ನವದೆಹಲಿ:ಪ್ಯಾರಾಮಿಲಿಟರಿ ಪಡೆಗಳ ಪೈಕಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್​ಎಫ್​) ಸಿಬ್ಬಂದಿಯೇ ಹೆಚ್ಚಿನ ಪ್ರಮಾಣದಲ್ಲಿ ಕರೊನಾ ಸೋಂಕಿನಿಂದ ಸಾವಿಗೀಡಾಗಿದ್ದಾರೆ ಎಂಬ ಸುದ್ದಿ ಬಹಿರಂಗಗೊಂಡಿದೆ.
ಸಂಸತ್ತಿನಲ್ಲಿ ಭಾನುವಾರ ಸಂಸದ ಜಗದಂಬಿಕ ಪಾಲ್​ ಅವರು ಎತ್ತಿದ್ದ ಪ್ರಶ್ನೆಗೆ ಕೇಂದ್ರ ಸರ್ಕಾರ ನೀಡಿದ್ದ ಮಾಹಿತಿಯಲ್ಲಿ ಈ ವಿಚಾರ ಗೊತ್ತಾಗಿದೆ. ಕರೊನಾ ಸೋಂಕಿಗೆ ಅತಿಹೆಚ್ಚು(9,158) ಒಳಗಾಗಿದ್ದು ಸಿಆರ್​​ಪಿಎಫ್​ ಆಗಿದ್ದರೂ, ಆ ಪೈಕಿ ಸಾವಿನ ಪ್ರಮಾಣ ಶೇ. 0.39 ಮಾತ್ರ. ಅವರಲ್ಲಿ ಗುಣವಾದವರ ಪ್ರಮಾಣ ಶೇ. 84 ಇದೆ.
ಇನ್ನು ಬಿಎಸ್​ಎಫ್​ನ 8,934 ಮಂದಿ ಸೋಂಕಿಗೆ ಒಳಗಾಗಿದ್ದು ಅವರಲ್ಲಿ ಸಾವಿನ ಪ್ರಮಾಣ ಶೇ. 0.36 ಹಾಗೂ ಚೇತರಿಕೆ ಪ್ರಮಾಣ ಶೇ. 80.41 ಇದೆ. ಆದರೆ ಸಿಐಎಸ್​ಎಫ್​ನಲ್ಲಿ ಬರೀ 5,544 ಮಂದಿ ಸೋಂಕಿಗೆ ಒಳಗಾಗಿದ್ದರೂ ಸಾವಿನ ಪ್ರಮಾಣ ಶೇ. 0.43 ಹಾಗೂ ಗುಣವಾದವರ ಪ್ರಮಾಣ ಶೇ. 75.25 ಇದೆ ಎಂದು ಸರ್ಕಾರ ಮಾಹಿತಿ ನೀಡಿದೆ. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 9 =
Remember me
