ಮಿರ್ಜಾಪುರ (ಉತ್ತರ ಪ್ರದೇಶ):ನಿನ್ನೆಯಿಂದ ಎಲ್ಲೆಲ್ಲೂ ಒಂದೇ ಸುದ್ದಿ. ಅದು ಮದ್ಯ ಪ್ರೇಮಿಗಳದ್ದು. ಬಾರ್​ಗಳ ಮುಂದೆ ಕಿಲೋಮೀಟರ್​ ಗಟ್ಟಲೆ ಸಾಲು ನಿಂತು ಮದ್ಯಕ್ಕಾಗಿ ಹಪಹಪಿಸುತ್ತಿದ್ದ ಸಹಸ್ರಾರು ಮಂದಿಯದ್ದೇ ಎಲ್ಲೆಲ್ಲೂ ಸದ್ದು.
ಒಂದೂವರೆ ತಿಂಗಳಿನಿಂದ ಮದ್ಯದ ಕನಸು ಕಾಣುತ್ತಿದ್ದ ಈ ಪ್ರೇಮಿಗಳ ಪೈಕಿ ನಿನ್ನೆ ಹಲವರು ಮಾಡಿರುವ ಆವಾಂತರಗಳು ಅಷ್ಟಿಷ್ಟಲ್ಲ. ಅದೇ ಮತ್ತೊಂದೆಡೆ, ಜೀವನದಲ್ಲಿ ಎಂದೂ ತೋರಿಸದಷ್ಟು ಸಹನೆಯಿಂದ ದಿನಗಟ್ಟಲೆ ಕಾದವರೂ ಇದ್ದಾರೆ. ಯುವತಿಯರು, ಮಹಿಳೆಯರೂ ಕೆಲವು ಬಾರ್​ಗಳ ಮುಂದೆ ಕಾಣಿಸಿಕೊಂಡಿರುವುದು ಕೂಡ ಭಾರಿ ಸುದ್ದಿಯಾಗಿದೆ.
ಇದನ್ನೂ ಓದಿ:ಬಾರ್​ಗಳ ಮುಂದೆ ಮಹಿಳೆಯರದ್ದೂ ಕಾರುಬಾರು!
ಇಂದು ಒಂದೆಡೆಯಾದರೆ, ಇನ್ನೊಂದೆಡೆ ಮದ್ಯದಂಗಡಿಯನ್ನು ತೆರೆಯಲಾಗದೇ ಭಾರಿ ಲಾಸ್​ನಲ್ಲಿದ್ದ ಮದ್ಯದಂಗಡಿ ಮಾಲೀಕರಿಗಂತೂ ಈಗ ಹಬ್ಬದ ದಿನಗಳು. ಆದರೆ ತಿಂಗಳಾನುಗಟ್ಟಲೆ ಮದ್ಯದ ಮುಖ ಕಾಣದೇ ಕಂಗಾಲಾಗಿದ್ದ ಮದ್ಯವ್ಯಸನಿಗಳ ಆತುರ ಸ್ವಭಾವವನ್ನು ಬಲ್ಲ ಮಾಲೀಕರಿಗೆ ನೂಕುನುಗ್ಗಲಾಗದಂತೆ ಎಚ್ಚರಿಕೆ ವಹಿಸುವುದು ಬಹು ದೊಡ್ಡ ಸವಾಲಾಗಿತ್ತು.
ಲಾಕ್​ಡೌನ್​ ನಿಯಮ ಪಾಲನೆ ಮಾಡದಿದ್ದರೆ ಪೊಲೀಸರು ಅಂಗಡಿ ಬಂದ್​ ಮಾಡಿಸುವ ಭಯವೂ ಇದ್ದುದರಿಂದ ತಮ್ಮ ಗ್ರಾಹಕರನ್ನು ಸರಿಯಾಗಿ ಇಟ್ಟುಕೊಳ್ಳುವುದು ಅವರಿಗೆ ಚಿಂತೆಯೇ ಆಗಿತ್ತು.
ಇದನ್ನೂ ಓದಿ:ರಾಜ್ಯದಲ್ಲಿ 8 ಹೊಸ ಸೋಂಕು ಪ್ರಕರಣ: ಎಲ್ಲೆಲ್ಲಿ ಎಷ್ಟೆಷ್ಟು?
ಆದ್ದರಿಂದ ಗ್ರಾಹಕರನ್ನು ಸೆಳೆದು ಇಟ್ಟುಕೊಳ್ಳುವ ಸಂಬಂಧ ಮಾಲೀಕರು ಕೆಲವೊಂದು ಟೆಕ್ನಿಕ್​ ಬಳಸುತ್ತಿದ್ದರು. ಈ ಪೈಕಿ ಉತ್ತರ ಪ್ರದೇಶದ ಮಿರ್ಜಾಪುರದ ಬಾರ್​ನ ಮಾಲೀಕ ಬಳಸಿದ ತಂತ್ರಗಾರಿಕೆ ಭಾರಿ ಸುದ್ದಿ ಮಾಡಿದ್ದು, ಇದರ ವೀಡಿಯೋ ವೈರಲ್​ ಆಗಿದೆ.
ಅದೇನೆಂದರೆ ಹಲವಾರು ಗಂಟೆಗಳವರೆಗೆ ಬಿಸಿಲನ್ನೂ ಎಣಿಸದೇ ಕಿಲೋಮೀಟರ್​ಗಟ್ಟಲೆ ನಿಂತಿದ್ದ ಮದ್ಯಪ್ರೇಮಿಗಳ ಸಹನೆ ಕಂಡ ಮಾಲೀಕ ತಮ್ಮ ಗ್ರಾಹಕರ ಮೇಲೆ ಹೂವಿನ ಪಕಳೆಯನ್ನು ಹಾಕುವ ಮೂಲಕ ಸ್ವಾಗತಿಸಿದ್ದಾನೆ.
ಇದನ್ನೂ ಓದಿ:ಕ್ವಾರಂಟೈನ್​ನಲ್ಲೇ ದಾಖಲೆ ಬರೆದುಬಿಟ್ಟ ಈ ಯುವಕ!
ಈ ಗ್ರಾಹಕರಿಂದಲೇ ನಮಗೆ ಲಾಭವಾಗುತ್ತದೆ. ಇವರೆಲ್ಲಾ ತುಂಬಾ ಸಹನೆಯಿಂದ ವರ್ತಿಸಿದ್ದಾರೆ. ಸಾಮಾಜಿಕ ಅಂತರ ಕಾಪಾಡಬೇಕಿದ್ದ ಹಿನ್ನೆಲೆಯಲ್ಲಿ, ಸಾಲು ತುಂಬಾ ಉದ್ದವಾಗಿತ್ತು. ಆದ್ದರಿಂದ ಇವರನ್ನು ಖುಷಿಪಡಿಸಲು ಇವರಿಗೆ ಪುಷ್ಪನಮನ ಸಲ್ಲಿಸಿದ್ದೇನೆ ಎಂದು ಬಾರ್​ ಮಾಲೀಕ ಹೇಳಿದ್ದಾನೆ.(ಏಜೆನ್ಸಿಸ್​)
https://twitter.com/scribe_prashant/status/1257212136041771009
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:eight + 5 =
Remember me
