ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ರಾಜ್ಯದಲ್ಲಿ ಕಳೆದ 36 ಗಂಟೆಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಧಾರಾಕಾರ ಮಳೆಯಿಂದಾಗಿ ಪ್ರಾಣಹಾನಿ, ಆಸ್ತಿ-ಪಾಸ್ತಿ ನಷ್ಟವಾಗಿದೆ. ಹಲವೆಡೆ ಭೂಕುಸಿತ ಸಂಭವಿಸಿದೆ. ಈ ಮಧ್ಯೆ ಕ್ಷಣಾರ್ಧದಲ್ಲಿ ಹಲವು ಮನೆಗಳು ಕುಸಿದು ಬಿದ್ದಿರುವ ವಿಡಿಯೋ ಭಾರೀ ವೈರಲ್ ಆಗಿದೆ.
ವಿಡಿಯೋದಲ್ಲಿ ಸೆರೆಯಾದ ದೃಶ್ಯಕುಲುವಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪರಿಸ್ಥಿತಿ ಹದಗೆಡುತ್ತಿದೆ. ಶಿಮ್ಲಾದ ಕೃಷ್ಣಾನಗರದಲ್ಲಂತೂ ಮನೆಯೊಂದು ಕುಸಿದು ಬೀಳುವ ಭಯಾನಕ ವಿಡಿಯೋವೊಂದು ಹೊರಬಿದ್ದಿದೆ. ಗುರುವಾರ ಬೆಳಗ್ಗೆ ನಾಲ್ಕಕ್ಕೂ ಹೆಚ್ಚು ಮನೆಗಳು ಇಸ್ಪೀಟೆಲೆಗಳಂತೆ ಕುಸಿದು ಬಿದ್ದಿರುವುದು ವಿಡಿಯೋದಲ್ಲಿ ರಿವೀಲ್ ಆಗಿದ್ದು, ಕೆಲವೇ ಸಮಯದಲ್ಲಿ ಕಟ್ಟಡಗಳು ನೆಲಸಮವಾಗಿವೆ.
https://twitter.com/Vershasingh26/status/1694566671657410825
ಕಣ್ಣೆದುರೇ ಕೋಟ್ಯಂತರ ರೂಪಾಯಿ ಆಸ್ತಿ ನಷ್ಟನೆಲಸಮವಾದ ಕಟ್ಟಗಳಲ್ಲಿದ್ದ ಬಾಡಿಗೆದಾರರು ಸಕಾಲದಲ್ಲಿ ಮನೆ ತೆರವು ಮಾಡಿದ್ದರು. ಇಲ್ಲದಿದ್ದರೆ ಇಲ್ಲಿ ದೊಡ್ಡ ಅವಘಡ ಸಂಭವಿಸುತ್ತಿತ್ತು. ಗುರುವಾರ ಬೆಳಗ್ಗೆಯಿಂದ ಒಂದರ ಹಿಂದೆ ಒಂದರಂತೆ ಮನೆಗಳು ಕುಸಿಯಲಾರಂಭಿಸಿದ್ದು, ಕಣ್ಣೆದುರೇ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹಾನಿಯಾಗಿದೆ.
ಯಾವುದೇ ಪ್ರಾಣಹಾನಿ ವರದಿಯಾಗಿಲ್ಲಮತ್ತೊಂದೆಡೆ, ಈ ಘಟನೆಯ ಬಗ್ಗೆ ತಿಳಿದು ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಮಾಹಿತಿ ಪಡೆದರು. ಈಗಾಗಲೇ ಎರಡು ಮನೆಗಳನ್ನು ತೆರವು ಮಾಡಲಾಗಿದ್ದು, ಇಂದು ಬೆಳಗ್ಗೆ ಒಂದು ಮನೆಯನ್ನು ತೆರವು ಮಾಡಲಾಗಿದೆ.
ಖಾಸಗಿ ಶಾಲೆಯ ಶಿಕ್ಷಕಿಗೆ ನಾಮ ಹಾಕಿದ ಆನ್‌ಲೈನ್‌ ವಂಚಕರು!

Sign in to your account
Please enter an answer in digits:16 − twelve =
Remember me
