ನವದೆಹಲಿ:ಹಿಮಾಚಲ ಪ್ರದೇಶದ ಬಿಜೆಪಿ ಸಂಸದ ರಾಮ್​ ಸ್ವರೂಪ್​ ಶರ್ಮಾ ಅವರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಅವರ ದೆಹಲಿ ನಿವಾಸದಲ್ಲಿ ಪತ್ತೆಯಾಗಿರುವುದಾಗಿ ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಸಂಸದರು ತಮ್ಮ ನಿವಾಸದಲ್ಲಿ ಬೆಳಗ್ಗೆ 7 ಸಮಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದು ಆತ್ಮಹತ್ಯೆಯೋ? ಎಂಬುದನ್ನು ತನಿಖೆ ನಡೆಸುತ್ತಿದ್ದೇವೆಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿರಿ:ಭವಾನಿ ರೇವಣ್ಣ ಶಾಸಕಿ ಆಗ್ತಾರಾ? ಈ ಕುರಿತು ದೇವೇಗೌಡರ ಸೊಸೆ ಹೇಳಿದ್ದೇನು?
ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಇಂದು ನಡೆಯಬೇಕಿದ್ದ ಸಂಸದೀಯ ಸಭೆಯನ್ನು ಬಿಜೆಪಿ ರದ್ದು ಮಾಡಿದೆ.
ರಾಮ್​ ಸ್ವರೂಪ್​ ಶರ್ಮಾ ಅವರು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಜಲ್ಪೆಹರ್​ ಗ್ರಾಮದಲ್ಲಿ 1958, ಜೂನ್​ 10ರಂದು ಜನಿಸಿದರು. ಶರ್ಮಾ ಅವರು ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.
ಶರ್ಮಾ ಅವರು 16 ಮತ್ತು 17ನೇ ಲೋಕಸಭೆಗೆ ಮಂಡಿ ಕ್ಷೇತ್ರದಿಂದ ಕ್ರಮವಾಗಿ 2014 ಮತ್ತು 2019ರಲ್ಲಿ ಆಯ್ಕೆಯಾಗಿದ್ದರು.(ಏಜೆನ್ಸೀಸ್​)
ತಾಯಿಯ ಕಪಾಳಕ್ಕೆ ಬಾರಿಸಿದ ಮಗ: ಸ್ಥಳದಲ್ಲೇ ಪ್ರಾಣ ಬಿಟ್ಟ ಜನ್ಮದಾತೆ, ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಪ್ಲೀಸ್​ ಬಿಟ್ಟು ಹೋಗ್ಬೇಡ.. ಕಾಲಿಡಿದು ಗೋಗರೆದ್ರೂ ಬೈಕ್​ ಏರಿ ಮತ್ತೊಬ್ಬನ ಜತೆ ಹೊರಟೇ ಹೋದ್ಳು!

ಲಾರಿ ಡಿಕ್ಕಿಯ ರಭಸಕ್ಕೆ ಕುಸಿದ ಹೋಟೆಲ್ ಕಟ್ಟಡ: ಅದೃಷ್ಟವಶಾತ್​ ತಪ್ಪಿತು ಭಾರೀ ಅನಾಹುತ! ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − two =
Remember me
