ದಿಸ್ಪುರ:ಹಿಮಾ ದಾಸ್​ ಬಗ್ಗೆ ನಿಮಗೆಲ್ಲರಿಗೂ ಗೊತ್ತಿರುತ್ತದೆ. ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪರ ಮೊದಲ ಚಿನ್ನದ ಪದಕ ಗೆದ್ದ ಮೊದಲ ಅಥ್ಲೀಟ್ ಎಂಬ ಕೀರ್ತಿಗೆ ಭಾಜನರಾದ ಓಟಗಾರ್ತಿ ಆಕೆ. ಇದೀಗ ಅದೇ ಹಿಮಾದಾಸ್​ಗೆ ಮತ್ತೊಂದು ವಿಶಿಷ್ಟ ಸ್ಥಾನ ಸಿಕ್ಕಿದೆ.
ಹಿಮಾ ದಾಸ್​ರನ್ನು ಅಸ್ಸಾಂ ಸರ್ಕಾರ ಉಪ ಪೊಲೀಸ್​ ವರಿಷ್ಠಾಧಿಕಾರಿಯಾಗಿ (ಡಿಎಸ್​ಪಿ) ನೇಮಿಸಿದೆ. ಈ ಕುರಿತಾಗಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಟ್ವಿಟ್ಟರ್​ನಲ್ಲಿ ಮಾಹಿತಿ ನೀಡಿದ್ದಾರೆ. ಅಸ್ಸಾಂನ ಸರ್ಬಾನಂದ ಸೋನೊವಾಲ್ ಸರ್ಕಾರವು ಹಿಮಾ ದಾಸ್​ ಅವರನ್ನು ಡಿಎಸ್​ಪಿಯಾಗಿ ನೇಮಿಸಲು ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.
ಹಿಮಾ ದಾಸ್​ ಅವರ ಕ್ರೀಡಾ ಭವಿಷ್ಯದ ಬಗ್ಗೆಯೂ ಮಾತನಾಡಿರುವ ಅವರು, “ಅನೇಕರು ಹಿಮಾ ಅವರ ಕ್ರೀಡಾ ವೃತ್ತಿಜೀವನದ ಬಗ್ಗೆ ಏನು? ಎಂದು ಕೇಳುತ್ತಿದ್ದಾರೆ. ಹಿಮಾ ಅವರು ಎನ್ಐಎಸ್ ಪಟಿಯಾಲದಲ್ಲಿ ಒಲಿಂಪಿಕ್ ಅರ್ಹತೆಗಾಗಿ ತರಬೇತಿ ಪಡೆಯುತ್ತಿದ್ದಾರೆ ಮತ್ತು ಭಾರತಕ್ಕಾಗಿ ಸ್ಪರ್ಧಿಸಲಿದ್ದಾರೆ. ನಮ್ಮ ಗಣ್ಯ ಕ್ರೀಡಾಪಟುಗಳು ವಿವಿಧ ಉದ್ಯೋಗಗಳಲ್ಲಿದ್ದಾರೆ ಮತ್ತು ಕ್ರೀಡೆಯನ್ನೂ ಮುಂದುವರಿಸುತ್ತಿದ್ದಾರೆ. ನಿವೃತ್ತಿಯ ನಂತರವೂ ಅವರು ಕ್ರೀಡೆಗಳನ್ನು ಉತ್ತೇಜಿಸುವುದನ್ನು ಮುಂದುವರಿಸುತ್ತಾರೆ.” ಎಂದು ಸ್ಪಷ್ಟನೆ ನೀಡಿದ್ದಾರೆ. (ಏಜೆನ್ಸೀಸ್​)
Well done! Assam Cabinet, headed by CM@sarbanandsonwalJi has decided to offer the post of DSP in Assam Police to sprinter queen@HimaDas8!pic.twitter.com/kfkFcYj4KE
— Kiren Rijiju (@KirenRijiju)February 10, 2021

Many people are asking, what about Hima's sports career? She is training for Olympic qualification at NIS Patiala & will keep running for India. Our elite Athletes are employed in various jobs yet continue to play. Even after retirement, they'll continue to promote sports.
— Kiren Rijiju (@KirenRijiju)February 11, 2021

‘ಜೈಲಲ್ಲಿ ನನ್ನ ರೇಪ್​ ಮಾಡಿದರು, ಕಿಸ್​ ಮಾಡೆಂದು ಹಿಂಸಿಸಿದರು!’ ಜೈಲುವಾಸದ ಅನುಭವ ಹಂಚಿಕೊಂಡ ಸಾಮಾಜಿಕ ಕಾರ್ಯಕರ್ತೆ

ಬ್ಯೂಟಿ ಕ್ವೀನ್​ ಜೆನ್ನಾ ಕಾಂಜೊ ಹತ್ಯೆ! ಲೆಬನನ್​​ನ ರಸ್ತೆ ರಸ್ತೆಗಳಲ್ಲಿ ಆರಂಭವಾದ ಹೋರಾಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
