ನವದೆಹಲಿ:ಭಾರತೀಯ ತೈಲ ನಿಗಮವು (ಐಒಸಿ) ನೌಕಾಪಡೆಗೆಂದೇ ಅಭಿವೃದ್ಧಿಪಡಿಸಿರುವ ಜಾಗತಿಕ ಮಟ್ಟದ ಹೈ ಫ್ಲ್ಯಾಶ್ ಹೈ ಸ್ಪೀಡ್ ಡೀಸೆಲನ್ನು (ಎಚ್​ಎಫ್​ಎಚ್​ಎಸ್​ಡಿ-ಇನ್ 512) ನೌಕಾ ಪಡೆಯ ಸರಕುಗಳ ವಿಭಾಗದ ಮುಖ್ಯಸ್ಥ ವೈಸ್ ಅಡ್ಮಿರಲ್ ಜಿ.ಎಸ್. ಪಬ್ಬಿ ಮಂಗಳವಾರ ಲೋಕಾರ್ಪಣೆ ಮಾಡಿದರು. ನೌಕಾ ಪಡೆ ಮತ್ತು ಐಒಸಿ ನಡುವಿನ ಸಹಭಾಗಿತ್ವದ ಐತಿಹಾಸಿಕ ದಿನವೆಂದು ಪಬ್ಬಿ ಬಣ್ಣಿಸಿದರು.
ರಕ್ಷಣಾ ಪಡೆಗಳಿಗೆ ಜಾಗತಿಕ ಮಟ್ಟದ ಇಂಧನ ಪೂರೈಸಲು ಐಒಸಿ ಸದಾ ಪ್ರಯತ್ನಿಸುತ್ತಿದ್ದು, ಇದೀಗ ಉತ್ತಮ ಗುಣಮಟ್ಟದ ಡೀಸೆಲ್ ಅಭಿವೃದ್ಧಿಪಡಿಸಿದೆ. ಇದನ್ನು ನೌಕೆಪಡೆಯ ಹಡಗುಗಳಲ್ಲಿ ಬಳಸಲಾಗುತ್ತದೆ. ಜಗತ್ತಿನಲ್ಲಿ ಈಗ ಇರುವ ಗುಣಮಟ್ಟದ ಮಾನದಂಡ ಮೀರಿಸುವ ರೀತಿಯಲ್ಲಿ ಡೀಸೆಲ್​ಅನ್ನು ಉನ್ನತೀಕರಿಸಲಾಗಿದೆ.
ಈ ಡೀಸೆಲ್​ನಲ್ಲಿ ಸಲ್ಪರ್ ಅಂಶ ಕಡಿಮೆಯಿರುವುದರಿಂದ ಪರಿಸರದ ಮೇಲೆ ಹೆಚ್ಚು ದುಷ್ಪರಿಣಾಮ ಬೀರುವುದಿಲ್ಲ. ಅಲ್ಲದೆ ಯಂತ್ರಗಳ ಕ್ಷಮತೆ ಹೆಚ್ಚುತ್ತದೆ ಎಂದು ಐಒಸಿ ಹೇಳಿದೆ.
ಐಒಸಿಯ ಸಂಶೋಧನೆ ಮತ್ತು ಅಭಿವೃದ್ಧಿ ನಿರ್ದೇಶಕ ಎಸ್.ಎಸ್.ವಿ. ರವಿಕುಮಾರ್, ಸಂಸ್ಕರಣಾಗಾರದ ನಿರ್ದೇಶಕ ಎಸ್.ಎಂ. ವೈದ್ಯ ಮತ್ತು ಸಂಸ್ಥೆ ಹಾಗೂ ನೌಕಾ ಪಡೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − four =
Remember me
