ಕರಾಚಿ:ಪಾಕಿಸ್ತಾನದಲ್ಲಿ ಹಿಂದು ವೈದ್ಯರೊಬ್ಬರ ಬರ್ಬರ ಹತ್ಯೆಯಾಗಿದೆ. ಮೃತರನ್ನು ಧರಮ್​ ದೇವ್​ ರಾಥಿ ಎಂದು ಗುರುತಿಸಲಾಗಿದ್ದು, ಅವರ ಕಾರು ಚಾಲಕನನ್ನು ಬಂಧಿಸಲಾಗಿದೆ.
ಧರಮ್​ ದೇವ್​ ಅವರು ಪಾಕಿಸ್ತಾನದ ಹೈದರಾಬಾದ್​ನಲ್ಲಿ ಖ್ಯಾತ ಚರ್ಮರೋಗ ವೈದ್ಯರಾಗಿದ್ದರು. ತಮ್ಮ ಚಾಲಕನಿಂದಲೇ ಮನೆಯಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದಾರೆ. ಖೈರ್​ಪುರ್​ನಲ್ಲಿರುವ ತನ್ನ ಮನೆಯಲ್ಲಿದ್ದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಮನೆಗೆ ಹೋಗುವಾಗ ಧರಮ್​ ದೇವ್​ ಮತ್ತು ಕಾರು ಚಾಲಕನ ನಡುವೆ ಮಾತಿನ ಚಕಮಕಿ ಆರಂಭವಾಯಿತು. ಮಾತಿಗೆ ಮಾತು ಬೆಳೆದು, ಜಗಳ ಅತಿರೇಕಕ್ಕೆ ಹೋಗಿ ತಾಳ್ಮೆ ಕಳೆದುಕೊಂಡ ಚಾಲಕ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಡಾಕ್ಟರ್​ ಮನೆಯಲ್ಲಿದ್ದ ಅಡುಗೆ ಭಟ್ಟ ಪೊಲೀಸರ ಮುಂದೆ ನೀಡಿದ ಹೇಳಿಕೆ ಆಧಾರದ ಮೇಲೆ ಚಾಲಕನನ್ನು ಬಂಧಿಸಲಾಗಿದೆ.
ಇದನ್ನೂ ಓದಿ:ಬೆಂಕಿ ಶಮನ ಕಾರ್ಯ ಬಿರುಸು, ಮೂರು ದಿನ ಕಳೆದರೂ ಆರದ ಕಾಡ್ಗಿಚ್ಚು, ಚಾರ್ಮಾಡಿ ಘಾಟ್‌ನಲ್ಲಿ ನೂರಾರು ಪ್ರಾಣಿ, ಪಕ್ಷಿಗಳು ಆಹುತಿ ಶಂಕೆ
ಕಾರಿನಲ್ಲಿ ಜಗಳವಾಡಿಕೊಂಡು ಮನೆಗೆ ಬಂದ ಚಾಲಕ, ಅಡುಗೆ ಕೋಣೆಗೆ ನುಗ್ಗಿ ಚಾಕು ತೆಗೆದುಕೊಂಡು ಡಾಕ್ಟರ್​ ಕತ್ತು ಸೀಳಿ ಪರಾರಿಯಾದನು ಎಂದು ಅಡುಗೆ ಭಟ್ಟ ಹೇಳಿಕೆ ನೀಡಿದ್ದಾನೆ. ಆರೋಪಿ ಕಾರು ಚಾಲಕನನ್ನು ಹನೀಫ್​ ಲೆಗ್ಹರಿ ಎಂದು ಗುರುತಿಸಲಾಗಿದೆ. ಖೈರ್​ಪುರ್​ನಲ್ಲಿರುವ ತನ್ನ ಮನೆಯಲ್ಲಿ ಇರುವಾಗ ಆತನನ್ನು ಪಾಕ್​ ಪೊಲೀಸರು ಬಂಧಿಸಿದ್ದಾರೆ.
ಘಟನೆ ನಡೆದ 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ ಪಾಕ್​ ಪೊಲೀಸರಿಗೆ ಪಾಕಿಸ್ತಾನದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಗೈನ್​ ಚಾಂದ್​ ಎಸ್ಸರಾಣಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಡಾಕ್ಟರ್​ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ.(ಏಜೆನ್ಸೀಸ್​)
ಮದ್ವೆಯಾದ ಮರುದಿನವೇ ಬೆಂಗ್ಳೂರು ಟ್ರಾಫಿಕ್​ನಲ್ಲಿ ಪತ್ನಿ ಬಿಟ್ಟು ಪತಿ ಎಸ್ಕೇಪ್​! ಕಾರಣ ಕೇಳಿ ನವವಿವಾಹಿತೆ ಶಾಕ್​

ಆಹಾರ ನುಂಗಲು ಕಷ್ಟಪಡುತ್ತಿದ್ದ ವ್ಯಕ್ತಿಯ ಅನ್ನನಾಳದಲ್ಲಿ ಸಿಕ್ತು 100ರೂ. 2 ನೋಟು!

ಭಾರತದ ಮೊದಲ ತೃತೀಯಲಿಂಗಿ ದಂಪತಿಯ ಮಗುವಿಗೆ ನಾಮಕರಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 7 =
Remember me
