ಶಿಮ್ಲಾ:ಹಿಮಾಚಲ ಪ್ರದೇಶದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಮಹಾ ಮಳೆಗೆ ಪ್ರವಾಹಗಳು ಮತ್ತು ಭೂಕುಸಿತಗಳು ಸಂಭವಿಸುತ್ತಿವೆ. ಹಲವೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ರಸ್ತೆಗಳು ಬ್ಲಾಕ್​ ಆಗಿವೆ ಮತ್ತು ಸೇತುವೆಗಳು ಕುಸಿಯುತ್ತಿವೆ.
ಪ್ರಾಕೃತಿಕ ವಿಕೋಪಕ್ಕೆ ಹಿಮಾಚಲ ಪ್ರದೇಶದಲ್ಲಿ ಕಳೆದ 48 ಗಂಟೆಗಳಲ್ಲಿ 20 ಮಂದಿ ಮೃತಪಟ್ಟಿದ್ದಾರೆ. ಕೆಲವೆಡೆ ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ಸುಮಾರು 3 ಸಾವಿರದಿಂದ 4 ಸಾವಿರ ಕೋಟಿ ಮೌಲ್ಯದ ಮೂಲಸೌಕರ್ಯ ವರುಣನ ಅಬ್ಬರಕ್ಕೆ ನಷ್ಟವಾಗಿದೆ. ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಜನರನ್ನು ನಿದ್ದೆಗೆಡಿಸುವಂತೆ ಮಾಡಿದೆ.
ಹಿಮಾಚಲ ಪ್ರದೇಶದಲ್ಲಿ ಪ್ರಕೃತಿಯ ರೌದ್ರಾವತರದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಭಾರೀ ಮಳೆಗೆ ಉಂಟಾಗಿರುವ ಪ್ರವಾಹದ ವೇಗ ಎಷ್ಟಿದೆ ಎಂದರೆ ತನ್ನ ಹಾದಿಗೆ ಎದುರಾಗುವ ಎಲ್ಲವನ್ನು ತನ್ನ ಒಡಲಿಗೆ ಸೆಳೆದುಕೊಳ್ಳುತ್ತಿದೆ. ಗುರುದ್ವಾರದ ಶ್ರೀ ಮಣಿಕರಣ್ ಸಾಹಿಬ್ ಮತ್ತು ಶಿವ ಮಂದಿರವನ್ನು ಸಂಪರ್ಕಿಸುವ ಸೇತುವೆಯು ಪಾರ್ವತಿ ನದಿಯ ಭಾರೀ ಪ್ರವಾಹದಿಂದಾಗಿ ಹಾನಿಯಾಗಿರುವುದನ್ನು ವೈರಲ್ ವೀಡಿಯೊದಲ್ಲಿ ಕಾಣಬಹುದು.
ಇದನ್ನೂ ಓದಿ:ಐವರು ಮೆಕ್ಸಿಕನ್ನರು ಸೇರಿ 6 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್​ ಮೌಂಟ್​ ಎವೆರೆಸ್ಟ್ ಬಳಿ ಪತನ
The bridge connecting Gurudwara Sri Manikaran Sahib and Shiv Mandir was broken by the raging flood waters.pic.twitter.com/flfEBIPkby
— Parmeet Bidowali (@ParmeetBidowali)July 11, 2023

ಮತ್ತೊಂದು ದೃಶ್ಯವು ಮನಾಲಿಯಲ್ಲಿ ಭಾರೀ ನೀರಿನ ಹರಿವಿನಿಂದಾಗಿ ಹೋಟೆಲ್ ಕಟ್ಟಡವೊಂದು ಕುಸಿಯುತ್ತಿರುವುದನ್ನು ತೋರಿಸುತ್ತದೆ.
🌧🌊🇮🇳 – Hotel washed away in#ManaliAalluamid heavy rains in#HimachalPradesh,#India.pic.twitter.com/1wXr6IvFw4
— 🔥🗞The Informant (@theinformant_x)July 11, 2023

ಹಿಮಾಚಲ ಪ್ರದೇಶದ ಸೋಲನ್​ ಜಿಲ್ಲೆಯಲ್ಲಿರುವ ಚರನಿಯಾ ಸೇತುವೆ ನದಿಯ ಪ್ರವಾಹಕ್ಕೆ ಕೊಚ್ಚಿ ಹೋಗುತ್ತಿರುವ ದೃಶ್ಯವಿದೆ.
#CharaniyaBridge of#Solandistrict in Himachal Pradesh, washed away.#HimachalPradeshis believed to be the worst affected state as several roads, portions of highways and buildings are being washed away due to spate in rivers.@SukhuSukhvinder@CMOFFICEHP#HimachalFloods…pic.twitter.com/ZP0uI6zi9N
— Upendrra Rai (@UpendrraRai)July 11, 2023

ಕುಲುವಿನ ಮತ್ತೊಂದು ವಿಡಿಯೋದಲ್ಲಿ ಬಿಯಾಸ್ ನದಿಯಲ್ಲಿ ಉಂಟಾಗಿರುವ ಪ್ರವಾಹದ ನೀರಿನಲ್ಲಿ ಟ್ರಕ್ ಒಂದು ಆಟಿಕೆಯ ಸಾಮಾನಿನಂತೆ ಕೊಚ್ಚಿಕೊಂಡುವ ಹೋಗುತ್ತಿರುವುದನ್ನು ಕಾಣಬಹುದು.
Kullu (Himachal Pradesh) : a truck washed away in Beas River (Source: Locals & Confirm By Police)#KULLU#BEASRIVER#HIMACHALPRADESHpic.twitter.com/AnWaJ1sXHB
— Europe Cognizant (@EuropeCognizant)July 10, 2023

ಪ್ರವಾಹದ ನೀರಿನ ಕೊರೆತದಿಂದಾಗಿ ರಸ್ತೆಯ ಬದಿ ಕುಸಿದು, ಅರ್ಧ ರಸ್ತೆ ನೀರಿಗೆ ಆಹುತಿಯಾಗಿರುವುದನ್ನು ಕಾಣಬಹುದು.
The fury of the floods in#HimachalPradeshis scary. Will we ever learn to curb our greed and bring corrupt officials, netas and citizens to task for environmental violations? It’s only getting worse each year. The rage of nature and greed of humans. Both.pic.twitter.com/C6PzZd0lXp
— Sangita (@Sanginamby)July 10, 2023

ಮಂಡಿ ಜಿಲ್ಲೆಯಲ್ಲಿ ಬಿಯಾಸ್​ ನದಿಯ ದಂಡೆಯಲ್ಲಿರುವ ಪ್ರಖ್ಯಾತ ಪಂಚವಕ್ತ್ರ ಶಿವ ದೇವಾಲಯ ಪ್ರವಾಹದಿಂದ ಭಾಗಶಃ ಮುಳುಗಡೆಯಾಗಿರುವುದನ್ನು ಕಾಣಬಹುದು.
Temple of Bholenath in Mandi, Himachal.#HimachalPradeshpic.twitter.com/FhcIIBZi7b
— Scenic Himachal (@scenichimachal)July 11, 2023

ಇದನ್ನೂ ಓದಿ:ತಮಿಳುನಾಡಿನ ಸೌಂದರ್ಯವನ್ನು ಅನ್ವೇಷಿಸಿದ ಬಾಹುಬಲಿ ನಿರ್ದೇಶಕ; ಟ್ರಿಪ್​​ ವಿಡಿಯೋ ಹಂಚಿಕೊಂಡ ರಾಜಮೌಳಿ
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಹಿಮಾಚಲ ಪ್ರದೇಶದ ಅನೇಕ ಜಿಲ್ಲೆಗಳಿಗೆ ರೆಡ್​ ಮತ್ತು ಆರೆಂಜ್​ ಅಲರ್ಟ್​ ನೀಡಿದೆ. ಮುಂದಿನ 24 ಗಂಟೆಗಳು ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಸೋಲನ್, ಶಿಮ್ಲಾ, ಸಿರ್ಮೌರ್, ಕುಲು, ಮಂಡಿ, ಕಿನ್ನೌರ್ ಮತ್ತು ಲಾಹೌಲ್‌ನಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಉನಾ, ಹಮೀರ್‌ಪುರ, ಕಾಂಗ್ರಾ ಮತ್ತು ಚಂಬಾದಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ. ಮುಂದಿನ 24 ಗಂಟೆಗಳ ಕಾಲ ಮಂಡಿ, ಕಿನ್ನೌರ್ ಮತ್ತು ಲಾಹೌಲ್-ಸ್ಪಿಟಿಗೆ ಹಠಾತ್ ಪ್ರವಾಹದ ಎಚ್ಚರಿಕೆ ನೀಡಲಾಗಿದೆ ಎಂದು ಹಿರಿಯ ಐಎಂಡಿ ವಿಜ್ಞಾನಿ ಸಂದೀಪ್ ಕುಮಾರ್ ಶರ್ಮಾ ಸೋಮವಾರ ಹೇಳಿದ್ದಾರೆ.(ಏಜೆನ್ಸೀಸ್​)
ವರುಣನ ಅಬ್ಬರಕ್ಕೆ ಅಪಾಯ ಮಟ್ಟ ಮೀರಿದ ಯುಮುನಾ ನದಿ: ರಾಷ್ಟ್ರ ರಾಜಧಾನಿಗೆ ಪ್ರವಾಹ ಭೀತಿ

ಬದಲಾಯಿತು ಪಾಕ್​ ಮಹಿಳೆಯ ಜೀವನ ಶೈಲಿ: ಮಾಂಸಾಹಾರಿ ಸೀಮಾ ಈಗ ಸಸ್ಯಾಹಾರಿ, ನಿತ್ಯವೂ ದೇವರ ಸೇವೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + eight =
Remember me
