ಚಂಡೀಗಢ:ಗ್ರಾಮದ ಎಲ್ಲರಿಗೂ ಕರೊನಾ ಪಾಸಿಟಿವ್​ ಇರುವಾಗ ಅದೇ ಗ್ರಾಮದ ಒಬ್ಬನೇ ಒಬ್ಬ ವ್ಯಕ್ತಿಗೆ ಮಾತ್ರ ಸೋಂಕು ತಗುಲದ ಕುತೂಹಲಕಾರಿ ಪ್ರಕರಣ ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿಟಿ ಜಿಲ್ಲೆಯ ಗ್ರಾಮವೊಂದರಲ್ಲಿ ಕಂಡುಬಂದಿದೆ.
ಶೂನ್ಯಕ್ಕಿಂತ ಕಡಿಮೆ ತಾಪಮಾನ ಹಾಗೂ ಕರೊನಾಗೆ ಅನುಕೂಲಕರ ವಾತಾವರಣವಿರುವ ಹಿಮಬೆಟ್ಟಗಳ ವಲಯದಲ್ಲೇ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಥೋರಂಗ್​ ಗ್ರಾಮ ಎದುರಿಸಿದೆ. ಇಡೀ ಗ್ರಾಮವೇ ಕರೊನಾ ಕರಿನೆರಳಿನಲ್ಲಿ ಇರುವಾಗ ಭೂಷಣ್​ ಠಾಕೂರ್​ (52) ಎಂಬ ವ್ಯಕ್ತಿಯ ಹತ್ತಿರವೂ ಕರೊನಾ ಸುಳಿಯದೇ ಇರುವುದು ಅಚ್ಚರಿಯ ಸಂಗತಿಯೇ ಸರಿ.
ಅಂದಹಾಗೆ ಠಾಕೂರ್ ಅವರು​ ಕರೊನಾದಿಂದ ತಪ್ಪಿಸಿಕೊಳ್ಳಲು ಯಾವುದೇ ಕರಾಮತ್ತು ಮಾಡಿಲ್ಲ. ಬದಲಾಗಿ ಎಲ್ಲರಂತೆ ಸಾಮಾನ್ಯ ರಕ್ಷಣಾ ತಂತ್ರಗಳನ್ನೇ ಅನುಸರಿಸುವ ಮೂಲಕ ಕರೊನಾದಿಂದ ಅಂತರ ಕಾಪಾಡಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಠಾಕೂರ್​, ನನಗೆ ಕರೊನಾ ನೆಗೆಟಿವ್​ ಬರಲು ಪ್ರಮುಖ ಕಾರಣವೆಂದರೆ ನಾನು ಚಾಚೂ ತಪ್ಪದೇ ಮಾಸ್ಕ್​, ಸ್ಯಾನಿಟೈಸರ್​ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದೆ ಎಂದು ತಿಳಿಸಿದರು.
ನನ್ನ ಕುಟುಂಬದ ಆರು ಜನರಿಗೆ ಕರೊನಾ ಪಾಸಿಟಿವ್​ ಇದೆ. ಇದು ತಿಳಿದ ತಕ್ಷಣ ನನ್ನಷ್ಟಕ್ಕೆ ನಾನೇ ಪ್ರತ್ಯೇಕವಾದೆ. ಪ್ರತ್ಯೇಕವಾದ ಕೊಠಡಿಯಲ್ಲಿ ನಾನೇ ಅಡುಗೆ ಮಾಡಿಕೊಳ್ಳುತ್ತಿದ್ದೆ. ಮೊದಲೇ ನಮ್ಮದು ಶೀತವಲಯ ಆಗಿರುವುದರಿಂದ ಚಳಿ ನಿವಾರಣೆಗೆ ಬೆಂಕಿ ಕಾಯಲು ಎಲ್ಲರು ಒಂದೆಡೆ ಸೇರಿದಾಗ ಕರೊನಾ ಹರಡಿದೆ ಎಂದು ಠಾಕೂರ್​ ಹೇಳಿದರು.
ಇದನ್ನೂ ಓದಿ:ಡಿಸೆಂಬರ್ ನಲ್ಲಿ ಶಾಲೆ ತೆರೆಯುವುದು ಸೂಕ್ತವಲ್ಲ: ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿ ಶಿಫಾರಸು
ಥೋರಂಗ್​ ಗ್ರಾಮ ಗ್ರಾಮದಲ್ಲಿ ಸುಮಾರು 160 ಜನರಿದ್ದಾರೆ. ಚಳಿಯ ಕಾರಣ ಗ್ರಾಮದ ಜನರು ಬೇರೆ ಪ್ರದೇಶಗಳಲ್ಲಿ ವಲಸೆ ಹೋಗಿದ್ದಾರೆ. ಉಳಿದ 42 ಮಂದಿಯಲ್ಲಿ ನವೆಂಬರ್​ 13ರಂದು 41 ಜನರಿಗೆ ಕೆರೊನಾ ಪಾಸಿಟಿವ್​ ಆಗಿದೆ. ಶನಿವಾರ ಮತ್ತೆ ಪರೀಕ್ಷಿಸಿದಾಗ ಕೆಲವರಿಗೆ ನೆಗೆಟಿವ್​ ಬಂದಿದೆ. ಅ. 13ರಂದು ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಕರೊನಾ ಹರಡು ಇದೇ ಕಾರಣವಾಗಿರಬಹುದು ಎನ್ನುತ್ತಾರೆ ಲಾಹೌಲ್-ಸ್ಪಿಟಿ ಜಿಲ್ಲೆಯ ಡೆಪ್ಯುಟಿ ಕಮಿಷನರ್​ ಪಂಕಜ್​ ರಾಜ್​.
ಇನ್ನು ಹಿಮಾಚಲ ಪ್ರದೇಶದಲ್ಲಿ ಇಲ್ಲಿಯವರೆಗೆ 33 ಸಾವಿರಕ್ಕೂ ಅಧಿಕ ಮಂದಿಗೆ ಕರೊನಾ ಪಾಸಿಟಿವ್​ ವರದಿಯಾಗಿದೆ. ಇದರಲ್ಲಿ 518 ಮಂದಿ ಮೃತಪಟ್ಟಿದ್ದು, 26 ಸಾವಿರ ಮಂದಿ ಗುಣಮುಖರಾಗಿದ್ದಾರೆ. 7,070 ಸಕ್ರೀಯ ಪ್ರಕರಣಗಳಿವೆ.(ಏಜೆನ್ಸೀಸ್​)
ಶವ ಸಂಸ್ಕಾರದ ನಂತರ ಎದ್ದುಬಂದ ವೃದ್ಧೆ- ಹೌಹಾರಿಹೋದ ಕುಟುಂಬಸ್ಥರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − sixteen =
Remember me
