ಕೆಲವು ಮಂಗಳಮುಖಿಯರುರೈಲಿನಲ್ಲಿ ಬಂದು ಪ್ರಯಾಣಿಕರಿಂದ ಹಣ ಕೇಳುವುದು ಸಾಮಾನ್ಯವಾಗಿದೆ. ಯಾರೂ ಕೆಲಸ ಕೊಡುವುದಿಲ್ಲ ಅಂತಾ ಬದುಕಲು ಬೇರೆ ದಾರಿ ಇಲ್ಲದೆ ಹಣ ಕೇಳುತ್ತಾರೆ. ಕೆಲವೊಮ್ಮೆ ಹಣ ಕೊಡದಿದ್ದರೆ ಅಸಭ್ಯವಾಗಿಯೂ ವರ್ತಿಸುವ ಮೂಲಕ ಟೀಕೆಗು ಗುರಿಯಾಗುತ್ತಾರೆ. ರೈಲುಗಳಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿವೆ. ಆದರೆ, ಇಂತಹ ಘಟನೆ ನಗೆಪಾಟಲಿಗೀಡಾದರೂ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಇದನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆಯೂ ಇದೆ.
ವಿಡಿಯೋದಲ್ಲಿ ಏನಿದೆ?ವಿಡಿಯೋದಲ್ಲಿ ರೈಲಿನ ಒಳಗೆ ಕೆಲವು ಯುವಕರು ಬಾತ್​ರೂಮ್​ ಬಾಗಿಲಿನ ಬಳಿ ನಿಂತಿದ್ದಾರೆ. ಅಲ್ಲಿ ಓರ್ವ ಮಂಗಳಮುಖಿ ಕೈ ಚಪ್ಪಾಳೆ ತಟ್ಟುತ್ತಾ ಯುವಕರ ಬಳಿಕ ಹಣ ಕೇಳುತ್ತಾಳೆ. ಆದರೆ, ಅಷ್ಟರಲ್ಲಿ ಏನಾಯಿತೋ ಬಾತ್​ರೂಂ ಪಕ್ಕದಲ್ಲೇ ನಿಂತಿದ್ದ ಹುಡುಗನನ್ನು ಬಲವಂತವಾಗಿ ಒಳಗಡೆ ಎಳೆದುಕೊಂಡು ಲಾಕ್ ಮಾಡಿಕೊಳ್ಳುತ್ತಾಳೆ. ಹೊರಗಡೆ ಇದ್ದ ಕೆಲವು ಯುವಕರು ಎಷ್ಟೇ ಹೊತ್ತು ಬಡಿದರೂ ಬಾಗಿಲು ತೆಗೆಯುವುದೇ ಇಲ್ಲ. ಸ್ವಲ್ಪ ಹೊತ್ತಿನ ನಂತರ ಪ್ಯಾಂಟ್​ ಸರಿಮಾಡಿಕೊಂಡು ಯುವಕ ಹೊರಬರುತ್ತಾನೆ. ಸ್ವಲ್ಪ ಸಮಯದ ಬಳಿಕ ಮಂಗಳಮುಖಿಯು ಹೊರಬಂದು ಮತ್ತೊಂದು ಬೋಗಿಗೆ ಹೋಗುತ್ತಾಳೆ.
Boys are not safe in public placespic.twitter.com/5GS1SB7E7g
— Kattappa (@GANESHV81214930)April 4, 2024

ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ ಎಂದು ವರದಿಯಾಗಿದೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಆದರೆ, ಕೆಲವು ನೆಟ್ಟಿಗರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ರೈಲುಗಳಲ್ಲಿ ಭದ್ರತೆಯ ಕೊರತೆ ಇದೆ. ಮಂಗಳಮುಖಿಯರು ಮಿತಿ ಮೀರಿ ವರ್ತಿಸುತ್ತಿದ್ದಾರೆ ಎಂದು ಕೆಲವರು ಹೇಳಿಕೊಳ್ಳುತ್ತಾರೆ.
ರೈಲಿನಲ್ಲಿ ಮಾತ್ರವಲ್ಲದೆ ಮದುವೆ ಮನೆಯಲ್ಲಿ, ಯಾವುದಾದರೂ ಶುಭ ಸಮಾರಂಭಗಳಲ್ಲಿ ಹತ್ತು ಹದಿನೈದು ಜನ ಬಂದು ಸಾವಿರಾರು ಹಣಕ್ಕೆ ಬೇಡಿಕೆ ಇಡುತ್ತಾರೆ, ಕೊಡದಿದ್ದರೆ ಮನಬಂದಂತೆ ವರ್ತಿಸುತ್ತಾರೆ. ಬಸ್​ಗಳಲ್ಲಿಯೂ ಮಂಗಳಮುಖಿಯರ ಕಾಟಕ್ಕೆ ಬೇಸತ್ತ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ನಮಗೆ ಕಾಮೆಂಟ್​ ಮೂಲಕ ತಿಳಿಸಿ.(ಏಜೆನ್ಸೀಸ್​)
ವಿಚ್ಛೇದಿತ ನಿರ್ಮಾಪಕನ ಜತೆ ಮದುವೆ: ಸೌತ್​ ಬ್ಯೂಟಿ ಅಂಜಲಿ ಶಾಕಿಂಗ್​ ಕಾಮೆಂಟ್​ ವೈರಲ್​

ಮನೆ ಕಟ್ಟುವವರಿಗೆ ಶುಭ ಸುದ್ದಿ: ದುಬಾರಿ ಮರಳಿಗೆ ಬದಲು ಅಗ್ಗದ ಬದಲಿ ವಸ್ತು ಕಂಡುಹಿಡಿದ ವಿಜ್ಞಾನಿಗಳು!

ಆಗೋದೆಲ್ಲ ಒಳ್ಳೆಯದಕ್ಕೇ… ಪ್ರೀತಿ ಝಿಂಟಾ ಪಾಲಿಗೆ ಈ ಮಾತು ನಿಜವಾಯ್ತು, ಆಕೆಯ ಎಡವಟ್ಟೇ ವರವಾಯ್ತು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 + eight =
Remember me
