ಚಿತ್ತೂರು:ಹೆದ್ದಾರಿ ದರೋಡೆಕೋರರ ಗುಂಪೊಂದು ಟ್ರಕ್​ ಒಂದನ್ನು ಹೈಜಾಕ್​ ಮಾಡಿ ಅದರಲ್ಲಿದ್ದ 6 ಕೋಟಿ ರೂ. ಮೌಲ್ಯದ ಮೊಬೈಲ್​ ಫೋನ್​ಗಳನ್ನು ದೋಚಿ ಪರಾರಿಯಾಗಿರುವ ಘಟನೆ ಆಂಧ್ರಪ್ರದೇಶ-ತಮಿಳುನಾಡು ಗಡಿ ನಗರಿಯಲ್ಲಿ ನಡೆದಿದೆ.
ಮಂಗಳವಾರ ಘಟನೆ ನಡೆದಿದೆ. ಸುಮಾರು 15 ಸಾವಿರ ಮೊಬೈಲ್​ ಫೋನ್​ ತುಂಬಿದ ಟ್ರಕ್​ ಚೆನ್ನೈನ ಶ್ರಿಪೆರಂಬದೂರ್​ನಿಂದ ಮಹಾರಾಷ್ಟ್ರಕ್ಕೆ ತೆರಳುತ್ತಿತ್ತು. ಆರೋಪಿಗಳು ಶ್ರಿಪೆರಂಬದೂರ್​ನಿಂದ ಟ್ರಕ್​ ಬೆನ್ನಟ್ಟಿ ತಮಿಳುನಾಡು ಗಡಿ ದಾಟಿ ಆಂಧ್ರಪ್ರದೇಶಕ್ಕೆ ಪ್ರವೇಶಿಸುತ್ತಿದ್ದಂತೆ ಟ್ರಕ್​ ತಡೆದಿದ್ದಾರೆ. ಬಳಿಕ ಚಾಲಕನಿಗೆ ಥಳಿಸಿ, ಬಲವಂತವಾಗಿ ಕೆಳಗಿಳಿಸಿ ಹೈಜಾಕ್​ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಪ್ರಿಯಕರನ ಮನೆ ಹತ್ತಿರವೇ ಎಂಬಿಎ ವಿದ್ಯಾರ್ಥಿನಿ ಆತ್ಮಹತ್ಯೆ: ಡೆತ್​ನೋಟ್​ನಲ್ಲಿ ಕಳಚಿಬಿತ್ತು ಲವ್ವರ್ ಮುಖವಾಡ!
ಚಾಲಕ ನೀಡಿದ ದೂರಿನ ಅನ್ವಯ ಆಂಧ್ರಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಶೇಷ ಪೊಲೀಸ್​ ತಂಡ ರಚನೆ ಮಾಡಿ ಟ್ರಕ್​ ಪತ್ತೆ ಕಾರ್ಯಾಚರಣೆಗೆ ಇಳಿದರು. ತದನಂತರದಲ್ಲಿ ಟ್ರಕ್​ ಚೆನ್ನೈ-ತಿರುಪತಿ ಹೆದ್ದಾರಿಯಲ್ಲಿ ಪತ್ತೆಯಾಗಿದೆ.
ಟ್ರಕ್​ನಲ್ಲಿದ್ದ ಅರ್ಧಕ್ಕರ್ಧ ಮೊಬೈಲ್​ಗಳನ್ನು ದರೊಡೆಕೋರರು ಲೂಟಿ ಮಾಡಿದ್ದಾರೆ. ಮತ್ತೊಂದು ವಾಹನದಲ್ಲಿ ಮೊಬೈಲ್​ಗಳನ್ನು ತುಂಬಿಕೊಂಡು ಟ್ರಕ್​ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಇದನ್ನೂ ಓದಿ:ಮಧ್ಯರಾತ್ರಿ ನಡೆದ ಡಬಲ್​ ಮರ್ಡರ್​ಗೆ ಬೆಚ್ಚಿಬಿದ್ದ ಹುಬ್ಬಳ್ಳಿ ಜನತೆ: ಯುವಕರಿಬ್ಬರ ಬರ್ಬರ ಹತ್ಯೆ
ಟ್ರಕ್​​ನಲ್ಲಿ 12 ಕೋಟಿ ಮೌಲ್ಯದ 15 ಸಾವಿರ ಮೊಬೈಲ್​ ಫೋನ್​ಗಳಿದ್ದವು. ಅದರಲ್ಲಿ ಆರು ಕೋಟಿ ಮೌಲ್ಯದ ಮೊಬೈಲ್​ ಫೋನ್​ಗಳನ್ನು ಲೂಟಿ ಮಾಡಲಾಗಿದೆ ಎಂದು ತದನಂತರದ ಪೊಲೀಸ್​ ತನಿಖೆಯಲ್ಲಿ ಬಯಲಾಗಿದೆ. ಅಂತಾರಾಜ್ಯ ಗ್ಯಾಂಗ್​ನಿಂದ ಈ ಕೃತ್ಯ ನಡೆದಿರುವ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.(ಏಜೆನ್ಸೀಸ್​)
ಲವ್​ ಜಿಹಾದ್​ಗೆ ಕುರೂಪಿಯಾದಳಾ ಈ ಸುಂದರಿ: ಮಾಡೆಲ್ ಫೋಟೋ ವೈರಲ್​ ಹಿಂದಿನ ಮರ್ಮವೇನು?​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + twelve =
Remember me
