ಶಿಮ್ಲಾ:ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಹಿಮಾಚಲ ಪ್ರದೇಶದ ಕಾಂಗ್ರೆಸ್​ ಸರ್ಕಾರ ಶುಕ್ರವಾರ ಆದಾಯ ತೆರಿಗೆದಾರರಿಗೆ ಪಾವತಿಸುವ ವ್ಯಕ್ತಿಗಳಿಗೆ ಉಚಿತ ವಿದ್ಯುತ್‌ ನೀಡದೇ ಇರುವ ಅಚ್ಚರಿಯ ನಿರ್ಧಾರ ಕೈಗೊಂಡಿದೆ.
ಇದನ್ನೂ ಓದಿ:ತಮಿಳುನಾಡನ್ನು ನಿರ್ಲಕ್ಷಿಸಲಾಗಿದೆ ಎಂಬ ಸಿಎಂ ಎಂಕೆ ಸ್ಟಾಲಿನ್ ಆರೋಪ ಸತ್ಯಕ್ಕೆ ದೂರವಾದುದು: ಕೇಂದ್ರ ಸರ್ಕಾರ
ಮುಖ್ಯಮಂತ್ರಿ ಸುಖುವಿಂದರ್‌ ಸಿಂಗ್‌ ಸುಕ್ಕು ಅವರ ನೇತೃತ್ವದಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಲ್ಲಾ ಆದಾಯ ತೆರಿಗೆ ಪಾವತಿದಾರರಿಗೆ ಅನುಕೂಲವಾಗುವ ಉಚಿತ ವಿದ್ಯುತ್ ಯೋಜನೆಯನ್ನು ಹಿಂಪಡೆಯಲು ನಿರ್ಧರಿಸಿದೆ. ಬಿಪಿಎಲ್‌ ಕಾರ್ಡ್‌ ಮತ್ತು ನಗರ ಪ್ರದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮಾಸಿಕ 125 ಯೂನಿಟ್‌ ಉಚಿತ ವಿದ್ಯುತ್‌ ಮುಂದುವರಿಯಲಿದೆ.
ವಿದ್ಯುತ್‌ ಸಬ್ಸಿಡಿಗೆ ಹಲವು ಷರತ್ತುಗಳನ್ನು ಈಗ ಹಾಕಲಾಗಿದೆ. ಒಂದು ಕುಟುಂಬದ ಒಂದು ಮೀಟರ್‌ಗೆ ಮಾತ್ರ ಇನ್ನು ಮುಂದೆ ಸಬ್ಸಿಡಿ ಸಿಗಲಿದೆ. ಉಚಿತ ವಿದ್ಯುತ್‌ ಪಡೆಯುವಸಂಪರ್ಕಕ್ಕೆ ಆಧಾರ್‌ ನಂಬರ್‌ ಜೊತೆಗೆ ಪಡಿತರ ಸಂಖ್ಯೆಯನ್ನು ಲಿಂಕ್‌ ಮಾಡಲಾಗುತ್ತದೆ.
ರಾಜ್ಯದಲ್ಲಿ 26 ಲಕ್ಷ ವಿದ್ಯುತ್ ಗ್ರಾಹಕರಿದ್ದು ಅವರಲ್ಲಿ 12 ಲಕ್ಷ ಜನರು 125 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುವ ಮೂಲಕ ಶೂನ್ಯ ವಿದ್ಯುತ್ ಬಿಲ್ ಪ್ರಯೋಜನ ಪಡೆಯುತ್ತಿದ್ದಾರೆ. ರಾಜ್ಯದ ಒಟ್ಟು ಸಾಲ 85,000 ಕೋಟಿ ರೂ. ದಾಟಿದ್ದು ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. ಹಿಮಾಚಲ ಪ್ರದೇಶದ ರಾಜ್ಯ ವಿದ್ಯುತ್‌ ಮಂಡಳಿ 2023-24 ಹಣಕಾಸು ವರ್ಷದಲ್ಲಿ 1,800 ಕೋಟಿ ರೂ. ನಷ್ಟ ಅನುಭವಿಸಿದೆ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಹಿಮಾಚಲ ಪ್ರದೇಶ ಕಾಂಗ್ರೆಸ್‌ ಎಲ್ಲರಿಗೂ 125 ಯೂನಿಟ್‌ ಉಚಿತ ವಿದ್ಯುತ್‌, ಹಳೆಯ ಪಿಂಚಣಿ ವ್ಯವಸ್ಥೆ ಸೇರಿದಂತೆ ಹಲವು ಭರವಸೆಗಳನ್ನು ಪ್ರಕಟಿಸಿತ್ತು.
ಸಚಿವ ಸಂಪುಟದ ನಿರ್ಧಾರದ ಕುರಿತು ಮಾತನಾಡಿದ ಕೈಗಾರಿಕಾ ಸಚಿವ ಹರ್ಷವರ್ಧನ್ ಚೌಹಾಣ್, ನೌಕರರಿಗೆ ಸಂಬಳ ನೀಡಲು ವಿದ್ಯುತ್ ಮಂಡಳಿಯ ಬಳಿ ಹಣವಿಲ್ಲ ಮತ್ತು ಹಿಂದಿನ ಸರ್ಕಾರವು ವಿದ್ಯುತ್ ಮೇಲೆ ನೀಡಿದ್ದ ಸಬ್ಸಿಡಿಯ ಹೊಣೆಗಾರಿಕೆಯನ್ನು ಸರ್ಕಾರವೂ ಪಾವತಿಸಬೇಕು ಎಂದು ಹೇಳಿದರು.
ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು, ಸ್ಪೀಕರ್, ಉಪಸಭಾಪತಿಗಳು, ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಸಂಸದರು, ಮಂಡಳಿಗಳ ಅಧ್ಯಕ್ಷರು/ಸಲಹೆಗಾರರು, ಒಎಸ್‌ಡಿಗಳು, ಎಲ್ಲಾ ವರ್ಗ 1 ಮತ್ತು ವರ್ಗ 2 ನೌಕರರಿಗೆ ಸಂಪೂರ್ಣ ಸಬ್ಸಿಡಿಯನ್ನು ರದ್ದುಗೊಳಿಸಲು ಒಪ್ಪಿಗೆ ನೀಡಲಾಗಿದೆ. IAS, IPS, HPS, HAS, ಅರಣ್ಯ ಮತ್ತು ನ್ಯಾಯಾಂಗ ಅಧಿಕಾರಿಗಳು, ಎಲ್ಲಾ ಸರ್ಕಾರಿ ವರ್ಗ A ಮತ್ತು ವರ್ಗ B ಗುತ್ತಿಗೆದಾರರು ಮತ್ತು ಎಲ್ಲಾ ಆದಾಯ ತೆರಿಗೆ ಪಾವತಿದಾರರು ಸೇರಿದಂತೆ ಸರ್ಕಾರ/ನಿಗಮಗಳು/ಮಂಡಳಿಗಳು ಈ ವ್ಯಾಪ್ತಿಗೆ ಬರಲಿವೆ.
ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಕಿಡಿ:ರಾಜ್ಯ ಸರ್ಕಾರ ಈ ನಡೆಯನ್ನು “ಜನವಿರೋಧಿ” ಎಂದು ಕರೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿವೆ. ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜೈ ರಾಮ್ ಠಾಕೂರ್, ಈ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದು, ಕಾಂಗ್ರೆಸ್ ತನ್ನ “ಸರ್ವಾಧಿಕಾರಿ” ಶೈಲಿಯ ಕಾರ್ಯಚಟುವಟಿಕೆಗೆ ಹೆಸರುವಾಸಿಯಾಗಿದೆ ಟೀಕಿಸಿದ್ದಾರೆ. “ಈ ರೀತಿಯ ಸರ್ವಾಧಿಕಾರ ದುರದೃಷ್ಟಕರ. ಚುನಾವಣೆಗೂ ಮುನ್ನ 300 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಪಕ್ಷ ಈಗಾಗಲೇ ನೀಡುತ್ತಿದ್ದ 125 ಯೂನಿಟ್‌ಗಳ ಸಬ್ಸಿಡಿಯನ್ನು ಕಿತ್ತುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶಾದ್ಯಂತ ಎಚ್​ಎಂಟಿ ಭೂಮಿ ಒತ್ತುವರಿ ತೆರವಿಗೆ ಕ್ರಮ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
