ನವದೆಹಲಿ:ಎರಡು ದಿನಗಳ ಹಿಂದಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ರೆಪೊ ದರ ಹೆಚ್ಚಿಸಿದ ಪರಿಣಾಮ ಸಾಲದ ಕಂತುಗಳ ಮೊತ್ತ ಹೆಚ್ಚಾಗಿದೆ. ಇದು ಇಷ್ಟಕ್ಕೆ ನಿಲ್ಲದು. ಡಿಸೆಂಬರ್​ನಲ್ಲಿ ಮತ್ತೊಂದು ಶಾಕ್​ಗೆ ಸಜ್ಜಾಗಿ ಎನ್ನುತ್ತಿದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವರದಿ. ರೆಪೊ ದರ ಡಿಸೆಂಬರ್​ನಲ್ಲಿ 35 ಮೂಲಾಂಶ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಎಸ್​ಬಿಐ ಅಂದಾಜಿಸಿದೆ. ಸಾಲದ ಮೇಲಿನ ಬಡ್ಡಿ ದರ 50 ಮೂಲಾಂಶ ಹೆಚ್ಚಳ ಪರಿಣಾಮ ಪ್ರಸ್ತುತ ರೆಪೊ ದರ ಶೇ.5.90ಕ್ಕೆ ಏರಿಕೆಯಾಗಿದೆ.
ಕಳೆದ ಮೇ ತಿಂಗಳಿಂದ ರೆಪೊ ದರ 5 ಬಾರಿ ಪರಿಷ್ಕರಣೆ ಆಗಿರುವ ಕಾರಣ ಪ್ರಸಕ್ತ ಆರ್ಥಿಕ ಸಾಲಿನ ಪ್ರಥಮ ತ್ರೖೆಮಾಸಿಕದಲ್ಲಿ ಹೊಸ ಯೋಜನೆಗಳ ಘೋಷಣೆ ಕಡಿಮೆ ಆಗಿತ್ತು. 2021-22ನೇ ಸಾಲಿನ ಕಡೆಯ ತ್ರೖೆಮಾಸಿಕದಲ್ಲಿ 5.75 ಲಕ್ಷ ಕೋಟಿ ರೂ. ಮೊತ್ತದ ಯೋಜನೆಗಳು ನಡೆದಿದ್ದವು. ಆದರೆ, ಈಗ 4.35 ಲಕ್ಷ ಕೋಟಿ ರೂ. ಯೋಜನೆಗಳು ಮಾತ್ರ ಚಾಲ್ತಿಯಲ್ಲಿವೆ. ಈ ಬೆಳವಣಿಗೆಗೆ ಏರುತ್ತಿರುವ ಹಣದುಬ್ಬರವೇ ಕಾರಣ ಎಂದು ಎಸ್​ಬಿಐ ಇಕೋರ್ಯಾಪ್ ವರದಿ ತಿಳಿಸಿದೆ.
ಹಣದುಬ್ಬರ ಶೇ. 5.2ಕ್ಕೆ ಇಳಿಕೆ:ಇನ್ನೊಂದೆಡೆ, ಕೊಂಚ ಆಶಾದಾಯಕ ಸಂಗತಿ ಎಂದರೆ 2023ರ ಏಪ್ರಿಲ್​ನಿಂದ ಪ್ರಾರಂಭವಾಗುವ ಮುಂದಿನ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ಶೇ.5.2ಕ್ಕೆ ಇಳಿಯಲಿದೆ ಎಂದು ಆರ್​ಬಿಐ ಅಂದಾಜಿಸಿದೆ. ಮಳೆ, ಜಾಗತಿಕ ಪೂರೈಕೆ ಸರಪಳಿಗಳು ಮತ್ತಷ್ಟು ಸಹಜ ಸ್ಥಿತಿಗೆ ಬರುತ್ತಿರುವ ಹಿನ್ನೆಲೆ ಚಿಲ್ಲರೆ ಹಣದುಬ್ಬರ ದರ ಕಡಿಮೆಯಾಗಲಿದೆ ಆದರೆ, ಈ ವರ್ಷದ ಅಕ್ಟೋಬರ್ ತ್ರೖೆಮಾಸಿಕದಲ್ಲಿ ಹಣದುಬ್ಬರ ಪ್ರಮಾಣ ಶೇ.6.7ರಷ್ಟು ಇರಲಿದೆ ಎಂದು ಆರ್​ಬಿಐ ವಿತ್ತೀಯ ನೀತಿ ವರದಿಯಲ್ಲಿ ತಿಳಿಸಿದೆ. ಚಿಲ್ಲರೆ ಹಣದುಬ್ಬರವನ್ನು ಶೇ.2-6ರ ವ್ಯಾಪ್ತಿಯಲ್ಲಿ ಕಾಯ್ದುಕೊಳ್ಳುವುದು ಅಗತ್ಯವಾಗಿದ್ದರೂ, ಆರ್​ಬಿಐಗೆ ಇದು ಸಾಧ್ಯವಾಗಿಲ್ಲ. ಆದಾಗ್ಯೂ ರಷ್ಯಾ-ಯೂಕ್ರೇನ್ ಯುದ್ಧದಿಂದ ಉದ್ಭವಿಸಿದ ಉದ್ವಿಗ್ನತೆಯಿಂದ ಪೂರೈಕೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದ್ದರಿಂದ 2022ರ ಜನವರಿಯಿಂದ ಚಿಲ್ಲರೆ ಹಣದುಬ್ಬರವು ಆರ್​ಬಿಐ ಅಂದಾಜಿಸಿಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮುಂದುವರಿಯುತ್ತಿದೆ.
80 ಡಾಲರ್​ಗಿಳಿದ ಕಚ್ಚಾ ತೈಲ ಬೆಲೆ:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಮುಖದ ಹಾದಿಯಲ್ಲಿ ಸಾಗಿದೆ. ವಾರದ ಕೊನೆಯ ವಹಿವಾಟಿನ ದಿನವಾದ ಶುಕ್ರವಾರ ಬ್ರೆಂಟ್ ಕಚ್ಚಾ ತೈಲದ ದರ 1.62 ಡಾಲರ್​ನಷ್ಟು ಇಳಿಕೆಯಾಗಿ 85.56 ರಲ್ಲಿ ವಹಿವಾಟು ನಡೆಸುತ್ತಿದೆ. ಇತ್ತ ವೆಸ್ಟ್ ಟೆಕ್ಸಾಸ್ ಇಂಟರ್​ವಿುೕಡಿಯೇಟ್ (ಡಬ್ಲುಟಿಐ) ಕಚ್ಚಾ ತೈಲದ ದರ ಪ್ರತಿ ಬ್ಯಾರೆಲ್​ಗೆ ಶೇ.1.83ರಷ್ಟು ಇಳಿಕೆಯಾಗಿ, 80 ಡಾಲರ್​ಗಿಂತಲೂ ಕೆಳಗೆ ಬಂದಿದೆ. ಅಂದರೆ ಪ್ರತಿ ಬ್ಯಾರೆಲ್​ಗೆ 79.74 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿದೆ.
ವಿಂಡ್​ಫಾಲ್ ತೆರಿಗೆ ಇಳಿಕೆ:ದೇಶೀಯವಾಗಿ ಉತ್ಪಾದಿಸುವ ಕಚ್ಚಾ ತೈಲದ ಮೇಲಿನ ವಿಂಡ್​ಫಾಲ್ ತೆರಿಗೆಯನ್ನು ಕೇಂದ್ರ ಸರ್ಕಾರವು ಪ್ರತಿ ಟನ್​ಗೆ 10,500 ರೂ.ನಿಂದ 8 ಸಾವಿರ ರೂ.ಗೆ ಇಳಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆ ಆಗಿದ್ದರೂ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ಹಿಂದೆ ಆಗಿರುವ ನಷ್ಟಗಳನ್ನು ತೈಲ ಕಂಪನಿಗಳು ಈಗ ತುಂಬಿಕೊಳ್ಳುತ್ತಿವೆ. ಜತೆಗೆ ರೂಪಾಯಿ ಮೌಲ್ಯ ಕುಸಿತದಿಂದಾಗಿ ಭಾರತಕ್ಕೆ ಕಚ್ಚಾತೈಲ ಆಮದು ದುಬಾರಿಯಾಗಿದೆ.
ಕಾಂತಾರ: ಶುಕ್ರವಾರಕ್ಕೂ ಭಾನುವಾರಕ್ಕೂ ಅಜಗಜಾಂತರ; ಭರ್ಜರಿ ರೆಸ್ಪಾನ್ಸ್ ಬಗ್ಗೆ ಇಲ್ಲಿದೆ ಅಧಿಕೃತ ಮಾಹಿತಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + five =
Remember me
