ನವದೆಹಲಿ:ಕೇಂದ್ರ ಸರ್ಕಾರ ಹೆದ್ದಾರಿ ಟೋಲ್ ನೀತಿಯನ್ನು ಪರಿಷ್ಕರಿಸುತ್ತಿದ್ದು, ಅದರ ಪ್ರಕಾರ ವಾಹನದ ಗಾತ್ರ ಮತ್ತು ಅದು ಸಂಚರಿಸಿರುವ ದೂರವನ್ನು ಆಧರಿಸಿ ಟೋಲ್ ದರವನ್ನು ನಿಗದಿಪಡಿಸಲಿದೆ.
ಜನರು ತಾವು ಬಳಸಿದ ವಿದ್ಯುಚ್ಛಕ್ತಿಯ ಮೊತ್ತವನ್ನು ಪಾವತಿಸುವಂತೆಯೇ ವಾಹನದ ಗಾತ್ರ ಮತ್ತು ರಸ್ತೆ ಮೂಲಸೌಕರ್ಯಗಳ ಮೇಲಿನ ವಾಹನದ ಸಂಭಾವ್ಯ ಒತ್ತಡ ಆಧರಿಸಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪಾವತಿಸುವ ಟೋಲ್ ಮೊತ್ತವನ್ನು ನಿರ್ಧರಿಸಬಹುದಾಗಿದೆ. ಟೋಲ್ ಸಂಗ್ರಹಣೆ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಳ್ಳುತ್ತಿದೆ. ವಿಭಿನ್ನ ಗಾತ್ರದ ವಾಹನಗಳು ರಸ್ತೆ ಮೂಲಸೌಕರ್ಯಗಳ ಮೇಲೆ ವಿಭಿನ್ನ ಒತ್ತಡವನ್ನು ಬೀರುತ್ತವೆ. ಇದರ ಅನುಸಾರವೇ ಜನರು ಟೋಲ್ ಪಾವತಿಸಬೇಕು ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.
ಪ್ರಸ್ತುತವಿರುವ ಟೋಲಿಂಗ್ ನೀತಿಯು ವಾಹನವು ಹೊಂದಿರುವ ಚಕ್ರಗಳನ್ನು ಆಧರಿಸಿದೆ. ಆದರೆ ಹೊಸ ನೀತಿ ಅಡಿಯಲ್ಲಿ ಹೆದ್ದಾರಿಗಳಲ್ಲಿ ವಾಹನವು ಕ್ರಮಿಸುವ ನಿಜವಾದ ಸಮಯ ಮತ್ತು ದೂರ ಗಾತ್ರ ಮತ್ತು ತೂಕವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ವಾಹನವು ಹೆದ್ದಾರಿಯಲ್ಲಿ ಎಷ್ಟು ಜಾಗವನ್ನು ಆಕ್ರಮಿಸುತ್ತದೆ ಮತ್ತು ರಸ್ತೆಯ ಮೂಲಸೌಕರ್ಯಗಳ ಮೇಲೆ ಎಷ್ಟು ಭಾರ ಇರಿಸುತ್ತದೆ ಎಂಬುದನ್ನು ಸಹ ಲೆಕ್ಕಾಚಾರ ಹಾಕಿ ಟೋಲ್ ವಿಧಿಸಲಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಹೆಚ್ಚು ಭಾರದ ವಾಹನಗಳಿಂದ ರಸ್ತೆಗಳು ವೇಗವಾಗಿ ಸವೆದುಹೋಗುತ್ತಿರುವುದು ಕೂಡ ಸರ್ಕಾರ ಈ ಕ್ರಮ ಕೈಗೊಳ್ಳಲು ಒಂದು ಕಾರಣ ಎನ್ನಲಾಗಿದೆ. ಕೇಂದ್ರ ಸಾರಿಗೆ ಸಚಿವಾಲಯವು ಈ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸುತ್ತಿದ್ದು, ದೆಹಲಿ-ಮುಂಬೈ ಕಾರಿಡಾರ್ ಸೇರಿದಂತೆ ಮುಂಬರುವ ಗ್ರೀನ್​ಫೀಲ್ಡ್ ಎಕ್ಸ್​ಪ್ರೆಸ್​ವೇ ಯೋಜನೆಗಳಲ್ಲಿ ಈ ಹೊಸ ಟೋಲ್ ನೀತಿಯನ್ನು ಅಳವಡಿಸುವ ಸಾಧ್ಯತೆ ಇದೆ. ಟೋಲ್ ದರ ನಿಗದಿಪಡಿಸುವ ಸಂಬಂಧ ಸಾರಿಗೆ ಸಚಿವಾಲಯವು ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಎಚ್​ಯುು)-ವಾರಾಣಸಿಯ ನೆರವು ಕೋರಿದೆ.
ಪ್ರಸ್ತುತ ಫಾಸ್ಟಾ್ಯಗ್ ಆಧರಿತ ವ್ಯವಸ್ಥೆಯಿಂದ ಜಿಪಿಎಸ್ ವ್ಯವಸ್ಥೆಗೆ ಟೋಲಿಂಗ್ ಪಾವತಿ ವಿಧಾನ ಬದಲಾಗಲಿದೆ. ಇದರಿಂದ ಹೆದ್ದಾರಿಗಳಲ್ಲಿ ಚಿಕ್ಕ ಮತ್ತು ಹಗರು ವಾಹನಗಳ ಮಾಲೀಕರು ದೊಡ್ಡದಾದ ಮತ್ತು ಭಾರದ ವಾಹನಗಳನ್ನು ಹೊಂದಿರುವ ಮತ್ತು ಹೆಚ್ಚು ದೂರವನ್ನು ಕ್ರಮಿಸುವವರಿಗಿಂತ ಕಡಿಮೆ ಟೋಲ್ ಪಾವತಿಸುತ್ತಾರೆ ಎಂದು ಈ ಹಿಂದೆ ವರದಿಯಾಗಿತ್ತು. ಈ ಮಧ್ಯೆ, 60 ಕಿ.ಮೀ ಅಂತರದಲ್ಲಿರುವ ಸಂಗ್ರಹಣಾ ಕೇಂದ್ರಗಳಲ್ಲಿ ಟೋಲ್ ತೆರಿಗೆ ವಿಧಿಸಲಾಗುವುದಿಲ್ಲ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ವರ್ಷದ ಮಾರ್ಚ್​ನಲ್ಲಿ ಹೇಳಿದ್ದರು. ಈ ಸಡಿಲಿಕೆಯು ಮೂರು ತಿಂಗಳ ಅವಧಿ ನಂತರ ಅಂದರೆ ಜೂನ್​ನಿಂದ ಜಾರಿಗೆ ಬರಲಿದೆ ಎಂದು ಹೇಳಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 6 =
Remember me
