ನವದೆಹಲಿ:ಜಗತ್ತಿನ ಇತರೆ ಹಿಮಪರ್ವತಗಳಿಗೆ ಹೋಲಿಸಿ ದರೆ ಹಿಮಾಲಯದ ಗ್ಲೇಸಿಯರ್ ಅಥವಾ ನೀರ್ಗಲ್ಲುಗಳು ಅಸಾಧಾರಣ ವೇಗದಲ್ಲಿ ಕರಗುತ್ತಿವೆ ಎಂದು ಸೋಮವಾರ ಪ್ರಕಟವಾಗಿರುವ ಹೊಸ ಅಧ್ಯಯನ ವರದಿ ಹೇಳಿದೆ. ಬ್ರಿಟನ್​ನ ಯೂನಿವರ್ಸಿಟಿ ಆಫ್ ಲೀಡ್ಸ್​ನ ವಿಜ್ಞಾನಿಗಳ ನೇತೃತ್ವದ ತಂಡ ಈ ಅಧ್ಯಯನ ನಡೆಸಿದ್ದು, ಮೂರನೇ ಧ್ರುವ ಎಂದು ಗುರುತಿಸಲ್ಪಟ್ಟಿರುವ ಹಿಮಾಲಯದ ಹಿಮಪರ್ವತ ಗಳಿಂದ ಹಿಮ ನಷ್ಟಕ್ಕೆ ಹೊಸ ಸಾಕ್ಷ್ಯಗಳನ್ನೂ ಸಂಗ್ರಹಿಸಿದೆ. ಇತ್ತೀಚಿನ ದಶಕಗಳ ಅವಧಿಯಲ್ಲಿ ಹಿಮಾಲಯದ ಗ್ಲೇಸಿಯರ್​ಗಳು ಅದಕ್ಕೂ ಹಿಂದಿನ ದಶಕಗಳಿಗೆ ಹೋಲಿಸಿದರೆ 10 ಪಟ್ಟು ವೇಗದಲ್ಲಿ ಹಿಮದ ಹೊದಿಕೆಯನ್ನು ಕಳೆದುಕೊಳ್ಳುತ್ತಿವೆ.
ಭವಿಷ್ಯದಲ್ಲಿ ನೀರು ಸಿಗಲ್ಲ:ಹಿಮಾಲಯದ ಗ್ಲೇಸಿಯರ್​ಗಳು ಹೀಗೆ ಕರಗಿ ಹೋದರೆ ಮುಂದೆ ಭಾರತ ಮತ್ತು ಪಾಕಿಸ್ತಾನಿಯರಿಗೆ ನೀರಿನ ಅಭಾವ ಕಾಡಲಿದೆ. ಈ ಬಗ್ಗೆ ಈಗಲೇ ಮುನ್ನೆಚ್ಚರಿಕೆ ವಹಿಸುವುದು ಒಳಿತು ಎಂದು ಯೂನಿವರ್ಸಿಟಿ ಆಫ್ ಲೀಡ್ಸ್ ಸ್ಕೂಲ್ ಆಫ್ ಜಿಯಾಗ್ರಫಿ ಡೆಪ್ಯುಟಿ ಹೆಡ್ ಜೋನಾಥನ್ ಕಾರ್ರಿವಿಕ್ ಎಚ್ಚರಿಸಿದ್ದಾರೆ. ಇವರ ಅಧ್ಯಯನ ವರದಿ ಸೈಂಟಿಫಿಕ್ ರಿಪೋರ್ಟ್ಸ್​ನಲ್ಲಿ ಪ್ರಕಟವಾಗಿದೆ.
3ನೇ ಅತಿದೊಡ್ಡ ಹಿಮಪರ್ವತ:ಹಿಮಾಲಯ ಪರ್ವತ ಶ್ರೇಣಿಯು ಜಗತ್ತಿನ ಮೂರನೇ ಅತಿದೊಡ್ಡ ಹಿಮಪರ್ವತ ಶ್ರೇಣಿಯಾಗಿದೆ. ಅಂಟಾರ್ಕ್ಟಿಕಾ ಮತ್ತು ಆರ್ಕ್ಟಿಕ್ ನಂತರ ಮೂರನೇ ಧ್ರುವ ಅಥವಾ ದ ಥರ್ಡ್ ಪೋಲ್ ಎಂದು ಗುರುತಿಸಲ್ಪಟ್ಟಿರುವ ಪರ್ವತ ಶ್ರೇಣಿ ಇದು. ಏಷ್ಯಾದ ಬಹುತೇಕ ನದಿಗಳ ಉಗಮ ಸ್ಥಾನ ವಿಶೇಷವಾಗಿ ಬ್ರಹ್ಮಪುತ್ರ, ಗಂಗಾ, ಯಮುನಾ, ಸಿಂಧು ಮತ್ತು ಉಪನದಿಗಳು ಇಲ್ಲಿಂದಲೇ ಹುಟ್ಟಿ ಹರಿಯುತ್ತಿವೆ.
ಹಿಮಾಲಯದ ವಿಸ್ತರಿತ ಗ್ಲೇಸಿಯರ್​ನಲ್ಲೇ ನಷ್ಟ:ಹಿಮಾಲಯದಲ್ಲಿ 400-700 ವರ್ಷಗಳ ಹಿಂದೆ ಹಿಮಪರ್ವತಗಳ ವಿಸ್ತರಣೆಯಾಗಿತ್ತು. ಆ ಅವಧಿಯನ್ನು ‘ಲಿಟಲ್ ಐಸ್ ಏಜ್’ ಎಂದು ಗುರುತಿಸುತ್ತಾರೆ. ಆಗ 14,798 ಹಿಮದ ಮೇಲ್ಮೈ ನಿರ್ವಣವಾಗಿತ್ತು. ಉಪಗ್ರಹ ಚಿತ್ರಗಳು ಕೂಡ ಇದನ್ನು ದೃಢೀಕರಿಸಿವೆ. 28,000 ಚದರ ಕಿ.ಮೀ. ಆವರಿಸಿದ್ದ ಹಿಮ ನದಿ ಈಗ 19,600 ಚದರ ಕಿ.ಮೀ.ಗೆ ಸಂಕುಚಿತವಾಗಿದೆ. ಅಂದರೆ ಗ್ಲೇಸಿಯರ್​ಗಳು ಶೇಕಡ 40 ಪ್ರದೇಶವನ್ನು ಕಳೆದುಕೊಂಡಿವೆ. 390-586 ಕ್ಯುಬಿಕ್ ಕಿ.ಮೀ. ಹಿಮದ ಹೆಬ್ಬಂಡೆಗಳು ನಷ್ಟವಾಗದೆ. ಬಹುತೇಕ ಪೂರ್ವ ಹಿಮಾಲಯ ಭಾಗದಲ್ಲೇ ಈ ನಷ್ಟ ಸಂಭವಿಸಿದೆ.
‘ಆರ್​ಆರ್​ಆರ್​’ ನಡುವೆ ತೂರಲೆತ್ನಿಸಿದ ‘ನಟ ಭಯಂಕರ’; ಕೊನೆಗೂ ಬೇಡ ಎಂದು ಸುಮ್ಮನಾದ್ನಂತೆ ‘ಒಳ್ಳೇ ಹುಡುಗ’!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + sixteen =
Remember me
