನತಮಟ್ಟದ ಸಭೆಯಲ್ಲಿದ್ದರು.
ನಾಗರಹಾವಿನ ಮುಂದೆ ಕೇಕ್ ಇಟ್ಟು ‘ಹ್ಯಾಪಿ ಬರ್ತ್​ಡೇ’ ಎಂದು ಪಂಚಮಿ ಆಚರಿಸಿದ ಯುವಕರ ದಂಡು!

ಚಂದ್ರಯಾನ-3: ತಿರುಪತಿಯಲ್ಲಷ್ಟೇ ಅಲ್ಲ, ಕುಕ್ಕೆ ಸುಬ್ರಹ್ಮಣ್ಯದಲ್ಲೂ ಪೂಜೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
