ಶ್ರೀನಗರ:ಜಮ್ಮು-ಕಾಶ್ಮೀರದಲ್ಲಿನ ಲೈನ್​ ಆಫ್​ ಕಂಟ್ರೋಲ್​ (ಎಲ್​ಒಸಿ) ಉದ್ದಕ್ಕೂ ಕಳೆದ ಎಂಟು ತಿಂಗಳಲ್ಲಿ ಪಾಕಿಸ್ತಾನ 3,186 ಸಲ ಕದನವಿರಾಮ ಉಲ್ಲಂಘಿಸಿದೆ. ಮಾತ್ರವಲ್ಲ, ಇದು ಕಳೆದ 17 ವರ್ಷಗಳಲ್ಲೇ ಅತ್ಯಧಿಕ ಎನಿಸಿಕೊಂಡಿದೆ.
ಈ ವರ್ಷ ಜನವರಿ 1ರಿಂದ ಸೆಪ್ಟೆಂಬರ್ 7ರವರೆಗೆ ಪಾಕ್​ 3,186 ಸಲ ಕದನವಿರಾಮ ಉಲ್ಲಂಘಿಸಿದ್ದು, ಈ ಸಂದರ್ಭದಲ್ಲಿ ಭಾರತದ 8 ಯೋಧರು ಮೃತರಾಗಿದ್ದು, ಇಬ್ಬರು ಗಾಯಗೊಂಡಿದ್ದರು ಎಂಬ ಅಂಶವನ್ನು ಸರ್ಕಾರ ಸಂಸತ್ತಿನಲ್ಲಿ ಕಳೆದ ವಾರ ಮಾಹಿತಿ ನೀಡಿದೆ.
ಇದರ ಜತೆಗೆ ಜಮ್ಮು ಪ್ರದೇಶದಲ್ಲಿ ಜ. 1ರಿಂದ ಆ. 31ರ ವರೆಗೆ ಪಾಕ್​ 242 ಸಲ ಕ್ರಾಸ್​ ಬಾರ್ಡರ್ ಫೈರಿಂಗ್ ಕೂಡ ನಡೆಸಿದೆ ಎಂಬುದನ್ನು ರಕ್ಷಣಾ ಖಾತೆಯ ರಾಜ್ಯ ಸಚಿವ ಶ್ರೀಪಾದ್ ನಾಯಕ್ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. 2019ರಲ್ಲಿ ಸುಮಾರು 2 ಸಾವಿರ ಕದನವಿರಾಮ ಉಲ್ಲಂಘನೆ ನಡೆದಿತ್ತು. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − nine =
Remember me
