ಪಣಜಿ: “ಈ ವರ್ಷ ಕಳೆದ ವರ್ಷಕ್ಕಿಂತಲೂ ಜಾಸ್ತಿ ಮಳೆ ಬಂದಿದೆ.. ಐದು ವರ್ಷದ ಹಿಂದೆ ಹೀಗೇ ಭಾರಿ ಮಳೆ ಬಂದಿತ್ತು.. ಹತ್ತು ವರ್ಷಗಳಲ್ಲೇ ನಾನು ಇಂಥ ಮಳೆಯನ್ನು ಕಂಡಿಲ್ಲ..” ಭಾರಿ ಮಳೆಯಾದ ವರ್ಷಗಳಲ್ಲಿ ಸಾರ್ವಜನಿಕರಲ್ಲಿ ಇಂಥ ಉದ್ಗಾರಗಳು ಹೊರಡುವುದು ಸಾಮಾನ್ಯ.
ಆದರೆ ಬದುಕಿನಲ್ಲಿ ಅರ್ಧ ಶತಕ ಬಾರಿಸಿದವರು ಕೂಡ ನಾನು ಜೀವನದಲ್ಲಿ ಇಂಥ ಮಳೆಯನ್ನು ಕಂಡಿಲ್ಲ ಎನ್ನುವಂಥ ಮಳೆ ಗೋವಾದಲ್ಲಿ ಈ ಮುಂಗಾರಿನಲ್ಲಿ ಸುರಿದಿದೆ. ಏಕೆಂದರೆ ಕಳೆದ 59 ವರ್ಷಗಳ ಬಳಿಕ ಗೋವಾದಲ್ಲಿ ಅತ್ಯಧಿಕ ಮಳೆಯಾಗಿದೆ.
ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ 2020ರ ಮುಂಗಾರಿನಲ್ಲಿ ಗೋವಾ ರಾಜ್ಯದಲ್ಲಿ ಒಟ್ಟು 412 ಸೆಂ. ಮೀ. ಮಳೆಯಾಗಿದೆ. 1961ನೇ ಇಸವಿ ಬಳಿಕ ಇಷ್ಟು ದೊಡ್ಡ ಪ್ರಮಾಣದ ಮಳೆ ಇದೇ ಪ್ರಥಮ ಬಾರಿಗೆ ಸುರಿದಿದೆ. ಇದು ರಾಜ್ಯದಲ್ಲಿನ ಸರಾಸರಿ ವಾಡಿಕೆ ಮಳೆಗಿಂತಲೂ ಶೇ. 41 ಅಧಿಕ. 1961ರ ಮಾನ್​​ಸೂನ್​ನಲ್ಲಿ ರಾಜ್ಯದಲ್ಲಿ ಒಟ್ಟು 408 ಸೆಂ.ಮೀ. ಮಳೆಯಾಗಿತ್ತು. ಹಾಗೆಯೇ 1970ರಲ್ಲಿ 401 ಹಾಗೂ 2019ರಲ್ಲಿ 394 ಸೆಂ.ಮೀ. ಮಳೆಯಾಗಿತ್ತು. 1961ರಲ್ಲಿ ಐದು ಕೇಂದ್ರಗಳಲ್ಲಷ್ಟೇ ದಾಖಲಾಗುತ್ತಿದ್ದ ಮಳೆ ಈಗ 13 ಕೇಂದ್ರಗಳಲ್ಲಿ ದಾಖಲಾಗುತ್ತಿದೆ ಎಂದು ಗೋವಾ ಹವಾಮಾನ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + two =
Remember me
