ನವದೆಹಲಿ:ಹಿಮಾಲಯ ಪರ್ವತ ಶ್ರೇಣಿ ವ್ಯಾಪ್ತಿಯಲ್ಲಿ ಭಾರಿ ಪ್ರಮಾಣದ ಭೂಕಂಪವಾಗುವ ಸಾಧ್ಯತೆಗಳಿದ್ದು, ಇದರಿಂದ ಅಪಾರ ಪ್ರಮಾಣದಲ್ಲಿ ಜೀವಹಾನಿ ಆಗಬಹುದೆಂದು ಅಧ್ಯಯನದ ವರದಿಯೊಂದು ಎಚ್ಚರಿಸಿದೆ. ಭೂವಿಜ್ಞಾನ, ಐತಿಹಾಸಿಕ ಮತ್ತು ಭೌಗೋಳಿಕ ದತ್ತಾಂಶಗಳ ವಿಶ್ಲೇಷಣೆ ಆಧಾರದಲ್ಲಿ ಈ ನಿಲುವಿಗೆ ಬರಲಾಗಿದೆ. ‘ಸಿಸ್ಮಲಾಜಿಕಲ್ ರೀಸರ್ಚ್ ಲೆಟರ್ಸ್’ ಪತ್ರಿಕೆಯ ಆಗಸ್ಟ್ ಸಂಚಿಕೆಯಲ್ಲಿ ಈ ಅಧ್ಯಯನ ವರದಿ ಪ್ರಕಟಗೊಂಡಿದೆ.
ಮುಂದಿನ ಹಿಮಾಲಯ ಭೂಕಂಪಗಳು 20ನೇ ಶತಮಾನದಲ್ಲಿ ಆಲ್ಯೂಟಿಯನ್ ವಲಯದಲ್ಲಿ ಸಂಭವಿಸಿದ ಭಾರಿ ಭೂಕಂಪಗಳ ರೀತಿಯಲ್ಲೇ ಮಾರಕವಾಗಿರುತ್ತವೆ. ಅಲ್ಯೂಟಿಯನ್ ಭೂಪದರಗಳ ವಲಯ ಗಲ್ಪ್​ನಿಂದ ಅಲಾಸ್ಕಾ ವರೆಗೆ ಅಲ್ಲಿಂದ ರಷ್ಯನ್ ದೂರಪ್ರಾಚ್ಯದ ಕಮ್ಟ್ಕಾವರೆಗೆ ಹಬ್ಬಿದೆ.
ಇದನ್ನೂ ಓದಿ:ಡಾರ್ನಿಯರ್​ ವಿಮಾನ ಚಲಾಯಿಸಲು ಸಿದ್ಧವಾಗಿದೆ ಮೊದಲನೇ ಮಹಿಳಾ ಪೈಲಟ್ ತಂಡ
ಏನಿದು ಅಧ್ಯಯನ
ಭೂಗರ್ಭ ಶಾಸ್ತ್ರದ ವಿವಿಧ ನಿಯಮಗಳನ್ನು ಅನ್ವಯಿಸಿ ಅಧ್ಯಯನ ನಡೆಸಲಾಗಿದೆ. ಭೂಪದರಗಳ ಸಂರಚನೆ, ಮಣ್ಣಿನ ವಿಶ್ಲೇಷಣೆ, ರೇಡಿಯೋ ಕಾರ್ಬನ್ ವಿಶ್ಲೇಷಣೆ ಮೊದಲಾದ ಪ್ರಕ್ರಿಯೆ ಅದರಲ್ಲಿ ಒಳಗೊಂಡಿದೆ.
ಎಲ್ಲಿಂದ ಎಲ್ಲಿವರೆಗೆ? :ಪೂರ್ವದಲ್ಲಿ ಭಾರತದ ಅರುಣಾಚಲ ಪ್ರದೇಶದ ಪೂರ್ವ ಗಡಿಯಿಂದ ಪಶ್ಚಿಮದಲ್ಲಿ ಪಾಕಿಸ್ತಾನದ ಪೂರ್ವದವರೆಗೆ ಚಾಚಿರುವ ಹಿಮಾಲಯ ಆರ್ಕ್ ಈ ಹಿಂದಿನ ಬೃಹತ್ ಭೂಕಂಪಗಳ ಮೂಲವಾಗಿತ್ತು. ಅದೇ ರೀತಿಯ ಭೂಕಂಪಗಳು ಮರುಕಳಿಸಲಿವೆ. ವೈಜ್ಞಾನಿಕವಾಗಿ ಹೇಳುವುದಾದಲ್ಲಿ, ನಮ್ಮ ಜೀವಿತದ ಅವಧಿಯಲ್ಲೇ ಅವು ಸಂಭವಿಸಿದರೆ ಅಚ್ಚರಿಯೇನೂ ಅಲ್ಲ ಎನ್ನುತ್ತಾರೆ ನೆವಾಡಾ ವಿಶ್ವವಿದ್ಯಾಲಯದ ನಿಯೋಟೆಕ್ಟೊನಿಕ್ ಅಧ್ಯಯನ ಕೇಂದ್ರದ ಪ್ರೊಫೆಸರ್ ವೆಸ್​ನೌಸ್ಕಿ.
ಇದನ್ನೂ ಓದಿ:ಸಿಎಂ ಪಟ್ಟ ಹೋದ್ಮೇಲೆ ಹುಚ್ಚನಂತೆ ಅಲೀತಿದ್ದಾರೆ… ಅವ್ರ ತಾಯಿ, ಸಹೋದರಿ ಐಟಂಗಳಿರಬೇಕು..
ದೆಹಲಿಗೆ ಆತಂಕ :ಭಾರತದ ರಾಜಧಾನಿ ದೆಹಲಿವರೆಗೆ ದಕ್ಷಿಣದಲ್ಲಿ ಬೃಹತ್ ಭೂಕಂಪ ಪರಿಣಾಮ ಬೀರಿ ಅಪಾರ ಹಾನಿ ಉಂಟು ಮಾಡಬಹುದು. 1.1 ಕೋಟಿಗೂ ಅಧಿಕ ಜನಸಂಖ್ಯೆಯ ದೆಹಲಿ ಜಗತ್ತಿನ ಅತ್ಯಂತ ದೊಡ್ಡ ನಗರಗಳಲ್ಲಿ ಒಂದಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ಉತ್ತರ ಭಾರತದಲ್ಲಿ ಹಲವು ಅಲ್ಪಪ್ರಮಾಣದ ಭೂಕಂಪಗಳಾಗಿದ್ದು ದೊಡ್ಡ ಭೂಕಂಪ ನಡೆಯುವ ಅಪಾಯ ಕಾದಿದೆಯೇನೋ ಎಂದು ಆತಂಕಪಡುವಂತಾಗಿದೆ.8 ಪ್ಲಸ್: ಭವಿಷ್ಯದಲ್ಲಿ ಹಿಮಾಲಯ ಶ್ರೇಣಿಯಲ್ಲಿ 8 ಪ್ಲಸ್ ಪ್ರಮಾಣದ ಭೂಕಂಪ ಸಂಭವಿಸುವ ಅಪಾಯವಿರುವುದಾಗಿ ಎಚ್ಚರಿಸಲಾಗಿದೆ.
ಬಿಹಾರ ಚುನಾವಣೆ: ಬಿಜೆಪಿ ಪ್ರಣಾಳಿಕೆ-19 ಲಕ್ಷ ಉದ್ಯೋಗ, ಉಚಿತ ಲಸಿಕೆ, ಜೆಡಿಯು ಪ್ರಣಾಳಿಕೆ- ಸಾಥ್ ನಿಶ್ಚಯ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − five =
Remember me
