ಪುಣೆ:ಮಹಾರಾಷ್ಟ್ರದ ವಾಕಡ್​ ನಗರದಲ್ಲಿ ನಡೆದಿರುವ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಬಹುತೇಕ ಜನರು ಸಮಯ ಉಳಿಸಲೋ ಅಥವಾ ಆತುರದಿಂದಲೋ ದೇವಸ್ಥಾನದ ಹೊರಭಾಗದಲ್ಲೇ ನಿಂತು ಕೈಮುಗಿದು ಮುಂದೆ ತೆರಳುವುದನ್ನು ನೋಡಿದ್ದೀರಾ, ಅಂಥವರು ಈ ವಿಡಿಯೋ ನೋಡಿದ್ರೆ ಶಾಕ್​ ಆಗೋದು ಖಂಡಿತ.
ಸ್ಕೂಟಿ ಮೇಲೆ ಕುಳಿತ ಯುವತಿಯೊಬ್ಬಳು ಸ್ಕೂಟರ್​ ಸಮೇತವಾಗಿ ಇದ್ದಕ್ಕಿದಂತೆ ಶಿವನ ದೇವಸ್ಥಾನ ಒಳಗೆ ಹೋಗಿ ಬೀಳುವ ವಿಡಿಯೋ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡು, ಇದೀಗ ಎಲ್ಲೆಡೆ ಸುದ್ದಿಯಾಗಿದೆ.
ವಿಡಿಯೋದಲ್ಲಿ ಏನಿದೆ?:ದೇವಸ್ಥಾನ ದ್ವಾರದ ಮುಂಭಾಗದಲ್ಲಿ ಸ್ಕೂಟರ್​ ಮೇಲೆ ಕುಳಿತ ಯುವತಿ, ದೇವರಿಗೆ ಕೈಮುಗಿದ ಬಳಿಕ ಮುಖಕ್ಕೆ ಬಟ್ಟೆಕೊಂಡು ಹೊರಡಲು ತಯಾರಾಗುತ್ತಾಳೆ. ಈ ವೇಳೆ ಸ್ಕೂಟರ್​ ಸ್ಟಾರ್ಟ್​ ಮಾಡಿ ಕ್ಲಚ್​ ಹಿಡಿದು ಹೊರಡಬೇಕು ಎನ್ನುವಷ್ಟರಲ್ಲಿ ನಿಯಂತ್ರಣ ಕಳೆದುಕೊಂಡೋ ಅಥವಾ ಜಾದುವಿನಿಂದಲೋ ಸ್ಕೂಟರ್​ ಸಮೇತವಾಗಿ ಶಿವನ ದೇವಸ್ಥಾನದ ಒಳಗೆ ಹೋಗಿ ಬೀಳುತ್ತಾಳೆ. ಕೆಳಗೆ ಬಿದ್ದ ಸ್ಕೂಟರ್​ ದೇವಸ್ಥಾನದ ಒಳಗಿನ ನಂದಿ ವಿಗ್ರಹಕ್ಕೆ ಡಿಕ್ಕಿ ಹೊಡೆದು ನಿಲ್ಲುತ್ತದೆ. ಯುವತಿ ದೇವರಿಗೆ ಅಡ್ಡ ಬೀಳುವ ರೀತಿ ಕೆಳಗೆ ಬೀಳುತ್ತಾಳೆ. ಘಟನೆ ನೋಡಿ ಸ್ಥಳೀಯ ಮಹಿಳೆ ಯುವತಿಯ ನೆರವಿಗೆ ಧಾವಿಸುತ್ತಾಳೆ. ಆದರೆ, ಯುವತಿಯೇ ಸ್ಕೂಟರ್​ ಅನ್ನು ತೆಗೆದುಕೊಂಡು ದೇವಸ್ಥಾನದಿಂದ ಹೊರಡುತ್ತಾಳೆ.
ಇನ್ನೂ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಇದನ್ನು ಕಂಡ ನೆಟ್ಟಿಗರು ದೇವಸ್ಥಾನ ಹೊರಗಿನಿಂದಲೇ ನಮಿಸಿ ಹೋಗುವವರನ್ನು ದೇವರು ಇದೇ ರೀತಿ ಕರೆಸಿಕೊಳ್ಳುತ್ತಾನೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.(ಏಜೆನ್ಸೀಸ್​)

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:19 − nine =
Remember me
