ಮುಂಬೈ:ಮುಂಬೈಗೆ ಬರಬೇಡ..ಎಂದು ಹಲವರು ನನ್ನನ್ನು ಹೆದರಿಸುತ್ತಿದ್ದಾರೆ. ಆದರೆ ನಾನು ಸೆಪ್ಟೆಂಬ್​ 9ರಂದು ಮನಾಲಿಯಿಂದ ಮುಂಬೈಗೆ ಬಂದೇ ಬರುತ್ತೇನೆ..ಅದ್ಯಾರಿಗೆ ನನ್ನನ್ನು ತಡೆಯಲು ತಾಕತ್ತಿದೆಯೋ ಅವರು ತಡೆಯಲಿ ಎಂದು ನಟಿ ಕಂಗನಾ ರಣಾವತ್​ ಸವಾಲು ಹಾಕಿದ್ದಾರೆ.
ಅಂಥ ಸವಾಲು ಹಾಕಿದ ನಟಿಗೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್​ ಠಾಕೂರ್​ ಅವರು ಬೆಂಬಲ ನೀಡಿದ್ದು, ಕಂಗನಾ ರಣಾವತ್​ ಅವರು ಸೆಪ್ಟೆಂಬರ್​ 9ರಂದು ಮುಂಬೈಗೆ ಭೇಟಿ ನೀಡಲು, ನಮ್ಮ ರಾಜ್ಯ ಸರ್ಕಾರ ಅವರಿಗೆ ಭದ್ರತೆ ಒದಗಿಸಲಿದೆ ಎಂದು ಹೇಳಿದ್ದಾರೆ.
ಕಂಗನಾ ಅವರು ಹಿಮಾಚಲ ಪ್ರದೇಶದ ಮಗಳು. ಹಾಗೇ ಓರ್ವ ಸೆಲೆಬ್ರಿಟಿ ಕೂಡ ಹೌದು. ಅವರಿಗೆ ರಕ್ಷಣೆ ಒದಗಿಸುವುದು ನಮ್ಮ ಕರ್ತವ್ಯ. ನಾನು ಡಿಜಿಪಿ ಸಂಜಯ್​ ಕುಂದು ಅವರೊಂದಿಗೆ ಮಾತನಾಡಿದ್ದೇನೆ. ಕಂಗನಾ ಭದ್ರತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಸುಶಾಂತ್​ ಸಿಂಗ್​ ಮೃತಪಟ್ಟ ಬಳಿಕ ಕಂಗನಾ ರಣಾವತ್​ ಹಲವರ ಕಣ್ಣಲ್ಲಿ ವಿಲನ್​ ಆಗಿದ್ದಾರೆ. ಆದರೆ ಅವರು ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಬೋಲ್ಡ್​ ಹೇಳಿಕೆಗಳನ್ನು ಕೊಡುತ್ತಲೇ ಇದ್ದಾರೆ. ಈ ಮಧ್ಯೆ ಕಂಗಾನ ಸಹೋದರಿ ರಂಗೋಲಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಕಚೇರಿಗೆ ಕರೆ ಮಾಡಿ ಸಹೋದರಿಗೆ ಭದ್ರತೆ ನೀಡಲು ಮನವಿ ಮಾಡಿದ್ದಾರೆ. ಹಾಗೇ, ಕಂಗನಾ ತಂದೆಯೂ ಕೂಡ ಸಿಎಂಗೆ ಲಿಖಿತ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)
ನನ್ನನ್ನ ತಡೆಯೋಕೆ ಯಾರಿಗೆ ತಾಕತ್ತಿದೆಯೋ ನೋಡ್ತೀನಿ … ಕಂಗನಾ ಸವಾಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 5 =
Remember me
